Pular para o conteúdo
Publicidade

1 ಸಮುವೇಲನು 17:34-36

IRVKAN Indian Revised Version (IRV) - Kannada - 2019

34 ಆಗ ದಾವೀದನು ಅವನಿಗೆ, "ನಿನ್ನ ಸೇವಕನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿರುವಾಗ ಸಿಂಹವಾಗಲಿ, ಕರಡಿಯಾಗಲಿ ಹಿಂಡಿನಲ್ಲಿನ ಕುರಿಮರಿಯನ್ನು ಹಿಡಿದುಕೊಂಡು ಹೋಗಲು ಬಂದರೆ 35 ನಾನು ಒಡನೇ ಬೆನ್ನಟ್ಟಿ, ಅದನ್ನು ಹೊಡೆದು, ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬೀಳಲು ಬಂದಾಗ ಅದರ ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು. 36 ನಿನ್ನ ಸೇವಕನಿಂದ ಕೊಲ್ಲಲ್ಪಟ್ಟ ಸಿಂಹಕ್ಕೂ, ಕರಡಿಗೂ ಆದ ಗತಿಯೇ ಜೀವಸ್ವರೂಪನಾದ ದೇವರ ಸೈನ್ಯವನ್ನು ನಿಂದಿಸುವಂಥ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು.

Em outras traduções

  1. OKCV Kannada Contemporary Version

    34 ದಾವೀದನು ಸೌಲನಿಗೆ, "ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿರುವ ಕುರಿಮರಿಯನ್ನು ಹಿಡಿದವು. 35 ಆಗ ನಾನು ಅದರ ಹಿಂದೆ ಹೋಗಿ, ಅದನ್ನು ಹೊಡೆದುಬಿಟ್ಟು, ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂದಿರುಗಿ ಬಿದ್ದಾಗ, ನಾನು ಅದರ ಗಡ್ಡವನ್ನು ಹಿಡಿದು, ಹೊಡೆದು ಕೊಂದುಹಾಕಿದೆನು. 36 ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ, ಆ ಕರಡಿಯನ್ನೂ ಕೊಂದುಬಿಟ್ಟೆನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸಿದ್ದರಿಂದ, ಅವುಗಳಲ್ಲಿ ಒಂದರ ಹಾಗೆ ಇರುವನು," ಎಂದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.