Gravidez e maternidade
Gravidez e maternidade são bênçãos celebradas na Bíblia. Deus forma cada criança no ventre, cuida da mãe e da família, e abençoa a geração dos justos.
Filhos são herança do Senhor
Deus abençoa a fertilidade e o crescimento das famílias. Cada criança é obra de suas mãos, conhecida e amada antes mesmo de nascer.
ಎಲ್ಲಾ ಜನರಿಗಿಂತಲೂ ನೀವು ಆಶೀರ್ವಾದಕ್ಕೆ ಪಾತ್ರರಾಗಿರುವಿರಿ. ನಿಮ್ಮೊಳಗೆ ಸ್ತ್ರೀ ಪುರುಷರಲ್ಲಾಗಲಿ, ಹೆಣ್ಣು ಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವುದಿಲ್ಲ.
ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡು ಬಲಗೊಂಡರು, ಅದರಿಂದ ಆ ದೇಶವು ಅವರಿಂದ ತುಂಬಿತು.
ಅವರ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿಯಾಗಿರುವುದು;
ಯಥಾರ್ಥರ ಸಂತತಿಯು ಆಶೀರ್ವಾದ ಹೊಂದುವುದು.
ನನ್ನ ಅಂತರಾತ್ಮವನ್ನು ಉಂಟು ಮಾಡಿದವರು ನೀವೇ;
ನನ್ನ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವರು ನೀವೇ.
ನೀವು ನನ್ನನ್ನು ವಿಚಿತ್ರವಾಗಿಯೂ ವಿಸ್ಮಯವಾಗಿಯೂ ಸೃಷ್ಟಿಸಿದ್ದರಿಂದ
ನಾನು ನಿಮ್ಮನ್ನು ಸ್ತುತಿಸುತ್ತೇನೆ;
ನಿಮ್ಮ ಕೃತ್ಯಗಳು ಆಶ್ಚರ್ಯಕರವಾಗಿವೆ ಎಂದು,
ನಾನು ಪೂರ್ಣವಾಗಿ ತಿಳಿದಿದ್ದೇನೆ.
ನೀವು ನನ್ನನ್ನು ಮರೆಯಲ್ಲಿ ರೂಪಿಸಿದಾಗಲೂ,
ಭೂಗರ್ಭದಲ್ಲಿ ನನ್ನನ್ನು ರಚಿಸಿದಾಗಲೂ
ನನ್ನ ಅಸ್ಥಿಪಂಜರವು ನಿಮಗೆ ಮರೆಯಾಗಿರಲಿಲ್ಲ.
ನಾನು ಇನ್ನೂ ಭ್ರೂಣವಾಗಿರುವಾಗಲೇ ನಿಮ್ಮ ಕಣ್ಣುಗಳು ನನ್ನನ್ನು ನೋಡಿದವು;
ನೀವು ನನಗೆ ಅನುಮತಿಸಿರುವ ಪ್ರಥಮ ದಿನದಿಂದ ಕೊನೆಯದಿನದವರೆಗೆ
ನನ್ನ ಎಲ್ಲಾ ದಿನಗಳೂ ನಿಮ್ಮ ಪುಸ್ತಕದಲ್ಲಿ ಬರೆಯಲಾಗಿವೆ.
ಮಕ್ಕಳು ಯೆಹೋವ ದೇವರು ಕೊಟ್ಟ ಸೊತ್ತು.
ಗರ್ಭಫಲವು ದೇವರ ಬಹುಮಾನ.
ನಾನು ಪ್ರಸವಕ್ಕೆ ತಂದಮೇಲೆ
ಹೆರಿಗೆಯಾಗದಂತೆ ತಡೆಯುವೆನೋ?"
ಎಂದು ಯೆಹೋವ ದೇವರು ಹೇಳುತ್ತಾನೆ.
"ನಾನು ಪ್ರಸವಕ್ಕೆ ತಂದಮೇಲೆ, ಪ್ರಸವವಾಗದೆ ಇರಲು ಗರ್ಭ ಮುಚ್ಚಿಬಿಡುವೆನೇ?"
ಎಂದು ನಿನ್ನ ದೇವರು ಕೇಳುತ್ತಾನೆ.
Força e cuidado na gravidez
Deus dá forças à mulher grávida e a sustenta em cada etapa. Sua graça é suficiente e seu poder se aperfeiçoa na fraqueza.
ನನಗೆ ಶಕ್ತಿನೀಡುವ ಕ್ರಿಸ್ತ ಯೇಸುವಿನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.
ಅದಕ್ಕೆ ಕರ್ತ ಯೇಸು, "ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು," ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು.
ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ;
ಬೇಗ ಬಂದು ನನ್ನನ್ನು ಬಿಡಿಸಿರಿ;
ನನ್ನನ್ನು ರಕ್ಷಿಸುವುದಕ್ಕೆ ನನ್ನ ಆಶ್ರಯದ ಬಂಡೆಯೂ,
ಬಲವಾದ ಕೋಟೆಯೂ ಆಗಿರಿ.
ನನ್ನ ಹೃದಯವು ಕುಂದಿ ಹೋಗಿರಲಾಗಿ
ಭೂಮಿಯ ಅಂತ್ಯದಿಂದ ನಿಮಗೆ ಮೊರೆಯಿಡುತ್ತಿರುವೆನು.
ನನಗಿಂತ ಎತ್ತರವಾದ ಬಂಡೆಗೆ ನನ್ನನ್ನು ನಡೆಸಿರಿ.
ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು.
ಕುರಿಮರಿಗಳನ್ನು ಕೂಡಿಸಿ,
ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು,
ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.
ಯಾಕೋಬನ ಮನೆತನದವರೇ,
ಇಸ್ರಾಯೇಲ್ ಮನೆತನದಲ್ಲಿ ಉಳಿದಿರುವವರೇ,
ನಿಮ್ಮನ್ನು ಗರ್ಭದಲ್ಲಿ ಹೊತ್ತು,
ಹುಟ್ಟಿದಂದಿನಿಂದ ಪಾಲಿಸುತ್ತಿದ್ದಾತನ ಮಾತನ್ನು ಕೇಳಿರಿ.
ನಿಮ್ಮ ಮುಪ್ಪಿನ ತನಕ ನಾನೇ ಆಧಾರ;
ನೆರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು;
ನಾನೇ ಉಂಟುಮಾಡಿದೆನು; ನಾನೇ ಹೊರುವೆನು;
ಹೌದು, ನಿಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುವೆನು.
A bênção da maternidade
A Bíblia honra a maternidade como ministério sagrado. As mães são instrumentos de Deus para formar vidas e transmitir a fé.
ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆ, ಪ್ರೀತಿ ಹಾಗೂ ಪರಿಶುದ್ಧತೆಯಲ್ಲಿ ನೆಲೆಗೊಂಡಿದ್ದರೆ ಅವರು ಮಗುವನ್ನು ಹೆರುವುದರ ಮೂಲಕ ರಕ್ಷಣೆಹೊಂದುವರು.
ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು.
ಆಕೆಯ ಪತಿಯು ಸಹ ಆಕೆಯನ್ನು,
ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು, ಆಕೆಯು ಗರ್ಭಿಣಿಯಾಗಿ, ಕಾಯಿನನನ್ನು ಹೆತ್ತು, "ನಾನು ಯೆಹೋವ ದೇವರ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ," ಎಂದು ಹೇಳಿದಳು.
ಯೆಹೋವ ದೇವರು ಸಾರಳಿಗೆ ವಾಗ್ದಾನ ಮಾಡಿದಂತೆ ಆಕೆಗೆ ದಯೆತೋರಿಸಿದರು. ದೇವರು ಅಬ್ರಹಾಮನಿಗೆ ಹೇಳಿದ ಸಮಯದಲ್ಲಿ ಅವನು ಮುದುಕನಾಗಿದ್ದಾಗ, ಸಾರಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು.
ಆದರೆ ಆಕೆಯು ಬಂಜೆಯಾಗಿದ್ದುದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವ ದೇವರನ್ನು ಬೇಡಿಕೊಂಡನು. ಯೆಹೋವ ದೇವರು ಅವನ ಬೇಡಿಕೆಯನ್ನು ಪೂರೈಸಿದರು. ಆದ್ದರಿಂದ ಅವನ ಹೆಂಡತಿ ರೆಬೆಕ್ಕಳು ಗರ್ಭಿಣಿಯಾದಳು.
ಹನ್ನಳು ಗರ್ಭವತಿಯಾಗಿ, ಕಾಲವು ಪೂರ್ತಿಯಾದ ತರುವಾಯ ಮಗನನ್ನು ಹೆತ್ತು, "ನಾನು ಇವನಿಗಾಗಿ ಯೆಹೋವ ದೇವರನ್ನು ಬೇಡಿ ಪಡೆದುಕೊಂಡೆನು," ಎಂದು ಹೇಳಿ ಅವನಿಗೆ, ಸಮುಯೇಲ ಎಂದು ಹೆಸರಿಟ್ಟಳು.
Proteção divina
Deus protege a mãe e o bebê, guardando-os de todo mal. Ele acompanha cada momento com ternura e fidelidade.
ಮಹೋನ್ನತ ದೇವರ ಆಶ್ರಯದಲ್ಲಿ ವಾಸಿಸುವವರು
ಸರ್ವಶಕ್ತರ ನೆರಳಿನಲ್ಲಿ ವಿಶ್ರಮಿಸುವರು.
"ನನ್ನ ಆಶ್ರಯವೂ, ನನ್ನ ಕೋಟೆಯೂ,
ನಾನು ಭರವಸೆ ಇಡುವ ನನ್ನ ದೇವರೂ ಎಂದು ನಾನು ಯೆಹೋವ ದೇವರಿಗೆ ಹೇಳುವೆನು."
ಯೆಹೋವ ದೇವರು ಎಲ್ಲಾ ಕೇಡಿನಿಂದ ನಿಮ್ಮನ್ನು ಕಾಪಾಡುವರು,
ನಿಮ್ಮ ಪ್ರಾಣವನ್ನೂ ಕಾಪಾಡುವರು.
ಯೆಹೋವ ದೇವರು, ನೀವು ಹೋಗುವಾಗಲೂ ಬರುವಾಗಲೂ
ಇಂದಿಗೂ ಎಂದೆಂದಿಗೂ ನಿಮ್ಮನ್ನು ಕಾಪಾಡುವರು.
"ನಾನು ನಿನ್ನನ್ನು ತಾಯಿಯ ಗರ್ಭದಲ್ಲಿ ನಿರ್ಮಿಸುವುದಕ್ಕಿಂತ
ಮುಂಚೆಯೇ ನಿನ್ನನ್ನು ತಿಳಿದಿದ್ದೆನು.
ನೀನು ಹುಟ್ಟುವುದಕ್ಕಿಂತ ಮುಂಚೆ ನಿನ್ನನ್ನು ಪ್ರತಿಷ್ಠಿಸಿದ್ದೆನು;
ನಿನ್ನನ್ನು ಜನಾಂಗಗಳಿಗೆ ಪ್ರವಾದಿಯಾಗಿ ನೇಮಿಸಿದ್ದೇನೆ."
"ಜನರು ಜಗಳವಾಡುವಾಗ ಗರ್ಭಿಣಿಯಾದ ಸ್ತ್ರೀಗೆ ಏಟು ತಗಲಿ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು. ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನು, ಕಣ್ಣಿಗೆ ಕಣ್ಣನ್ನು,
"ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಸ್ತ್ರೀ
ತನ್ನ ಎದೆಹಾಲನ್ನು ಕುಡಿಯುವ ಕೂಸನ್ನು ಮರೆತಾಳೇ?
ಹೌದು, ಅವಳು ಮರೆಯಬಹುದು,
ಆದರೂ ನಾನು ನಿನ್ನನ್ನು ಮರೆಯುವುದಿಲ್ಲ.
Esperança e promessa
A maternidade é caminho de esperança. Como Sara, Ana e Isabel, as mães encontram na fé a força para aguardar as promessas de Deus.
ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನ ಮಾಡಿದ ದೇವರು ನಂಬಿಗಸ್ತರು ಎಂದೆಣಿಸಿ ತಾನು ಪ್ರಾಯಮೀರಿದವಳಾಗಿದ್ದರೂ ಗರ್ಭವತಿಯಾಗುವುದಕ್ಕೆ ಸಾಮರ್ಥ್ಯ ಹೊಂದಿ, ಒಂದು ಮಗುವನ್ನು ಹೆತ್ತಳು.
ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು," ಎಂದು ಹೇಳಿದಳು.
ಆಗ ಮರಿಯಳು ಹೀಗೆ ಹೇಳಿದ್ದು:
"ನನ್ನ ಪ್ರಾಣವು ಕರ್ತದೇವರನ್ನು ಸ್ತುತಿಸುತ್ತದೆ,
ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ.
ದೇವರು ತಮ್ಮ ದಾಸಿಯ
ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ.
ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು,
ಪರಾಕ್ರಮಿಯಾದ ದೇವರು ನನಗೆ ಮಹಾಕಾರ್ಯಗಳನ್ನು ಮಾಡಿದ್ದಾರೆ,
ಅವರ ಹೆಸರು ಪವಿತ್ರವಾದದ್ದು.
ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ,
ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ.
ಯೆಹೋವ ದೇವರನ್ನು ಸ್ತುತಿಸಿರಿ.
ಆಕೆಯನ್ನು ನಾನು ಆಶೀರ್ವದಿಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಆಕೆಯು ಜನಾಂಗಗಳ ತಾಯಿಯಾಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ರಾಷ್ಟ್ರಗಳೂ ಅರಸರೂ ಹುಟ್ಟುವರು," ಎಂದರು.
ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ
ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು.
ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು,
ಓಲಿವ್ ಮರಗಳ ಸಸಿಗಳ ಹಾಗೆ ಇರುವರು.