11 ಯೆಹೋವನೇ, ಎಲ್ಲಾ ಮಹಿಮೆ, ವೈಭವ, ಪರಾಕ್ರಮ, ಪ್ರಭಾವ, ಪ್ರತಾಪ, ಪ್ರತಿಭೆ ಎಲ್ಲವೂ ನಿನ್ನವೆ. ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ ರಾಜ್ಯವು ನಿನ್ನದು. ನೀನು ಮಹೋನ್ನತನಾಗಿ ಸರ್ವವನ್ನು ಆಳುವವನಾಗಿರುತ್ತೀ. 12 ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ. ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ಮಹಿಮೆಗೂ, ಶಕ್ತಿಗೂ ನೀನೇ ಮೂಲನು. 14 ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು. 15 ನಾವು ನಿನ್ನ ದೃಷ್ಟಿಯಲ್ಲಿ ಪರದೇಶಿಗಳೂ, ನಮ್ಮ ಪೂರ್ವಿಕರೆಲ್ಲರಂತೆ ಪ್ರವಾಸಿಗಳೂ ಆಗಿದ್ದೇವೆ. ನಮ್ಮ ಆಯುಷ್ಕಾಲವು ನೆರಳಿನಂತಿದೆ. ನಮಗೆ ಯಾವ ನಿರೀಕ್ಷೆಯೂ ಇಲ್ಲ.
1 ಪೂರ್ವಕಾಲವೃತ್ತಾಂತ 29:11,12,14,15
Em outras traduções
- OKCV Kannada Contemporary Version
11 ಯೆಹೋವ ದೇವರೇ, ಮಹತ್ವವೂ, ಪರಾಕ್ರಮವೂ,
ಮಹಿಮೆಯೂ, ಜಯವೂ, ವೈಭವವೂ ನಿಮ್ಮವೇ.
ಆಕಾಶಗಳಲ್ಲಿಯೂ, ಭೂಮಿಯಲ್ಲಿಯೂ ಇರುವುದೆಲ್ಲಾ ನಿಮ್ಮದೇ.
ಯೆಹೋವ ದೇವರೇ, ರಾಜ್ಯವು ನಿಮ್ಮದು.
ನೀವು ಸಮಸ್ತಕ್ಕೂ ತಲೆಯಾಗಿ ಉನ್ನತರು.
12 ಐಶ್ವರ್ಯವೂ, ಘನವೂ ನಿಮ್ಮ ಬಳಿಯಿಂದ ಬರುತ್ತವೆ.
ನೀವು ಸಮಸ್ತವನ್ನು ಆಳಿಕೆಮಾಡುವವರು.
ಶಕ್ತಿಯೂ, ಪರಾಕ್ರಮವೂ ನಿಮ್ಮ ಕೈಯಲ್ಲಿ ಇವೆ.
ಎಲ್ಲರಿಗೂ ಉನ್ನತಿಯನ್ನೂ, ಬಲವನ್ನೂ ಕೊಡುವುದು ನಿಮ್ಮ ಕೈಯಲ್ಲಿ ಇದೆ.
14 "ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವುದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಏಕೆಂದರೆ ಸಮಸ್ತವೂ ನಿಮ್ಮಿಂದಲೇ. 15 ನಿಮ್ಮ ಕೈಯಿಂದಲೇ ನಿಮಗೆ ಅರ್ಪಿಸಿದೆವು. ಏಕೆಂದರೆ ನಾವು ನಿಮ್ಮ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ, ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಇವೆ; ನಿರೀಕ್ಷೆಯು ಇಲ್ಲ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.