7 ಆದರೆ 12:7 ಎಫೆ 4:7, ರೋಮಾ. 12:3ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ. 8 ಒಬ್ಬನಿಗೆ ದೇವರಾತ್ಮನ ಮೂಲಕ 12:8 1 ಕೊರಿ 2:6-7ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು 9 ಒಬ್ಬನಿಗೆ ಆ ಆತ್ಮನಿಂದಲೇ 12:9 1 ಕೊರಿ 13:2, 2 ಕೊರಿ 4:13ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ 12:9 1 ಕೊರಿ 12:28-30ನಾನಾ ರೋಗಗಳನ್ನು ವಾಸಿಮಾಡುವ ವರವು, 10 ಮತ್ತೊಬ್ಬನಿಗೆ 12:10 1 ಕೊರಿ 12:28-29ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ 12:10 1 ಕೊರಿ 13:2,8; 14:1ಪ್ರವಾದನೆಯ ವರವು, ಒಬ್ಬನಿಗೆ 12:10 1 ಕೊರಿ 14:29, 1 ಯೋಹಾ 4:1ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ 12:10 1 ಕೊರಿ 12:30, 14:26ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ. 11 ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.
Publicidade