4 ಫಿಲಿಷ್ಟಿಯರ ಪಾಳೆಯದಿಂದ 17:4 ಯೆಹೋ. 11:22.ಗತ್ ಊರಿನವನಾದ 17:4 2 ಸಮು 21:19. ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.
33 ಸೌಲನು ಅವನಿಗೆ, "ಅವನೊಡನೆ ಕಾದಾಡಲಾರೆ, ನೀನು ಇನ್ನೂ ಹುಡುಗನು ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು" ಎಂದು ಹೇಳಿದನು. 37 17:37 2 ತಿಮೊ. 4:17. ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವನು" ಎಂದನು. ಆಗ ಸೌಲನು ದಾವೀದನಿಗೆ "ಹೋಗು ಯೆಹೋವನು ನಿನ್ನ ಸಂಗಡ ಇರಲಿ" ಎಂದು ಹೇಳಿ, 40 ತನ್ನ ಕೋಲನ್ನು ತೆಗೆದುಕೊಂಡು ಹೊರಟು, ಹಳ್ಳದಲ್ಲಿನ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು, ಅವುಗಳನ್ನು ಕುರುಬರ ಪದ್ಧತಿಯಂತೆ ತನಗಿರುವ ಸೊಂಟದ ಚೀಲದಲ್ಲಿ ಹಾಕಿ ಕೈಯಲ್ಲಿ 17:40 ನ್ಯಾಯ 20:16.ಕವಣೆಯನ್ನು ಹಿಡಿದು ಫಿಲಿಷ್ಟಿಯನ ಬಳಿಗೆ ಹೋದನು.
45 ಆಗ ದಾವೀದನು ಅವನಿಗೆ, "ನೀನು ಈಟಿ, ಕತ್ತಿ, ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ, ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬಂದಿದ್ದೇನೆ. 49 ಚೀಲದಲ್ಲಿ ಕೈ ಹಾಕಿ, ಒಂದು ಕಲ್ಲನ್ನು ತೆಗೆದು ಅವನ ಹಣೆಗೆ ಗುರಿಯಿಟ್ಟು ಕವಣೆಯನ್ನು ಬೀಸಿ ಹೊಡೆಯಲು ಕಲ್ಲು ಅವನ ಹಣೆಯೊಳಗೆ ಹೊಕ್ಕಿತು. ಅವನು ಬೋರಲುಬಿದ್ದನು