ಏಲಿಯ ಮಕ್ಕಳ ದುಷ್ಟತ್ವ
12 ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ. 13 ಯಜ್ಞವನ್ನರ್ಪಿಸುವುದಕ್ಕೆ ಬಂದ ಜನರಲ್ಲಿ ಈ ಯಾಜಕರು ನಡಿಸಿದ್ದೇನಂದರೆ, ಯಜ್ಞಮಾಂಸವು ಬೇಯುತ್ತಿರುವಾಗಲೇ ಯಾಜಕನ ಆಳು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರುತ್ತಿದ್ದನು. 14 ಆ ಮಾಂಸ ಬೇಯುತ್ತಿರುವ ಕೊಪ್ಪರಿಗೆಯಲ್ಲಾಗಲಿ2:14 ಎಣ್ಣೆ ಅಥವಾ ತುಪ್ಪ ಇಡುವ ಲೋಹದ ಪಾತ್ರೆ, ಭಾಂಡಲ್ಲಾಗಲಿ (ದೊಡ್ಡ ಹಂಡೆ), ತಪ್ಪಲೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚಿ ಅದಕ್ಕೆ ಸಿಕ್ಕಿದ್ದೆಲ್ಲವನ್ನೂ ಯಾಜಕನಿಗೆಂದು ತೆಗೆದುಕೊಳ್ಳುತ್ತಿದ್ದನು. ಶೀಲೋವಿಗೆ ಬರುತ್ತಿದ ಇಸ್ರಾಯೇಲ್ಯರೆಲ್ಲರಿಗೂ ಹೀಗೆಯೇ ಮಾಡುತ್ತಿದ್ದರು. 15 ಇದಲ್ಲದೆ ಯಾಜಕನ ಆಳು ಕೊಬ್ಬನ್ನು ಹೋಮಮಾಡುವುದಕ್ಕಿಂತ ಮುಂಚೆಯೇ ಬಂದು ಯಜ್ಞವನ್ನರ್ಪಿಸುವವನಿಗೆ, "ಯಾಜಕನಿಗೋಸ್ಕರ ಸುಡತಕ್ಕ ಮಾಂಸವನ್ನು ಕೊಡು; ನೀನು ಬೇಯಿಸಿದ ಮಾಂಸವನ್ನು ಅವನು ತೆಗೆದುಕೊಳ್ಳುವುದಿಲ್ಲ; ಅವನಿಗೆ ಹಸಿಮಾಂಸವೇ ಬೇಕು" ಅನ್ನುವನು. 16 ಅರ್ಪಿಸುವವನು, ಮೊದಲು ಕೊಬ್ಬನ್ನು ಹೋಮಮಾಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ ಎಂದು ಹೇಳಿದರೆ ಅವನು, "ಈಗಲೇ ಕೊಡಬೇಕು; ಇಲ್ಲವಾದರೆ ಬಲಾತ್ಕಾರದಿಂದ ತೆಗೆದುಕೊಳ್ಳುವೆನು" ಎನ್ನುವನು. 17 ಹೀಗೆ ಆ ಯೌವನಸ್ಥರು ಯೆಹೋವನ ನೈವೇದ್ಯವನ್ನು ತುಚ್ಛೀಕರಿಸಿದ್ದರಿಂದ 2:17 ಅಥವಾ ಜನರ.ಅವರ ಪಾಪವು ಯೆಹೋವನ ದೃಷ್ಟಿಯಲ್ಲಿ ಆಧಿಕವಾಯಿತು.