20 ಮಂಜೆ ಪೈಲ್ಯಾ ಕಾಲಾತ್ ನೊಹಾನಿ ವ್ಹಡಿ ಬ್ಯಾಂದ್ತಾನಾ ದೇವಾನಿ ಖುಬ್ ಥಂಡ್ಪನಾನಿ ರ್ಯಾಕ್ಲ ತವಾ ತ್ಯಂಚಾನಿ ತ್ಯಚ಼ ಐಕ್ಲನಾಹಿ. ತೆ ವ್ಹಡಿತ್ ಆಸ್ಲ್ಯಾಲಿ ಆಟ್ ಲೊಕ ತ್ಯವ್ಡಿಸ್ ಪಾನ್ಯಾತ್ನಿ ರಾಯ್ಲಿತ. 21 ತ್ಯಾ ಪಾನ್ಯಾಚಾ಼ ಬಾಪ್ತಿಸ್ಮಾ ಯೇಸು ಕ್ರಿಸ್ತಾಚಾ ಪುನ್ರುತ್ಥಾನಾಸ್ಲಾಗುನ್ ಆತಾ ಆಮಾನಾ ರ್ಯಾಕ್ತ. ತ್ಯ ಆಂಗಾವ್ಲಾ ಮೋಳ್ ಗಾಲ್ನಾರ ನವ್ಹ. ಫನ್ ಚಾ಼ಂಗ್ಲಿ ಮನಾಚಿ ಸಾಕ್ಷಿ ವ್ಹಯಿ ಮನ್ಹುನ್ ದೇವಾಪ ಮಾಗಾಚ಼ ಜಾ಼ಲ್ಯಾ. 22 ತ್ಯೊ ಸ್ವರ್ಗಾತ್ ಜಾ಼ವುನ್ ದೇವಾಚೆ ಉಜ಼ವ್ಯಾಂಗ್ನಿ ಹಾ, ದೇವ್ ದುತ್, ಅಧಿಕಾರಿ ಆನಿ ಬಳ ತ್ಯಚಾ ತಾಬ್ಯಾತ್ ಹಾತ.