Sabedoria
A sabedoria é um dos temas mais ricos da Bíblia. O temor do Senhor é seu princípio, e buscá-la vale mais que ouro ou prata. Deus promete dar sabedoria generosamente a quem pedir com fé.
O princípio da sabedoria
O temor do Senhor é o início de toda sabedoria verdadeira. Quem reverencia a Deus aprende a viver com discernimento e prudência.
ಯೆಹೋವ ದೇವರ ಭಯವೇ ಜ್ಞಾನದ ಮೂಲವಾಗಿದೆ.
ಆದರೆ ಮೂರ್ಖರು ಜ್ಞಾನವನ್ನೂ ಶಿಕ್ಷಣವನ್ನೂ ಅಸಡ್ಡೆ ಮಾಡುತ್ತಾರೆ.
ಯೆಹೋವ ದೇವರ ಭಯವೇ ಜ್ಞಾನಕ್ಕೆ ಮೂಲವು.
ಪರಿಶುದ್ಧರ ಪರಿಜ್ಞಾನವೇ ತಿಳುವಳಿಕೆಯಾಗಿದೆ.
ಯೆಹೋವ ದೇವರ ಭಯವೇ ಜ್ಞಾನವನ್ನು ಕಲಿಸುತ್ತದೆ.
ನಮ್ರತೆ ಗೌರವಕ್ಕೆ ಮೊದಲು ಬರುತ್ತದೆ.
ಯೆಹೋವ ದೇವರ ಭಯವು ಜ್ಞಾನದ ಮೂಲವು;
ಅವರ ಸೂತ್ರಗಳನ್ನು ಕೈಗೊಳ್ಳುವವರಿಗೆ ಒಳ್ಳೆಯ ತಿಳುವಳಿಕೆ ಉಂಟಾಗುವುದು;
ನಿತ್ಯ ಸ್ತೋತ್ರವು ದೇವರಿಗೆ ಸಲ್ಲಲಿ.
ಆದರೆ ಜ್ಞಾನವು ಎಲ್ಲಿ ದೊರಕುವುದು?
ಗ್ರಹಿಕೆ ಇರುವ ಸ್ಥಳ ಎಲ್ಲಿ?
ಜ್ಞಾನದ ಮೌಲ್ಯ ಯಾರಿಗೂ ಗೊತ್ತಿಲ್ಲ;
ಜೀವಿಸುವವರಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
ಸಾಗರ, "ಜ್ಞಾನವು ನನ್ನ ಹತ್ತಿರ ಇಲ್ಲ," ಎನ್ನುತ್ತದೆ;
ಸಮುದ್ರವು, "ಜ್ಞಾನವು ನನ್ನ ಬಳಿಯಲ್ಲಿ ಇಲ್ಲ," ಎನ್ನುತ್ತದೆ.
ಚೊಕ್ಕ ಬಂಗಾರಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲಾಗದು;
ಜ್ಞಾನದ ಬೆಲೆಗೆ ಬೆಳ್ಳಿಯನ್ನು ತೂಕಮಾಡಲಾಗದು.
ಜ್ಞಾನವನ್ನು ಓಫಿರಿನ ಬಂಗಾರಕ್ಕೂ,
ಅಮೂಲ್ಯವಾದ ಗೋಮೇಧಿಕಕ್ಕೂ, ಇಂದ್ರನೀಲಕ್ಕೂ ಬೆಲೆ ಕಟ್ಟಲಾಗದು.
ಬಂಗಾರವೂ, ಸ್ಪಟಿಕವೂ ಜ್ಞಾನಕ್ಕೆ ಸಮವಾಗಿರುವುದಿಲ್ಲ;
ಬಂಗಾರದ ಆಭರಣಗಳು ಸಹ ಜ್ಞಾನಕ್ಕೆ ಸಮವಲ್ಲ.
ಹವಳವೂ, ಸೂರ್ಯಕಾಂತ ಶಿಲೆಯೂ ಜ್ಞಾನಕ್ಕೆ ಹೋಲಿಸಲು ಅರ್ಹವಲ್ಲ;
ಜ್ಞಾನದ ಬೆಲೆಯು ಮಾಣಿಕ್ಯಗಳಿಗಿಂತ ಎಷ್ಟೋ ಶ್ರೇಷ್ಠ!
ಕೂಷ್ ದೇಶದ ಪುಷ್ಯರಾಗವು ಸಹ ಜ್ಞಾನಕ್ಕೆ ಹೋಲಿಸಲಾಗುವುದಿಲ್ಲ;
ಶುದ್ಧ ಬಂಗಾರದಿಂದಲೂ ಜ್ಞಾನವನ್ನು ಕೊಂಡುಕೊಳ್ಳಲಾಗದು.
ಆದರೆ ಜ್ಞಾನವು ಎಲ್ಲಿಂದ ಬರುವುದು?
ಗ್ರಹಿಕೆಯ ಸ್ಥಳವು ಎಲ್ಲಿ?
ಎಲ್ಲಾ ಜೀವಿಗಳ ಕಣ್ಣಿಗೂ ಜ್ಞಾನ ಮರೆಯಾಗಿದೆ;
ಆಕಾಶದ ಪಕ್ಷಿಗಳಿಗೂ ಅದು ಗೋಚರವಾಗದು.
ನಾಶಲೋಕವೂ ಮರಣವೂ, "ನಾವು ಜ್ಞಾನದ ಸುದ್ದಿಯನ್ನು
ನಮ್ಮ ಕಿವಿಗಳಿಂದ ಕೇಳಿದ್ದೇವೆ ಅಷ್ಟೇ," ಎನ್ನುತ್ತವೆ.
Sabedoria como dom de Deus
A verdadeira sabedoria vem do alto. Deus a concede generosamente a quem pede com fé, sem lançar em rosto a fraqueza humana.
ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.
ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.
ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.
ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ;
ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ;
ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು,
ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ;
ದೇವರ ಅರಿವನ್ನು ಕಂಡುಕೊಳ್ಳುವೆ.
ನನ್ನ ಪಿತೃಗಳ ದೇವರೇ, ನಾನು ನಿಮ್ಮನ್ನು ಕೊಂಡಾಡಿ,
ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಏಕೆಂದರೆ ನೀವು ನನಗೆ ಜ್ಞಾನವನ್ನೂ, ಬಲವನ್ನೂ ಕೊಟ್ಟು;
ನಾವು ನಿನ್ನಿಂದ ಅಪೇಕ್ಷಿಸಿಕೊಂಡದ್ದನ್ನು ನಮಗೆ ತಿಳಿಯಪಡಿಸಿದ್ದೀರಿ;
ನೀವು ಈಗ ನಮಗೆ ಅರಸನ ಕನಸನ್ನು ತಿಳಿಯಪಡಿಸಿದ್ದೀರಿ."
ಹೀಗೆಂದು ಹೇಳಿದನು:
"ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರವಾಗಲಿ!
ಏಕೆಂದರೆ ಜ್ಞಾನವೂ, ಬಲವೂ ಅವರದಾಗಿದೆ.
ಈ ನಾಲ್ಕು ಯೌವನಸ್ಥರಿಗೆ ದೇವರು ಎಲ್ಲಾ ವಿದ್ಯೆಯಲ್ಲಿಯೂ, ಜ್ಞಾನದಲ್ಲಿಯೂ, ತಿಳುವಳಿಕೆಯನ್ನೂ, ವಿವೇಕವನ್ನೂ ಕೊಟ್ಟರು. ದಾನಿಯೇಲನು ಸಕಲ ದರ್ಶನಗಳಲ್ಲಿಯೂ, ಕನಸುಗಳಲ್ಲಿಯೂ ತಿಳುವಳಿಕೆಯುಳ್ಳವನಾಗಿದ್ದನು.
A sabedoria do alto
A sabedoria que vem de Deus é pura, pacífica, amável, cheia de misericórdia e de bons frutos. Ela se opõe à sabedoria terrena e mundana.
ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.
ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.
ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.
ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಜ್ಞಾನದಿಂದ ಬರುವ ದೀನತ್ವದಲ್ಲಿ ತನ್ನ ಕ್ರಿಯೆಗಳನ್ನು ಒಳ್ಳೆಯ ಜೀವನದಿಂದ ತೋರಿಸಲಿ.
ಹೀಗಿದ್ದರೂ ಪರಿಪೂರ್ಣರಲ್ಲಿ ಜ್ಞಾನದ ಬಗ್ಗೆ ಮಾತನಾಡುತ್ತೇವೆ. ಅದು ಇಹಲೋಕದ ಜ್ಞಾನವಲ್ಲ. ಅಳಿದು ಹೋಗುವ ಇಹಲೋಕದ ಅಧಿಕಾರಿಗಳ ಜ್ಞಾನವೂ ಅಲ್ಲ. ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ.
ನಾವಾದರೋ ಶಿಲುಬೆಗೆ ಹಾಕಲಾದ ಕ್ರಿಸ್ತ ಯೇಸುವನ್ನೇ ಪ್ರಸಂಗಿಸುತ್ತಿದ್ದೇವೆ. ಇದು ಯೆಹೂದ್ಯರಿಗೆ ವಿಘ್ನವೂ ಯೆಹೂದ್ಯರಲ್ಲದವರಿಗೆ ಬುದ್ದಿಹೀನತೆಯಾಗಿದೆ. ಆದರೆ ದೇವರಿಂದ ರಕ್ಷಣೆಗೆ ಕರೆಹೊಂದಿದ ಯೆಹೂದ್ಯರಿಗಾಗಲಿ, ಯೆಹೂದ್ಯರಲ್ಲದವರಿಗಾಗಲಿ ಕ್ರಿಸ್ತ ಯೇಸು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾರೆ. ಏಕೆಂದರೆ ದೇವರ ಬುದ್ಧಿಹೀನತೆ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆ ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.
ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ.
ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ.
ಅವರು ಹೃದಯದಲ್ಲಿ ಉತ್ತೇಜನಗೊಂಡು, ಪ್ರೀತಿಯಲ್ಲಿ ಒಂದಾಗಿ, ದೇವರ ರಹಸ್ಯವಾಗಿರುವ ಕ್ರಿಸ್ತ ಯೇಸುವನ್ನು ತಿಳಿದುಕೊಳ್ಳುವಂತೆ ಪೂರ್ಣಜ್ಞಾನದ ಸರ್ವ ಐಶ್ವರ್ಯವನ್ನು ದೃಢವಾಗಿ ಹೊಂದಬೇಕೆಂಬುದೇ ನನ್ನ ಗುರಿಯಾಗಿದೆ. ಏಕೆಂದರೆ, ಜ್ಞಾನ ಮತ್ತು ತಿಳುವಳಿಕೆಯ ಎಲ್ಲಾ ನಿಕ್ಷೇಪಗಳೂ ಕ್ರಿಸ್ತ ಯೇಸುವಿನಲ್ಲಿಯೇ ಮರೆಯಾಗಿವೆ.
Direção e discernimento
Deus guia os humildes na justiça e ensina seu caminho aos mansos. Ele promete dirigir nossos passos quando confiamos nele de todo o coração.
ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು
ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ.
ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು.
ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು.
ನಿನ್ನ ದೃಷ್ಟಿಯಲ್ಲಿ ನೀನೇ ಜ್ಞಾನಿ ಎಂದು ಇರಬೇಡ;
ಯೆಹೋವ ದೇವರಿಗೆ ಭಯಪಟ್ಟು, ಕೆಟ್ಟದ್ದನ್ನು ತೊರೆದುಬಿಡು.
ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿನಗೆ ಬುದ್ಧಿ ಹೇಳಿ,
ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು;
ನನ್ನ ಮೆಚ್ಚುಗೆಯಿಂದ ನಿನ್ನನ್ನು ನಡೆಸುವೆನು.
ದೀನರನ್ನು ನ್ಯಾಯ ಮಾರ್ಗದಲ್ಲಿ ನಡೆಸಿ,
ದೀನರಿಗೆ ತಮ್ಮ ಮಾರ್ಗವನ್ನು ಬೋಧಿಸುತ್ತಾರೆ.
ಯೆಹೋವ ದೇವರೇ, ನಿಮ್ಮ ಮಾರ್ಗಗಳನ್ನು ನನಗೆ ತೋರಿಸಿರಿ;
ನಿಮ್ಮ ದಾರಿಗಳನ್ನು ನನಗೆ ಕಲಿಸಿರಿ.
ನಿಮ್ಮ ಸತ್ಯದಲ್ಲಿ ಮಾರ್ಗದರ್ಶನ ನೀಡಿ ನನಗೆ ಬೋಧಿಸಿರಿ;
ಏಕೆಂದರೆ ನೀವು ನನ್ನ ರಕ್ಷಕ ಆಗಿರುವ ದೇವರಾಗಿದ್ದೀರಿ;
ನಿಮ್ಮನ್ನು ನಾನು ದಿನವೆಲ್ಲಾ ನಿರೀಕ್ಷಿಸುತ್ತಿದ್ದೇನೆ.
ಯೆಹೋವ ದೇವರಲ್ಲಿ ಯಾರು ಹರ್ಷಿಸುತ್ತಾರೋ
ಅವರ ಹೆಜ್ಜೆಗಳನ್ನು ಸ್ಥಿರಪಡಿಸುವರು.
ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ವಾಕ್ಯವನ್ನು ತರಲಿ;
ಏಕೆಂದರೆ ನಿಮ್ಮಲ್ಲಿ ಭರವಸವಿಟ್ಟಿದ್ದೇನೆ;
ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸಿರಿ,
ಏಕೆಂದರೆ ನನ್ನ ಪ್ರಾಣವನ್ನು ನಿಮಗೇ ಒಪ್ಪಿಸಿದ್ದೇನೆ.
ನಿಮ್ಮ ಚಿತ್ತದಂತೆ ಮಾಡುವುದಕ್ಕೆ ನನಗೆ ಬೋಧಿಸಿರಿ,
ಏಕೆಂದರೆ ನೀವು ನನ್ನ ದೇವರು;
ನಿಮ್ಮ ಒಳ್ಳೆಯ ಆತ್ಮವು
ನನ್ನನ್ನು ಸಮಹಾದಿಯಲ್ಲಿ ನಡೆಸಲಿ.
ಯೆಹೋವ ದೇವರೇ, ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ಜೀವಿಸಮಾಡಿರಿ,
ನಿಮ್ಮ ನೀತಿಗನುಸಾರ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಬಿಡಿಸಿರಿ.
ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ;
ನನ್ನ ವಿರೋಧಿಗಳ ನಿಮಿತ್ತ
ಸಮಹಾದಿಯಲ್ಲಿ ನನ್ನನ್ನು ನಡೆಸಿರಿ.
A Palavra como fonte de sabedoria
A Palavra de Deus é lâmpada para os pés e luz para o caminho. Meditar nas Escrituras nos dá entendimento superior ao dos mestres.
ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ
ನನ್ನ ದಾರಿಗೆ ಬೆಳಕೂ ಆಗಿದೆ.
ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ
ನನ್ನ ದಾರಿಗೆ ಬೆಳಕೂ ಆಗಿದೆ.
ನಿಮ್ಮ ನಿಯಮದೊಳಗಿನ ಅದ್ಭುತಗಳನ್ನು ಕಾಣುವಂತೆ
ನನ್ನ ಕಣ್ಣುಗಳನ್ನು ತೆರೆಯಿರಿ.
ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು;
ಅದು ಮುಗ್ಧರಿಗೆ ಅರಿವನ್ನು ನೀಡುವುದು.
ದುಷ್ಟರ ಆಲೋಚನೆಯಂತೆ ನಡೆಯದೆ,
ಪಾಪಿಗಳ ಮಾರ್ಗದಲ್ಲಿ ನಿಲ್ಲದೆ,
ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ,
ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ,
ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವವರು ಧನ್ಯರು.
ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.
ನೀನು ನಡೆಯುವಾಗ ಅವು ನಿನಗೆ ಮಾರ್ಗದರ್ಶಿಯಾಗಿರುತ್ತವೆ.
ನೀನು ಮಲಗುವಾಗ ಅವು ನಿನ್ನನ್ನು ಕಾಯುತ್ತವೆ.
ನೀನು ಎಚ್ಚರಗೊಂಡಾಗ ಅವು ನಿನ್ನೊಂದಿಗೆ ಮಾತಾಡುತ್ತವೆ.
Sabedoria prática para o dia a dia
A sabedoria se aplica em cada decisão: nas finanças, nos relacionamentos, no trabalho e no uso do tempo. Vivamos como sábios, não como insensatos.
ಆದಕಾರಣ ನೀವು ಹೇಗೆ ಜೀವಿಸಬೇಕೆಂದು ಜಾಗರೂಕರಾಗಿರಿ. ಅಜ್ಞಾನಿಗಳಂತಿರದೆ, ಜಾಣರಾಗಿ ಜೀವಿಸಿರಿ. ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ಸರ್ವ ಸದಾವಕಾಶಗಳನ್ನೂ ಸದ್ವಿನಿಯೋಗಿಸಿಕೊಳ್ಳಿರಿ.
ಆದಕಾರಣ ನೀವು ಹೇಗೆ ಜೀವಿಸಬೇಕೆಂದು ಜಾಗರೂಕರಾಗಿರಿ. ಅಜ್ಞಾನಿಗಳಂತಿರದೆ, ಜಾಣರಾಗಿ ಜೀವಿಸಿರಿ. ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ಸರ್ವ ಸದಾವಕಾಶಗಳನ್ನೂ ಸದ್ವಿನಿಯೋಗಿಸಿಕೊಳ್ಳಿರಿ.
ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು;
ಕಡೆಯಲ್ಲಿ ನೀನು ಜ್ಞಾನಿಯಾಗುವೆ.
ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು;
ಕಡೆಯಲ್ಲಿ ನೀನು ಜ್ಞಾನಿಯಾಗುವೆ.
ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ;
ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ.
ಸಲಹೆಯಿಂದ ಯೋಜನೆಗಳು ನೆರವೆರುವವು;
ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.
ಖಂಡಿತವಾಗಿಯೂ ನಿಮಗೆ ಯುದ್ಧಮಾಡಲು ಮಾರ್ಗದರ್ಶನ ಬೇಕು,
ಬಹುಮಂದಿ ಸಲಹೆಗಾರರು ಇರುವಲ್ಲಿ ಜಯವಿರುವುದು.
ತಾಳ್ಮೆಯುಳ್ಳವನು ಬಹು ವಿವೇಕಿ,
ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು.
ಎಲ್ಲಿ ಗರ್ವವೋ ಅಲ್ಲಿ ಕಲಹ;
ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.
ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ;
ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
ಮೂರ್ಖನ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ,
ಆದರೆ ಜ್ಞಾನಿಯು ಸಲಹೆಗೆ ಕಿವಿಗೊಡುವನು.
ಗರ್ವ ಬಂದಾಗ ನಾಚಿಕೆಯೂ ಬರುತ್ತದೆ;
ಆದರೆ ದೀನತೆಯೊಂದಿಗೆ ಜ್ಞಾನ ಬರುವುದು.
ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು;
ಆದರೆ ಹರಟೆಯ ಮೂರ್ಖನು ಬೀಳುವನು.
ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ;
ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ;
ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ.
ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆನಿಸಿಕೊಳ್ಳುವನು;
ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿ ಎನಿಸಿಕೊಳ್ಳುವನು.
ಜ್ಞಾನಿಯು ಜ್ಞಾನೋಕ್ತಿಗಳನ್ನು ಕೇಳಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ;
ವಿವೇಚಿಸುವವರು ಮಾರ್ಗದರ್ಶನವನ್ನು ಹೊಂದಿಕೊಳ್ಳಲಿ.
ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
ನೀವು ಏನನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ. ಕರ್ತ ಯೇಸುವಿನಿಂದ ಬಾಧ್ಯತೆಯನ್ನು ಬಹುಮಾನವಾಗಿ ಹೊಂದುವಿರೆಂದು ತಿಳಿದಿದ್ದೀರಲ್ಲಾ. ಏಕೆಂದರೆ ನೀವು ಕರ್ತ ಆಗಿರುವ ಕ್ರಿಸ್ತ ಯೇಸುವನ್ನೇ ಸೇವೆಮಾಡುವವರಾಗಿದ್ದೀರಿ.
O valor da sabedoria
A sabedoria é mais preciosa que rubis. Quem a encontra, encontra a vida e alcança o favor do Senhor. Nada se compara a ela.
ಜ್ಞಾನವನ್ನು ಕಂಡುಕೊಳ್ಳುವವನು ಧನ್ಯನು,
ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.
ಏಕೆಂದರೆ ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು
ಯೆಹೋವ ದೇವರ ಕೃಪೆಯನ್ನು ಹೊಂದುವನು.
ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು!
ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವುದು ಎಷ್ಟೋ ಉತ್ತಮ.
ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ,
ಆದರೆ ಯೆಹೋವ ದೇವರು ಅವನ ಹೆಜ್ಜೆಗಳನ್ನು ಸ್ಥಾಪಿಸುತ್ತಾರೆ.
ಮನುಷ್ಯನಲ್ಲಿ ತನ್ನ ಹೃದಯದ ಯೋಜನೆಗಳು,
ಆದರೆ ಸರಿಯಾದ ಉತ್ತರಕೊಡುವ ಶಕ್ತಿ ಯೆಹೋವ ದೇವರಿಂದಲೇ ಬರುವವು.
ಧನವು ಹೇಗೋ
ಹಾಗೆ ಜ್ಞಾನವು ಆಶ್ರಯ.
ಆದರೆ ಜ್ಞಾನದ ಶ್ರೇಷ್ಠತೆ ಏನೆಂದರೆ,
ಅದು ಜ್ಞಾನಿಗೆ ಜೀವದಾಯಕ.
"ಹಿಂದಿನ ಕಾಲ ಈಗಿನ ಕಾಲಕ್ಕಿಂತ ಮೇಲಾಗಿರುವುದಕ್ಕೆ ಕಾರಣ ಏನು?" ಎಂದು ನೀನು ಕೇಳಬೇಡ.
ಇದು ಬುದ್ಧಿವಂತರು ಕೇಳುವ ಪ್ರಶ್ನೆಯಲ್ಲ.
ಏಕೆಂದರೆ ದೇವರು ಮೆಚ್ಚಿದವರಿಗೆ ಅವರು ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾರೆ. ಆದರೆ ದೇವರು ತಮಗೆ ಮೆಚ್ಚುಗೆಯಾದವನಿಗೆ ಕೊಡತಕ್ಕ ಐಶ್ವರ್ಯವನ್ನು ಕೂಡಿಸಿಡುವ ಪ್ರಯಾಸವನ್ನು ಮಾತ್ರ ಪಾಪಿಗೆ ಕೊಡುತ್ತಾರೆ. ಏಕೆಂದರೆ ಇದು ಸಹ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿರುವ ಸಮಾಧಿಯಲ್ಲಿ, ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.
A sabedoria e a soberania de Deus
Os caminhos de Deus são mais altos que os nossos. Sua sabedoria é insondável, eterna e infinitamente superior ao entendimento humano.
ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ,
ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ,
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ.
ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ,
ಎಂದು ಯೆಹೋವ ದೇವರು ಹೇಳುತ್ತಾರೆ.
ನಿನಗೆ ಗೊತ್ತಿಲ್ಲವೋ?
ನೀನು ಕೇಳಲಿಲ್ಲವೋ?
ಯೆಹೋವ ದೇವರು ನಿರಂತರವಾದ ದೇವರೂ,
ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವುದಿಲ್ಲ,
ಬಳಲುವುದಿಲ್ಲ, ಆತನ ತಿಳುವಳಿಕೆಯು
ಪರಿಶೋಧನೆಗೆ ಅಗಮ್ಯ.
ನಿನಗೆ ಗೊತ್ತಿಲ್ಲವೋ?
ನೀನು ಕೇಳಲಿಲ್ಲವೋ?
ಯೆಹೋವ ದೇವರು ನಿರಂತರವಾದ ದೇವರೂ,
ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವುದಿಲ್ಲ,
ಬಳಲುವುದಿಲ್ಲ, ಆತನ ತಿಳುವಳಿಕೆಯು
ಪರಿಶೋಧನೆಗೆ ಅಗಮ್ಯ.
ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವೆ ಎಂಬುದನ್ನು
ನಾನು ತಿಳಿಯುವ ಹಾಗೆ ಸಾರ್ವಭೌಮ ಯೆಹೋವ ದೇವರು ಶಿಕ್ಷಿತರ ನಾಲಿಗೆಯನ್ನು ನನಗೆ ಕೊಟ್ಟಿದ್ದಾರೆ.
ಆತನು ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ,
ಸುರಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಎಚ್ಚರಗೊಳಿಸುತ್ತಾರೆ.
ಸಹಾಯಕ್ಕಾಗಿ ಈಜಿಪ್ಟನ್ನು ಸೇರಿ, ಅಶ್ವಬಲವನ್ನು,
ಆಶ್ರಯಿಸುವವರಿಗೆ ಕಷ್ಟ!
ಏಕೆಂದರೆ ರಥಗಳು ಬಹಳವೆಂದೂ,
ಅವರ ನಂಬಿಕೆಯು ರಥಗಳ ಮೇಲೆ ಏಕೆಂದರೆ ಅವರು ಅನೇಕರು,
ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವುದಿಲ್ಲ.
ಇಲ್ಲವೆ ಯೆಹೋವ ದೇವರಿಂದ ಸಹಾಯವನ್ನು ಬಯಸುವುದಿಲ್ಲ.
ಆದರೂ ಅವರು ಜ್ಞಾನಿ, ಕೇಡನ್ನು ಬರಮಾಡುವರು.
ಅವರು ತಮ್ಮ ಮಾತನ್ನು ಹಿಂದೆಗೆಯುವುದಿಲ್ಲ.
ಆದರೆ ಕೆಡುಕರ ಮನೆತನಕ್ಕೂ,
ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.
ಈ ವಿವೇಕವು ಸಹ ಅತಿಶಯ ಆಲೋಚನಾಪರರೂ,
ಕಾರ್ಯಸಾಧಕ ಜ್ಞಾನ ಶ್ರೇಷ್ಠರೂ ಆಗಿರುವ
ಸೇನಾಧೀಶ್ವರ ಯೆಹೋವ ದೇವರಿಂದಲೇ ಹೊರಡುತ್ತದೆ.
ಅವನ ಮೇಲೆ ಯೆಹೋವ ದೇವರ ಆತ್ಮ,
ಜ್ಞಾನ ಮತ್ತು ವಿವೇಕದಾಯಕ ಆತ್ಮ,
ಸಮಾಲೋಚನೆ ಮತ್ತು ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ,
ತಿಳುವಳಿಕೆ ಮತ್ತು ಯೆಹೋವ ದೇವರ ಭಯದ ಆತ್ಮ,
ಅವರು ಯೆಹೋವ ದೇವರ ಭಯದಲ್ಲಿ ಆನಂದಿಸುವರು.
ಅವರು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ,
ತಮ್ಮ ಕಿವಿಗಳ ಕೇಳ್ವಿಕೆಯ ಪ್ರಕಾರವೂ ತೀರ್ಪು ಮಾಡುವುದಿಲ್ಲ.
ಯೆಹೋವ ದೇವರು ನಿನ್ನನ್ನು ನಿತ್ಯವೂ ನಡೆಸುತ್ತಾ,
ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ,
ನಿನ್ನ ಎಲುಬುಗಳನ್ನು ಬಲಪಡಿಸುವರು
ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಇರುವೆ.
ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ
ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು!
ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು!
ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!
ಶಕ್ತರಾಗಿರುವ ಒಬ್ಬರೇ ಜ್ಞಾನವಂತರಾಗಿರುವ ದೇವರಿಗೆ ಕ್ರಿಸ್ತ ಯೇಸುವಿನ ಮೂಲಕ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.
ದೇವರನ್ನು ಪ್ರೀತಿಸಿ ದೇವರ ಉದ್ದೇಶಕ್ಕೆ ಅನುಸಾರವಾಗಿ ಕರೆಹೊಂದಿದವರಿಗೆ ಸಕಲವನ್ನು ಒಳ್ಳೆಯದಕ್ಕಾಗಿಯೇ ದೇವರು ಮಾಡುವರು, ಎಂದು ನಮಗೆ ಗೊತ್ತಿದೆ.
ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ!
ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ,
ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.
ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು;
ಅವರ ವಿವೇಕಕ್ಕೆ ಎಣೆಯಿಲ್ಲ.
ನಿಮ್ಮ ಆಲೋಚನೆಯಂತೆ ನನ್ನನ್ನು ನಡೆಸಿ,
ತರುವಾಯ ಮಹಿಮೆಗೆ ನನ್ನನ್ನು ಸೇರಿಸುವಿರಿ.
ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ,
ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.
ನೀತಿವಂತನ ಬಾಯಿ ಜ್ಞಾನವನ್ನು ನುಡಿಯುವುದು;
ಅವನ ನಾಲಿಗೆ ನ್ಯಾಯವನ್ನು ಮಾತನಾಡುವುದು.
ಯೆಹೋವ ದೇವರಲ್ಲಿ ಆನಂದವಾಗಿರು;
ಆಗ ಅವರು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವರು.
ಯೆಹೋವ ದೇವರೇ, ನನ್ನ ವಿರೋಧಿಗಳ ನಿಮಿತ್ತ
ನಿಮ್ಮ ನೀತಿಯಲ್ಲಿ ನನ್ನನ್ನು ನಡೆಸಿರಿ;
ನಿಮ್ಮ ಮಾರ್ಗವನ್ನು ನನ್ನ ಮುಂದೆ ನೇರವಾಗಿ ಮಾಡಿರಿ.
ಜೀವಮಾರ್ಗವನ್ನು ನನಗೆ ತಿಳಿಯಪಡಿಸುವಿರಿ.
ನಿಮ್ಮ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ;
ನಿಮ್ಮ ಬಲಗಡೆಯಲ್ಲಿ ನಿತ್ಯಾನಂದವೂ ಇರುತ್ತದೆ.
ಅವರು ಅಳುತ್ತಾ ಬರುವರು.
ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು.
ಅವು ಎಡವದ ಸಮದಾರಿಯಲ್ಲಿ
ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು.
ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ.
ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.
ಓ ಯೆಹೋವ ದೇವರೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ,
ತನ್ನ ಹೆಜ್ಜೆ ನೆಟ್ಟಗೆ ಮಾಡುವುದು ನಡೆಯುವ ಮನುಷ್ಯನದ್ದಲ್ಲವೆಂದೂ ಬಲ್ಲೆನು.
ಆದರೆ ದೇವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ,
ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ,
ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ.
ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ;
ಏಕೆಂದರೆ ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.
ನ್ಯಾಯವನ್ನು ದುಷ್ಟರು ಗ್ರಹಿಸುವುದಿಲ್ಲ;
ಆದರೆ ಯೆಹೋವ ದೇವರನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ.
ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್.
ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. "ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು," ಎಂದು ಬರೆಯಲಾಗಿದೆ.
ಒಬ್ಬ ತಂದೆ ಮಕ್ಕಳಾಗಿರುವ ನಿಮಗೆ ಎಚ್ಚರಿಸಲಾದ ಮಾತನ್ನು ನೀವು ಮರೆತಿದ್ದೀರಿ. ಅದು,
"ನನ್ನ ಮಗನೇ, ಕರ್ತದೇವರ ಶಿಕ್ಷೆಯನ್ನು ಹಗುರವಾಗಿ ಎಣಿಸಬೇಡ.
ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
ಏಕೆಂದರೆ, ಕರ್ತದೇವರು ಯಾರನ್ನು ಪ್ರೀತಿಸುತ್ತಾರೋ ಅವರನ್ನು ಶಿಕ್ಷಿಸುತ್ತಾರೆ.
ತಾವು ಸ್ವೀಕರಿಸುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾರೆ!"
ಎಂಬುದಾಗಿದೆ.
ಕಡೆಯದಾಗಿ ಪ್ರಿಯರೇ, ಯಾವುದು ಸತ್ಯವೂ ಯಾವುದು ಮಾನ್ಯವೂ ಯಾವುದು ನ್ಯಾಯವೂ ಯಾವುದು ಶುದ್ಧವೂ ಯಾವುದು ಪ್ರೀತಿಕರವೂ ಯಾವುದು ಮನೋಹರವೂ ಯಾವುದು ಉತ್ತಮವಾದದ್ದೋ ಯಾವುದು ಕೀರ್ತಿಗೆ ಯೋಗ್ಯವೋ ಅವೆಲ್ಲವುಗಳನ್ನೇ ಆಲೋಚಿಸಿರಿ.
ಆದ್ದರಿಂದ, ನಾಳೆಯ ವಿಷಯವಾಗಿ ಚಿಂತಿಸಬೇಡಿರಿ. ನಾಳೆಯ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು, ಆ ದಿನದ ಪಾಡು ಆ ದಿನಕ್ಕೆ ಸಾಕು.
ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
"ಆದ್ದರಿಂದ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವ ಪ್ರತಿಯೊಬ್ಬನೂ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಸಮಾನ.
ಏಕೆಂದರೆ ನಿಮ್ಮ ವಿರೋಧಿಗಳು ಸಹ ಪ್ರತಿವಾದಿಸಲಾಗದ ಇಲ್ಲವೆ ವಿರೋಧಿಸಲಾಗದ ಮಾತನ್ನೂ ಜ್ಞಾನವನ್ನೂ ನಾನು ನಿಮಗೆ ಕೊಡುವೆನು.
ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ಆದರೆ ನೀತಿಯ ತೀರ್ಪನ್ನು ಮಾಡಿರಿ," ಎಂದರು.
ಯೆಹೋವ ದೇವರು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದರು,
ತಮ್ಮ ತಿಳುವಳಿಕೆಯ ಮೂಲಕ ಅವರು ಆಕಾಶಗಳನ್ನು ಸ್ಥಿರಪಡಿಸಿದರು.
ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ?
ದೀರ್ಘಾಯುಷ್ಯರಲ್ಲಿ ತಿಳುವಳಿಕೆಯನ್ನು ತರುವುದಿಲ್ಲವೋ?
"ಜ್ಞಾನವೂ, ಶಕ್ತಿಯೂ ದೇವರಲ್ಲಿವೆ;
ಸಮಾಲೋಚನೆಯೂ, ಗ್ರಹಿಕೆಯೂ ದೇವರವೇ.
ಅದಕ್ಕೆ ಯೋಬನು ಉತ್ತರಿಸುತ್ತಾ ಇಂತೆಂದನು:
"ನಿಜಕ್ಕೂ, ಇದು ಸತ್ಯ ಎಂದು ಬಲ್ಲೆನು;
ಆದರೆ ಮನುಷ್ಯರು ದೇವರ ಮುಂದೆ ತಮ್ಮ ಮುಗ್ಧತೆಯನ್ನು ಪ್ರಮಾಣಿಕರಿಸುವುದು ಹೇಗೆ?
ದೇವರ ಸಂಗಡ ವ್ಯಾಜ್ಯವಾಡಲು ಮನುಷ್ಯನು ಬಯಸಿದರೂ,
ದೇವರ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲಾರನು.
ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ;
ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
ಮನುಷ್ಯನೇ, ಒಳ್ಳೆಯದೇನೆಂದು ನಿನಗೆ ದೇವರು ತೋರಿಸಿದ್ದಾರೆ.
ಹೌದು, ನ್ಯಾಯವನ್ನು ಕೈಗೊಳ್ಳುವದೂ ಕರುಣೆಯನ್ನು ಪ್ರೀತಿಸುವುದೂ
ನಿನ್ನ ದೇವರ ಮುಂದೆ ನಮ್ರನಾಗಿ ನಡೆದುಕೊಳ್ಳುವದೂ
ಇದನ್ನೇ ಹೊರತು ಯೆಹೋವ ದೇವರು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುತ್ತಾರೆ?
"ನೀವು ಮಾಡುವುದನ್ನು ನೋಡಿಕೊಳ್ಳಿರಿ. ನೀವು ಮನುಷ್ಯರಿಗೋಸ್ಕರವಲ್ಲ, ನ್ಯಾಯತೀರಿಸುವ ಕಾರ್ಯದಲ್ಲಿ ನಿಮ್ಮ ಸಂಗಡ ಇರುವ ಯೆಹೋವ ದೇವರಿಗೋಸ್ಕರ ನ್ಯಾಯ ತೀರಿಸುತ್ತೀರಿ.
ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ಅದು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ.