Compaixão
A compaixão é o coração de Deus em ação. Ele é compassivo e misericordioso, tardio em irar-se e grande em amor. Somos chamados a refletir essa compaixão no mundo.
ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ,
ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.
ಆದರೆ ನೀವು ಯೆಹೋವ ದೇವರೇ, ಅನುಕಂಪವೂ ದಯೆಯೂ ಉಳ್ಳ ದೇವರು
ಮತ್ತು ದೀರ್ಘಶಾಂತರೂ ಪ್ರೀತಿಯಲ್ಲಿ ಸಮೃದ್ಧಿವಂತನೂ ಸತ್ಯತೆಯುಳ್ಳವರೂ ಆಗಿದ್ದೀರಿ.
ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು.
ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು.
ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ.
ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ.
ಅವು ಪ್ರತಿ ಮುಂಜಾನೆಯೂ ಹೊಸದಾಗಿರುವುವು.
ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.
"ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಸ್ತ್ರೀ
ತನ್ನ ಎದೆಹಾಲನ್ನು ಕುಡಿಯುವ ಕೂಸನ್ನು ಮರೆತಾಳೇ?
ಹೌದು, ಅವಳು ಮರೆಯಬಹುದು,
ಆದರೂ ನಾನು ನಿನ್ನನ್ನು ಮರೆಯುವುದಿಲ್ಲ.
ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿಕೊಂಡಿದ್ದೇನೆ.
ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
ಹೀಗಿರಲು ಯೆಹೋವ ದೇವರು ನಿಮಗೆ ಕೃಪೆಯನ್ನು ತೋರಿಸಬೇಕೆಂದು ಕಾದಿರುವನು.
ನಿಮ್ಮನ್ನು ಕರುಣಿಸಬೇಕೆಂದು ಉನ್ನತವಾಗಿ ಕಾಣಿಸಿಕೊಳ್ಳುವನು.
ಏಕೆಂದರೆ ಯೆಹೋವ ದೇವರು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ.
ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ,
ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ,
ನಿನ್ನ ಹಾಗೆ ಇರುವ ದೇವರು ಯಾರು?
ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ.
ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.
"ನಾನು ಯೆಹೂದ ವಂಶವನ್ನು ಬಲಪಡಿಸಿ, ಯೋಸೇಫ ಗೋತ್ರವನ್ನು ರಕ್ಷಿಸುವೆನು.
ಅವರನ್ನು ಕನಿಕರಿಸುವುದರಿಂದ
ಅವರನ್ನು ತಿರುಗಿ ಬರಮಾಡುವೆನು.
ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಇರುವರು.
ಏಕೆಂದರೆ ನಾನೇ ಅವರ ದೇವರಾದ ಯೆಹೋವ ದೇವರಾಗಿದ್ದು,
ಅವರಿಗೆ ಉತ್ತರಕೊಡುವೆನು.
"ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಪ್ರೀತಿಯನ್ನೂ, ಕನಿಕರವನ್ನೂ ತೋರಿಸಿರಿ; ವಿಧವೆಗೂ, ದಿಕ್ಕಿಲ್ಲದವನಿಗೂ, ಅನ್ಯನಿಗೂ, ಬಡವನಿಗೂ ಹಿಂಸಾಚಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ,’ " ಎಂಬುದು.
ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.
ನೀವು ದಯೆಯುಳ್ಳವರೂ ಮೃದು ಹೃದಯುಳ್ಳವರೂ ಆಗಿದ್ದು, ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರೊನ್ನಬ್ಬರನ್ನು ಕ್ಷಮಿಸಿರಿ.
ಒಳ್ಳೆಯದನ್ನು ಮಾಡಿದ್ದಕ್ಕಾಗಿ ಬಾಧೆ
ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರಿ, ಒಬ್ಬರಿಗೊಬ್ಬರೂ ಕರುಣೆಯುಳ್ಳವರಾಗಿದ್ದು ಸಹೋದರರಂತೆ ಪ್ರೀತಿಸಿರಿ. ಕನಿಕರವೂ ದೀನತೆ ಉಳ್ಳವರಾಗಿರಿ,
ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರ ಸಹೋದರಿಯರನ್ನು ನೋಡಿ, ಕರುಣೆ ತೋರಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ?
ಸಂತೈಸುವ ದೇವರು
ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣೆಯುಳ್ಳ ತಂದೆಯೂ ಎಲ್ಲರನ್ನೂ ಆದರಿಸುವ ದೇವರೂ ಆಗಿದ್ದಾರೆ. ದೇವರು ನಮಗಾಗುವ ಎಲ್ಲಾ ಬಾಧೆಗಳಲ್ಲಿ ನಮ್ಮನ್ನು ಸಂತೈಸುವವರಾಗಿದ್ದಾರೆ. ಇತರರು ಬಾಧೆಗಳನ್ನು ಅನುಭವಿಸುತ್ತಿರುವಾಗ, ನಾವು ಸಹ ದೇವರಿಂದ ಹೊಂದಿರುವ ಸಂತೈಸುವಿಕೆಯಿಂದ ಅವರನ್ನು ಸಂತೈಸಲು ನಮ್ಮನ್ನು ಶಕ್ತರನ್ನಾಗಿ ಮಾಡಿದ್ದಾರೆ.
ನಮಗಿರುವ ಮಹಾಯಾಜಕ ನಮ್ಮ ಬಲಹೀನತೆಗಳನ್ನು ಕುರಿತು ಅನುಕಂಪಗೊಳ್ಳದೆ ಇರುವವರಲ್ಲ. ಅವರು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪ ಮಾತ್ರ ಮಾಡಲಿಲ್ಲ.
ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ, ಅಳುವವರೊಂದಿಗೆ ಅಳಿರಿ.
ಅಂತಿಮ ವಂದನೆಗಳು
ಪ್ರಿಯರೇ, ಕಡೆಯ ಮಾತೇನೆಂದರೆ, ಆನಂದಪಡಿರಿ! ನಿಮ್ಮನ್ನು ಪೂರ್ಣ ಪುನಃಸ್ಥಾಪನೆಗಾಗಿ ಕ್ರಮಪಡಿಸಿಕೊಳ್ಳಿರಿ, ಉತ್ತೇಜನಗೊಳ್ಳಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ. ಆಗ ಪ್ರೀತಿ ಹಾಗೂ ಶಾಂತಿಯ ದೇವರು ನಿಮ್ಮ ಸಂಗಡ ಇರುವರು.