Ressurreição
A ressurreição é o pilar da fé cristã. Se Cristo não ressuscitou, é vã a nossa fé. Mas Ele venceu a morte, e essa é a garantia da nossa própria ressurreição.
Cristo ressuscitou
O túmulo está vazio! Os anjos declararam: 'Ele não está aqui; ressuscitou!' A ressurreição de Cristo é o fato mais transformador da história.
ಆ ದೂತನು ಸ್ತ್ರೀಯರಿಗೆ, "ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು. ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ.
ಅವನು ಅವರಿಗೆ, "ಭಯಪಡಬೇಡಿರಿ, ಶಿಲುಬೆಗೆ ಹಾಕಲಾದ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರೊ? ಅವರು ಜೀವಿತರಾಗಿ ಎದ್ದಿದ್ದಾರೆ! ಇಲ್ಲಿ ಇಲ್ಲ; ಅವರನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ.
ಅವರು ಇಲ್ಲಿಲ್ಲ; ಜೀವಂತರಾಗಿ ಎದ್ದಿದ್ದಾರೆ! ಅವರು ಇನ್ನೂ ಗಲಿಲಾಯದಲ್ಲಿದ್ದಾಗಲೇ: ‘ಮನುಷ್ಯಪುತ್ರನಾದ ನಾನು ಪಾಪಿಷ್ಠರ ಕೈಗೆ ಒಪ್ಪಿಸಿದವನಾಗಿ, ಶಿಲುಬೆಗೆ ಹಾಕಲಾಗಿ ಮೂರನೆಯ ದಿನದಲ್ಲಿ ತಿರುಗಿ ಜೀವಂತನಾಗಿ ಏಳುವೆನು,’ ಎಂದು ನಿಮಗೆ ಹೇಳಿದ್ದನ್ನು ನೀವು ನೆನಪುಮಾಡಿಕೊಳ್ಳಿರಿ," ಎಂದರು.
ಆಗ ಮೊದಲು ಸಮಾಧಿಗೆ ಬಂದಿದ್ದ ಆ ಇನ್ನೊಬ್ಬ ಶಿಷ್ಯನು ಸಹ ಪ್ರವೇಶಿಸಿ, ಕಂಡು ನಂಬಿದನು. ಯೇಸು ಸತ್ತವರೊಳಗಿಂದ ಪುನಃ ಎದ್ದು ಬರಬೇಕು ಎಂಬ ಪವಿತ್ರ ವೇದದ ವಾಕ್ಯವು ಅವರಿಗೆ ಇನ್ನೂ ತಿಳಿದಿರಲಿಲ್ಲ.
ಏಕೆಂದರೆ ನಾನು ಪಡೆದುಕೊಂಡಿದ್ದರಲ್ಲಿ ಬಹು ಪ್ರಾಮುಖ್ಯವಾದದ್ದನ್ನೇ ನಿಮಗೆ ಕೊಟ್ಟಿದ್ದೇನೆ. ಅದೇನೆಂದರೆ, ಪವಿತ್ರ ವೇದದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತರು, ಹೂಣಿಡಲಾದರು, ಪವಿತ್ರ ವೇದದ ಪ್ರಕಾರವೇ ಮೂರನೆಯ ದಿನದಲ್ಲಿ ಎದ್ದು ಬಂದರು.
Ressurreição e vida eterna
Jesus disse: 'Eu sou a ressurreição e a vida.' Quem crê nele viverá, mesmo que morra. A morte foi derrotada na cruz e no túmulo vazio.
ಯೇಸು ಆಕೆಗೆ, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಸತ್ತರೂ ಬದುಕುವರು. ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?" ಎಂದು ಕೇಳಿದ್ದಕ್ಕೆ,
ಏಕೆಂದರೆ ಒಬ್ಬ ಮನುಷ್ಯನ ಮೂಲಕ ಮರಣವು ಬಂದಂತೆಯೇ, ಒಬ್ಬ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವು ಸಹ ಬರುವುದು.
ಏಕೆಂದರೆ ಯೇಸು ಸತ್ತು ಪುನಃ ಜೀವಂತವಾಗಿ ಎದ್ದರೆಂದು ನಾವು ನಂಬಿದರೆ, ಅದರಂತೆ ಯೇಸುವಿನಲ್ಲಿ ನಿದ್ರೆಹೋದವರನ್ನು ಸಹ ದೇವರು ಅವರೊಡನೆ ಕರೆದುಕೊಂಡು ಬರುವರು.
ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು. ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು.
ನಾವು ಕ್ರಿಸ್ತ ಯೇಸುವಿನೊಂದಿಗೆ ಸೇರಿ ಅವರ ಮರಣದಲ್ಲಿ ಪಾಲುಗಾರರಾದರೆ, ಅವರ ಪುನರುತ್ಥಾನದಲ್ಲಿಯೂ ಪಾಲುಗಾರರಾಗುವೆವು. ನಮ್ಮ ಪಾಪದ ಶರೀರವು ನಾಶವಾಗಿ ನಾವು ಇನ್ನು ಮುಂದೆ ಎಂದಿಗೂ ಪಾಪಕ್ಕೆ ಗುಲಾಮರಾಗದಂತೆ, ನಮ್ಮ ಹಳೆಯ ಮನುಷ್ಯ ಸ್ವಭಾವ ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಯಿತು ಎಂದು ನಾವು ಬಲ್ಲೆವು.
Nossa esperança futura
A ressurreição de Cristo garante nossa esperança viva. O Deus de paz trouxe dos mortos o grande Pastor das ovelhas para nossa salvação.
ಸಜೀವ ನಿರೀಕ್ಷೆಗಾಗಿ ದೇವರಿಗೆ ಸ್ತೋತ್ರ
ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯೂ ದೇವರೂ ಆಗಿರುವವರಿಗೆ ಸ್ತೋತ್ರವಾಗಲಿ. ಅವರು ಕ್ರಿಸ್ತ ಯೇಸುವನ್ನು ತಮ್ಮ ಮಹಾ ಕರುಣಾನುಸಾರವಾಗಿ, ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಜೀವಕರವಾದ ನಿರೀಕ್ಷೆಗೆ ನಮ್ಮನ್ನು ತಿರುಗಿ ಹುಟ್ಟಿಸಿದ್ದಾರೆ.
ಈ ನೀರು ದೀಕ್ಷಾಸ್ನಾನವನ್ನು ಸೂಚಿಸುವಂತದ್ದಾಗಿದೆ. ಈ ದೀಕ್ಷಾಸ್ನಾನ ಕ್ರಿಸ್ತ ಯೇಸುವಿನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿಯು ಬೇಕೆಂದು ದೇವರನ್ನು ಬೇಡಿಕೊಳ್ಳುವಂಥದ್ದಾಗಿದೆ.
ಅಂತ್ಯಾಶೀರ್ವಾದ ಹಾಗೂ ಅಂತಿಮ ವಂದನೆಗಳು
ಕುರಿ ಹಿಂಡಿಗೆ ಮಹಾಕುರುಬ ಆಗಿರುವ ನಮ್ಮ ಕರ್ತ ಯೇಸುವನ್ನು ನಿತ್ಯಒಡಂಬಡಿಕೆಯ ರಕ್ತದ ಮೂಲಕ ಸಮಾಧಾನದ ದೇವರು ಸತ್ತವರೊಳಗಿಂದ ಜೀವಂತವಾಗಿ ಬರಮಾಡಿದರು. ನೀವು ದೇವರ ಚಿತ್ತಾನುಸಾರವಾಗಿ ಎಲ್ಲವನ್ನೂ ಮಾಡುವಂತೆ ನಿಮ್ಮನ್ನು ಸನ್ನದ್ಧರಾಗಿ ಮಾಡಲಿ. ಕ್ರಿಸ್ತ ಯೇಸುವಿನ ಶಕ್ತಿಯ ಮೂಲಕವಾಗಿ ಪ್ರತಿಯೊಂದು ಸತ್ಕಾರ್ಯಗಳನ್ನು ತಮಗೆ ಮೆಚ್ಚಿಕೆಯಾಗುವಂತೆ ನಿಮ್ಮ ಮೂಲಕವಾಗಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಯೇಸುವಿಗೆ ಮಹಿಮೆ ಉಂಟಾಗಲಿ. ಆಮೆನ್.
ಕ್ರಿಸ್ತನನ್ನೂ ಅವರ ಪುನರುತ್ಥಾನದ ಶಕ್ತಿಯನ್ನೂ ನಾನು ಅರಿತುಕೊಂಡು, ಕ್ರಿಸ್ತನ ಶ್ರಮೆಯಲ್ಲಿ ಪಾಲುಗೊಳ್ಳುವ ಅನ್ಯೋನ್ಯತೆಯನ್ನೂ ಅವರ ಮರಣದಲ್ಲಿ ಅವರ ಹಾಗೆ ಆಗುವುದನ್ನೂ ತಿಳಿಯುವುದೇ ನನ್ನ ಅಪೇಕ್ಷೆ.
ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಧನ್ಯರೂ ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಯೇಸುಕ್ರಿಸ್ತರೊಂದಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷಗಳ ಕಾಲ ಆಳುವರು.
ಇದಲ್ಲದೆ ಸತ್ತವರಾದ ಹಿರಿಯರೂ ಕಿರಿಯರೂ ಸಿಂಹಾಸನದ ಎದುರಿಗೆ ನಿಂತಿರುವುದನ್ನೂ ಕಂಡೆನು. ಆಗ ಪುಸ್ತಕಗಳನ್ನು ತೆರೆಯಲಾಯಿತು. ನಿತ್ಯಜೀವ ಪುಸ್ತಕವೆಂಬ ಇನ್ನೊಂದು ಪುಸ್ತಕವನ್ನು ತೆರೆಯಲಾಯಿತು. ಆ ಪುಸ್ತಕಗಳಲ್ಲಿ ಬರೆದಿದ್ದರ ಪ್ರಕಾರ, ಅವರವರ ಕ್ರಿಯೆಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು. ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು.
ಆದರೆ ನಾನು ಇಂದಿನವರೆಗೂ ದೇವರಿಂದ ಸಹಾಯವನ್ನು ಪಡೆದಿರುತ್ತೇನೆ. ಹೀಗೆ ನಾನು ಇಲ್ಲಿ ನಿಂತುಕೊಂಡು ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿ ಕೊಡುತ್ತಿದ್ದೇನೆ. ಪ್ರವಾದಿಗಳೂ ಮೋಶೆಯೂ ಮುಂದೆ ಏನು ಸಂಭವಿಸುತ್ತದೆಯೆಂದು ಹೇಳಿದ್ದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಹೇಳಲಿಲ್ಲ. ಕ್ರಿಸ್ತ ಯೇಸು ಶ್ರಮೆಹೊಂದಿ, ಸತ್ತವರೊಳಗಿಂದ ಜೀವಂತರಾಗಿ ಮೊದಲು ಎದ್ದು ತಮ್ಮ ಜನರಿಗೂ ಯೆಹೂದ್ಯರಲ್ಲದವರಿಗೂ ಬೆಳಕಿನ ಸಂದೇಶವನ್ನು ತರುವರು ಎಂದು ಪ್ರವಾದಿಗಳು ಮತ್ತು ಮೋಶೆಯು ಹೇಳಿದ್ದಾರೆ," ಎಂದನು.
"ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸುವರು. ಇದಲ್ಲದೆ ನನ್ನನ್ನು ಹಾಸ್ಯಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಶಿಲುಬೆಗೆ ಹಾಕುವುದಕ್ಕೂ ಯೆಹೂದ್ಯರಲ್ಲದವರ ಕೈಗೆ ಒಪ್ಪಿಸಿಕೊಡುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು," ಎಂದು ಹೇಳಿದರು.