Pular para o conteúdo
Publicidade

1 ಸಮುವೇಲನು 1:26-28

IRVKAN Indian Revised Version (IRV) - Kannada - 2019

26 ಹನ್ನಳು ಏಲಿಗೆ "ಸ್ವಾಮೀ, ನಿನ್ನ ಜೀವದಾಣೆ; ಮೊದಲು ಯೆಹೋವನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ, ಇಲ್ಲಿ ನಿನ್ನ ಹತ್ತಿರ ನಿಂತಿದ್ದ ಸ್ತ್ರೀಯು ನಾನೇ. 27 ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ; 28 ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು" ಎಂದು ಹೇಳಿದಳು. ಆ ಮೇಲೆ ಅವರು ಶಿಲೋವಿನಲ್ಲಿ ಯೆಹೋವನನ್ನು ಆರಾಧಿಸಿದರು.

Em outras traduções

  1. OKCV Kannada Contemporary Version

    26 "ನನ್ನ ಒಡೆಯನೇ, ನಿನ್ನ ಪ್ರಾಣದ ಸಾಕ್ಷಿ, ಇಲ್ಲಿ ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, ಇಲ್ಲಿ ನಿನ್ನ ಬಳಿಯಲ್ಲಿ ನಿಂತಿದ್ದ ಸ್ತ್ರೀಯು ನಾನೇ. ಈ ಮಗುವಿಗೋಸ್ಕರ ಪ್ರಾರ್ಥನೆ ಮಾಡಿದೆನು. 27 ನಾನು ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದನ್ನು ಅವರು ನನಗೆ ಕೊಟ್ಟರು. 28 ಆದ್ದರಿಂದ ನಾನು ಅವನನ್ನು ಯೆಹೋವ ದೇವರಿಗೆ ಒಪ್ಪಿಸಿದ್ದೇನೆ. ಅವನು ಜೀವಿಸಿರುವವರೆಗೆ ಯೆಹೋವ ದೇವರಿಗೆ ಸಮರ್ಪಿತನಾಗಿರುವನು," ಎಂದಳು. ಆಮೇಲೆ ಅವರೆಲ್ಲರೂ ಅಲ್ಲಿ ಯೆಹೋವ ದೇವರನ್ನು ಆರಾಧಿಸಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.