Dar
Dar é princípio do Reino de Deus. Jesus deu tudo — até a própria vida. A Bíblia nos ensina que é mais bem-aventurado dar do que receber, e que Deus ama ao que dá com alegria.
Dar com alegria
Deus ama ao que dá com alegria. Dai e dar-se-vos-á. O generoso prospera e quem abençoa será abençoado.
ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ.
ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ.
ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು.
ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು.
ಯಾರಿಗಾದರೂ ಕೊಡುವ ಮನಸ್ಸಿದ್ದರೆ, ಅದು ದೇವರ ದೃಷ್ಟಿಯಲ್ಲಿ ಕೊಟ್ಟಂತೆ ಪರಿಗಣಿಸಲಾಗುವುದು. ಏಕೆಂದರೆ ಕೊಡುವವರು ಎಷ್ಟು ಕೊಟ್ಟಿದ್ದಾರೆ ಎಂಬುದು ಪ್ರಾಮುಖ್ಯವಲ್ಲ, ಆದರೆ ಇಲ್ಲದಿರುವುದನ್ನು ದೇವರು ಬಯಸದೇ ಇರುವುದನ್ನು ಕೊಡಬಯಸುತ್ತಾರೆ.
ಕೊಡಿರಿ, ಆಗ ನಿಮಗೂ ಕೊಡುವರು. ಒಳ್ಳೆಯ ಅಳತೆಯಲ್ಲಿ ಒತ್ತಿ, ಕುಲುಕಿ, ಚೆಲ್ಲುವಂತೆ ಮನುಷ್ಯರು ನಿಮ್ಮ ಮಡಿಲಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು," ಎಂದರು.
Princípios de generosidade
Honra ao Senhor com as tuas primícias. Não negues o bem a quem o merece. A alma generosa prosperará.
ನಿನ್ನ ಆಸ್ತಿಯಿಂದಲೂ
ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.
ನಿನಗೆ ಶಕ್ತಿಯಿರುವಾಗಲೇ ಇತರರಿಗೆ ಉಪಕಾರಮಾಡು
ಒಳಿತು ಮಾಡುವುದನ್ನು ನಿನ್ನಲ್ಲಿಯೇ ಇಟ್ಟುಕೊಳ್ಳಬೇಡ.
ಉದಾರಿಯು ಅಭಿವೃದ್ಧಿ ಹೊಂದುವನು;
ಬೇರೆಯವರಿಗೆ ಚೈತನ್ಯ ಕೊಡುವವನು ಚೈತನ್ಯ ಹೊಂದುವನು.
ಕಾಣಿಕೆಯನ್ನು ಕೊಡುವವನಿಗೆ ಬಾಗಿಲು ತೆರೆಯುತ್ತದೆ;
ಅದು ದೊಡ್ಡವರ ಸನ್ನಿಧಾನಕ್ಕೂ ಅವನನ್ನು ಕರೆದುಕೊಂಡು ಹೋಗುತ್ತದೆ.
ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ;
ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.
ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು.
ಬಡವರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ಹಕ್ಕುಬಾಧ್ಯತೆಯನ್ನು ಕಾಪಾಡು.
ನನ್ನ ಆಲಯದಲ್ಲಿ ಆಹಾರ ಇರುವಂತೆ ಹತ್ತನೆಯ ಪಾಲುಗಳನ್ನೆಲ್ಲಾ ಬೊಕ್ಕಸಕ್ಕೆ ತನ್ನಿರಿ. ನಾನು ನಿಮಗೆ ಪರಲೋಕದ ಮಹಾದ್ವಾರಗಳನ್ನು ತೆರೆದು, ಸ್ಥಳ ಹಿಡಿಸಲಾರದಷ್ಟು ನಿಮಗೆ ಆಶೀರ್ವಾದವನ್ನು ಸುರಿಸದಿರುವೆನೋ, ಇಲ್ಲವೋ ಎಂಬುದನ್ನು ನೀವು ಈಗ ನನ್ನನ್ನು ಪರೀಕ್ಷಿಸಿ ನೋಡಿರಿ?" ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
O ensino de Jesus
Quando deres esmola, não toque a trombeta. A generosidade do coração importa mais que a grandeza do donativo.
"ಆದ್ದರಿಂದ ನೀನು ದಾನಧರ್ಮ ಮಾಡುವಾಗ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳ ಹಾಗೆ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ತುತೂರಿಯನ್ನು ಊದಿಸಬೇಡ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
ಆದರೆ ನೀನು ದಾನಧರ್ಮ ಮಾಡುವಾಗ, ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ತಿಳಿಯದಿರಲಿ. ಹೀಗೆ ನಿನ್ನ ದಾನಧರ್ಮವು ಗುಟ್ಟಾಗಿರುವಾಗ, ಅಂತರಂಗದಲ್ಲಿ ಮಾಡುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.
ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.
ಯೇಸು ಅವನಿಗೆ, "ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ, ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು; ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದು ಹೇಳಿದರು.
ನಿನ್ನಿಂದ ಕೇಳುವ ಪ್ರತಿಯೊಬ್ಬರಿಗೂ ಕೊಡು, ನಿನ್ನ ಸೊತ್ತನ್ನು ತೆಗೆದುಕೊಳ್ಳುವವನಿಂದ, ಅವುಗಳನ್ನು ತಿರುಗಿ ಕೇಳಬೇಡ.
ಯೆಹೋವ ದೇವರಲ್ಲಿ ಆನಂದವಾಗಿರು;
ಆಗ ಅವರು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವರು.
ದುಷ್ಟನು ಸಾಲ ಮಾಡಿ ಹಿಂದಿರುಗಿ ಕೊಡದೆ ಹೋಗುವನು.
ಆದರೆ ನೀತಿವಂತನು ಧಾರಾಳವಾಗಿ ಕೊಡುತ್ತಾನೆ.
"ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವುದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಏಕೆಂದರೆ ಸಮಸ್ತವೂ ನಿಮ್ಮಿಂದಲೇ.
ಇದಲ್ಲದೆ ಎಜ್ರನು ಅವರಿಗೆ, "ನೀವು ಹೋಗಿ ಒಳ್ಳೆಯ ಆಹಾರವನ್ನು ತಿಂದು, ಸಿಹಿಯಾದದ್ದನ್ನು ಕುಡಿಯಿರಿ, ತಮಗಾಗಿ ಸಿದ್ಧಮಾಡಿಕೊಳ್ಳದವರಿಗೆ ಒಂದು ಪಾಲನ್ನು ಕಳುಹಿಸಿಕೊಡಿರಿ. ಈ ದಿನವು ನಮ್ಮ ಯೆಹೋವ ದೇವರಿಗೆ ಪರಿಶುದ್ಧವಾಗಿದೆ. ನೀವು ವ್ಯಥೆಪಡಬೇಡಿರಿ. ಯೆಹೋವ ದೇವರ ಆನಂದವೇ ನಿಮ್ಮ ಬಲ," ಎಂದು ಹೇಳಿದನು.
ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ.