Dia dos avós
Os avós são tesouros vivos de sabedoria e fé. A Bíblia honra os mais velhos e celebra a transmissão de fé entre gerações — dos avós aos netos e destes aos que virão.
A bênção dos avós
A coroa dos velhos são os filhos dos filhos. A misericórdia de Deus é de geração em geração sobre os que o temem.
ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ;
ಮಕ್ಕಳ ಭೂಷಣವು ಅವರ ತಂದೆತಾಯಿಗಳೇ.
ಆದರೆ ಯೆಹೋವ ದೇವರ ಪ್ರೀತಿಯು
ಅವರಿಗೆ ಭಯಪಡುವವರ ಮೇಲೆ ಯುಗಯುಗಾಂತರಕ್ಕೂ ಇರುವುದು,
ಅವರ ನೀತಿಯು ಮಕ್ಕಳ ಮಕ್ಕಳಿಗೂ ನೆಲೆಸಿರುವುದು.
ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ;
ಆದರೆ ನೀತಿವಂತನು ಕೈಬಿಟ್ಟಿರುವುದನ್ನಾಗಲಿ
ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆ ಬೇಡುವುದನ್ನಾಗಲಿ ಎಂದೂ ನಾನು ನೋಡಲಿಲ್ಲ.
ದೇವರೇ ಒಂದು ತಲಾಂತರವು ಇನ್ನೊಂದು ತಲಾಂತರಕ್ಕೆ ನಿಮ್ಮ ಕೆಲಸಗಳನ್ನು ಪ್ರಕಟಿಸುತ್ತದೆ;
ಜನರು ನಿಮ್ಮ ಪರಾಕ್ರಮಗಳನ್ನು ತಿಳಿಸುತ್ತಾರೆ.
ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು.
ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು.
Força e fidelidade
Mesmo na velhice darão frutos. Os cabelos brancos são coroa de glória. Deus não abandona seus filhos na idade avançada.
ಮುದಿಪ್ರಾಯದಲ್ಲಿಯೂ ಫಲ ಕೊಡುವರು.
ಅವರು ಹಸಿರಾಗಿ ಶೋಭಿಸುವರು.
"ಯೆಹೋವ ದೇವರು ಯಥಾರ್ಥವಂತರೂ
ನನ್ನ ಬಂಡೆಯೂ ಆಗಿದ್ದಾರೆ. ಅವರಲ್ಲಿ ಅನೀತಿ ಇರುವುದಿಲ್ಲ,"
ಎಂದು ನೀತಿವಂತರು ಘೋಷಿಸುವರು.
ನರೆಗೂದಲು ಉಜ್ವಲ ಕಿರೀಟ,
ಅದು ನೀತಿಯ ಜೀವಿತದಲ್ಲಿ ಒದಗುತ್ತದೆ.
ನಿಮ್ಮ ಮುಪ್ಪಿನ ತನಕ ನಾನೇ ಆಧಾರ;
ನೆರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು;
ನಾನೇ ಉಂಟುಮಾಡಿದೆನು; ನಾನೇ ಹೊರುವೆನು;
ಹೌದು, ನಿಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುವೆನು.
ಯೌವನಸ್ಥರೋ ದಣಿದು ಬಳಲುವರು
ಮತ್ತು ತರುಣರು ಸಂಪೂರ್ಣವಾಗಿ ಬೀಳುವರು.
ಆದರೆ ಯೆಹೋವ ದೇವರನ್ನು ನಿರೀಕ್ಷಿಸುವವರೋ
ಹೊಸ ಬಲವನ್ನು ಹೊಂದುವರು.
ಅವರು ಹದ್ದುಗಳಂತೆ
ರೆಕ್ಕೆಗಳಿಂದ ಬೆಟ್ಟವನ್ನು ಏರುವರು.
ಅವರು ಓಡಿ ದಣಿಯರು. ನಡೆದು ಬಳಲರು.
ನಿಮ್ಮ ಕಣ್ಣುಗಳಿಂದ ನೋಡಿದ ಕಾರ್ಯಗಳನ್ನು ನೀವು ಮರೆಯದ ಹಾಗೆಯೂ, ನೀವು ಬದುಕುವ ದಿನಗಳೆಲ್ಲಾ ಅವು ನಿಮ್ಮ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು, ಕಾಪಾಡಿಕೊಳ್ಳಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ, ನಿಮ್ಮ ಮಕ್ಕಳ ಮಕ್ಕಳಿಗೂ ಬೋಧಿಸಿರಿ.