Pular para o conteúdo
Publicidade

1 ಕೊರಿಂಥದವರಿಗೆ 12:1-7

ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತದ್ದು

1 ಸಹೋದರರೇ12:1 1 ಕೊರಿ 14:1 ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳಿವಳಿಕೆಯಿರಬೇಕೆಂದು ನಾನು ಅಪೇಕ್ಷಿಸುತ್ತೇನೆ. 2 12:2 ಎಫೆ 2:11-12, 1 ಪೇತ್ರ. 4:3ನೀವು ಅನ್ಯಜನರಾಗಿದ್ದಾಗ 12:2 ಹಬ 2:18-19, ಕೀರ್ತ 115:5ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ. 3 ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. 12:3 1 ಯೋಹಾ 4:2-3ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ "ಯೇಸುವನ್ನು ಶಾಪಗ್ರಸ್ತನೆಂದು" ಹೇಳುವುದಿಲ್ಲ. ಮತ್ತು 12:3 ಯೋಹಾ 15:26, ಮತ್ತಾ 16:17ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ "ಯೇಸುವನ್ನು ಕರ್ತನೆಂದು" ಹೇಳಲಾರನು.

4 12:4 ರೋಮಾ. 12:6: ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ 12:4 ಎಫೆ 4:4-6ದೇವರಾತ್ಮನು ಒಬ್ಬನೇ. 5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ. 6 12:6 ರೋಮಾ. 12:7; ಎಫೆ 4:11:ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ. 7 ಆದರೆ 12:7 ಎಫೆ 4:7, ರೋಮಾ. 12:3ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.

Estes versículos te tocaram? Ore agora!

+581 estão orando agora.

Junte-se à corrente de oração.