Irmãos de Jesus
Os irmãos de Jesus são mencionados nos Evangelhos. Embora inicialmente céticos sobre sua missão, alguns, como Tiago, tornaram-se líderes da igreja primitiva.
Menções nos Evangelhos
Jesus teve irmãos chamados Tiago, José, Simão e Judas. Eles conviveram com Ele na casa de Nazaré e participaram de sua vida pública.
ಈತನು ಬಡಗಿಯ ಪುತ್ರನಲ್ಲವೇ? ಮರಿಯಳೆಂಬುವಳು ಈತನ ತಾಯಿಯಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಎಂಬುವರು ಈತನ ತಮ್ಮಂದಿರಲ್ಲವೇ? ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?" ಎಂದು ಮಾತನಾಡಿಕೊಂಡರು.
ಕ್ರಿಸ್ತ ಯೇಸುವಿನ ತಾಯಿ ಮತ್ತು ಸಹೋದರರು
ಯೇಸು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ, ಅವರ ತಾಯಿ ಮತ್ತು ಸಹೋದರರು ಅವರೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡು, ಯೇಸುವನ್ನು ಕರೆಯಲು ಹೇಳಿ ಕಳುಹಿಸಿದರು. ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, "ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ," ಎಂದು ಹೇಳಿದರು.
ಅದಕ್ಕೆ ಯೇಸು, "ನನ್ನ ತಾಯಿ ಮತ್ತು ಸಹೋದರರು ಯಾರು?" ಎಂದು ಕೇಳಿದರು.
ಅನಂತರ ತಮ್ಮ ಸುತ್ತಲೂ ಕುಳಿತ್ತಿದ್ದವರನ್ನು ನೋಡಿ, "ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು! ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ," ಎಂದು ಹೇಳಿದರು.
ಯೇಸುವಿನ ಸಂಬಂಧಿಕರು
ಯೇಸುವಿನ ತಾಯಿ ಮತ್ತು ಸಹೋದರರು ಅವರಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಅವರ ಬಳಿಗೆ ಹೋಗಲಾರದೆ ಇದ್ದರು.
Da incredulidade à fé
Os irmãos de Jesus não criam nele inicialmente. Mas após a ressurreição, estavam entre os discípulos em oração.
ಆದ್ದರಿಂದ ಯೇಸುವಿನ ಸಹೋದರರು, "ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು. ಏಕೆಂದರೆ ಪ್ರಖ್ಯಾತನಾಗಲು ಬಯಸುವ ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದಾದರೆ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ," ಎಂದು ಯೇಸುವಿಗೆ ಹೇಳಿದರು. ಏಕೆಂದರೆ ಯೇಸುವಿನ ಸಹೋದರರು ಸಹ ಅವರನ್ನು ನಂಬಲಿಲ್ಲ.
ಯೇಸು ಆಕೆಗೆ, "ನನ್ನನ್ನು ಹಿಡಿಯಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಹೋಗಲಿಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವ ತಂದೆಯ ಬಳಿಗೆ ನಾನು ಹೋಗುತ್ತೇನೆ’ ಎಂದು ತಿಳಿಸು," ಎಂದರು.
ಅಲ್ಲಿ ಕೆಲವು ಮಹಿಳೆಯರು, ಯೇಸುವಿನ ತಾಯಿ ಮರಿಯಳು, ಯೇಸುವಿನ ಸಹೋದರರು, ಇವರೆಲ್ಲರು ನಿತ್ಯವೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿ ಸೇರುತ್ತಿದ್ದರು.
ಆದರೆ ಕರ್ತ ಯೇಸುವಿನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.
ದೇವರು ಸಮಸ್ತವನ್ನೂ ತಮಗೋಸ್ಕರವೂ ತಮ್ಮ ಮೂಲಕವೂ ಉಂಟುಮಾಡಿ ಬಹುಮಂದಿ ಮಕ್ಕಳನ್ನು ಮಹಿಮೆಗೆ ತರುವಂತೆ ಅವರ ರಕ್ಷಣಾ ನಾಯಕರಾದ ಕ್ರಿಸ್ತ ಯೇಸುವನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ದೇವರಿಗೆ ಯುಕ್ತವಾಗಿತ್ತು. ಪವಿತ್ರ ಮಾಡುವ ದೇವರೂ ಪವಿತ್ರರಾದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಯೇಸು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡದೆ,