Ler a Bíblia
Ler a Bíblia é essencial para a vida cristã. A Escritura é lâmpada para os pés, alimento para a alma e espada do Espírito. O cristão que lê a Bíblia é transformado pela Palavra.
A importância de ler
Meditar na Palavra dia e noite traz prosperidade e bom sucesso. Ler a Bíblia ilumina o entendimento e fortalece a fé.
ಈ ದೇವರ ನಿಯಮವು ನಿನ್ನ ಬಾಯಿಂದ ತೊಲಗಬಾರದು, ಅದರಲ್ಲಿ ಬರೆದಿರುವ ಪ್ರಕಾರವೇ ಕೈಗೊಂಡು ನಡೆಯುವ ಹಾಗೆ ಹಗಲುರಾತ್ರಿ ಅದನ್ನು ಧ್ಯಾನಿಸಬೇಕು. ಆಗ ನಿನ್ನ ಮಾರ್ಗವು ಸಮೃದ್ಧಿಯಾಗಿ ನೀನು ಜಯಶಾಲಿಯಾಗುವೆ.
ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ
ನನ್ನ ದಾರಿಗೆ ಬೆಳಕೂ ಆಗಿದೆ.
ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು;
ಅದು ಮುಗ್ಧರಿಗೆ ಅರಿವನ್ನು ನೀಡುವುದು.
ನಿಮ್ಮ ನಿಯಮವನ್ನು ನಾನು ಎಷ್ಟೋ ಪ್ರೀತಿಮಾಡುತ್ತೇನೆ!
ದಿನವೆಲ್ಲಾ ಅದನ್ನೇ ಧ್ಯಾನಿಸುತ್ತೇನೆ.
ನಿಮ್ಮ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು
ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ.
ನನ್ನ ಒಳನೋಟ ನನ್ನ ಬೋಧಕರೆಲ್ಲರಿಗಿಂತ ದೊಡ್ಡದಾಗಿದೆ.
ಏಕೆಂದರೆ ನಿಮ್ಮ ಶಾಸನಗಳು ನನ್ನ ಧ್ಯಾನವಾಗಿವೆ.
ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು?
ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ.
ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ;
ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ.
ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ
ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ.
A Escritura é inspirada
Toda a Escritura é útil para ensinar, corrigir e instruir em justiça. Examine as Escrituras — nelas encontramos a vida eterna.
ಪವಿತ್ರ ವೇದಗಳೆಲ್ಲವೂ ದೇವರ ಶ್ವಾಸದಿಂದಲೇ ಉಂಟಾದದ್ದು. ಅದು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ. ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
ನೀವು ಪವಿತ್ರ ವೇದದಲ್ಲಿ ನಿತ್ಯಜೀವ ದೊರೆಯುತ್ತದೆ ಎಂದು ನೆನಸಿ, ಅವುಗಳನ್ನು ಪರಿಶೋಧಿಸುತ್ತೀದ್ದಿರಿ. ಆ ಪವಿತ್ರ ವೇದವೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತದೆ.
ಪವಿತ್ರ ವೇದದಲ್ಲಿ ಮುಂಚಿತವಾಗಿ ಬರೆದಿರುವುದೆಲ್ಲವೂ ನಮ್ಮ ಬೋಧನೆಗಾಗಿಯೇ ಬರೆಯಲಾಗಿದೆ. ನಾವು ಆ ಬೋಧನೆಗಳ ಮೂಲಕ ಸಹನೆಯನ್ನೂ ಉತ್ತೇಜನೆಯನ್ನೂ ಹೊಂದಿಕೊಂಡು ನಿರೀಕ್ಷೆಯುಳ್ಳವರಾಗಿರಬೇಕೆಂದು ಬರೆಯಲಾಗಿದೆ.
ಈ ಪ್ರವಾದನೆಯ ವಾಕ್ಯಗಳನ್ನು ಓದುವಂಥವರೂ ಕೇಳುವಂಥವರೂ ಈ ಪ್ರವಾದನೆಯ ವಾಕ್ಯಗಳಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಏಕೆಂದರೆ ಸಮಯವು ಸಮೀಪವಾಗಿದೆ.
ನಾನು ಬರುವ ತನಕ ಓದುವುದರಲ್ಲಿಯೂ ಎಚ್ಚರಿಸುವುದರಲ್ಲಿಯೂ ಬೋಧಿಸುವುದರಲ್ಲಿಯೂ ಲಕ್ಷ್ಯಕೊಡು.
Estudar com diligência
Os bereanos eram mais nobres porque examinavam as Escrituras diariamente. O estudo dedicado da Bíblia produz maturidade espiritual.
ಬೆರೋಯದಲ್ಲಿದ್ದವರು ಥೆಸಲೋನಿಕದವರಿಗಿಂತ ಹೆಚ್ಚು ಸದ್ಗುಣವುಳ್ಳವರು; ಅವರು ವಾಕ್ಯವನ್ನು ಅತ್ಯಾಸಕ್ತಿಯಿಂದ ಸ್ವೀಕರಿಸಿ, ಇವರು ಹೇಳಿದ್ದು ಸರಿಯಾದದ್ದೋ ಏನೋ ಎಂದು ಅವರು ಪ್ರತಿದಿನವೂ ಪವಿತ್ರ ವೇದಗಳನ್ನು ಪರೀಕ್ಷಿಸುತ್ತಿದ್ದರು.
ಏಕೆಂದರೆ ಎಜ್ರನು ಯೆಹೋವ ದೇವರ ನಿಯಮವನ್ನು ಅಭ್ಯಾಸ ಮಾಡುವುದಕ್ಕೂ ಅದನ್ನು ಕೈಗೊಂಡು ನಡೆಯುವುದಕ್ಕೂ ಇಸ್ರಾಯೇಲರಿಗೆ ಅದರ ತೀರ್ಪುಗಳನ್ನು ಹಾಗೂ ನಿಯಮಗಳನ್ನು ಬೋಧಿಸುವುದಕ್ಕೂ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನು.
ಜನರು ಎದ್ದು ನಿಂತ ನಂತರ, ಅವರು ದೇವರ ನಿಯಮವನ್ನು ಸ್ಪಷ್ಟವಾಗಿ ಓದುತ್ತಾ, ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು.
ಅದಕ್ಕೆ ಯೇಸು, "ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದಿರಲ್ಲವೇ?
ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು. ಅವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ, ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯವಾಗಿ ಮಾತನಾಡಬೇಕು. ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು. ಅವುಗಳನ್ನು ನಿಮ್ಮ ಹಣೆಗೂ ಕಟ್ಟಿಕೊಳ್ಳಬೇಕು.
ಜ್ಞಾನದಿಂದ ಆಗುವ ನೈತಿಕ ಲಾಭಗಳು
ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ,
ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.
ನೀನು ಜ್ಞಾನಕ್ಕೆ ಕಿವಿಗೊಟ್ಟು,
ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,
ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು,
ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ,
ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,
ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ;
ದೇವರ ಅರಿವನ್ನು ಕಂಡುಕೊಳ್ಳುವೆ.
ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ;
ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.