Pular para o conteúdo
Publicidade

2 ಕೊರಿಂಥದವರಿಗೆ 9:6,8,10,11

IRVKAN Indian Revised Version (IRV) - Kannada - 2019

ಪೌಲನು ಕೊರಿಂಥದ ಸಭೆಯವರನ್ನು ಉದಾರವಾಗಿ ಕೊಡುವುದಕ್ಕೆ ಪ್ರೇರೇಪಿಸಿದ್ದು

6 ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ. 8 9:8 ಫಿಲಿ. 4:19; ಎಫೆ 3:20ದೇವರು ಸಕಲ ವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾದ್ದರಿಂದ, ನೀವೂ ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು. 10 9:10 ಯೆಶಾ 55:10ಬಿತ್ತುವವನಿಗೆ ಬೀಜವನ್ನೂ, ತಿನ್ನುವವನಿಗೆ ಆಹಾರವನ್ನು ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು. 11 ಹೀಗೆ ನೀವು 9:11 1 ಕೊರಿ 1:5ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಇದಲ್ಲದೆ ನಿಮ್ಮ ದಾನಗಳು ನಮ್ಮ ಕೈಯಿಂದ ಮತ್ತೊಬ್ಬರಿಗೆ ಸೇರಿದಾಗ ಅದು ದೇವರಿಗೆ ಕೃತಜ್ಞತಾಸ್ತುತಿಯನ್ನು ಉಂಟುಮಾಡುತ್ತದೆ.

Em outras traduções

  1. SII25 Bíblia Siddi

    6 9:6 ಎವ್ಡೆ ಮನಾತ್ ಥವ್ನ್ ಘೆವಾ, ಜೊ ಕೊನ್ ಉಲ್ಲೆಸೆಚ್ ಪೆರ್ತಾ ತೊ ಉಲ್ಲೆಸೆಚ್ ಕಾತರ್‍ತಾ, ಜೊ ಕೊನ್ ಲೈ ಪೆರ್ತಾ, ತೊ ಲೈ ಕಾತರ್‍ತಾ 8 ಮಾಪ್ ನಸ್ತಾನಾ ತುಮ್ಕಾ ಅಶಿರ್ವಾದ್ ದಿವ್ಕ್ ದೆವಾಕ್ ಹೊತಾ. ಅಶೆ ತುಮ್ಕಾ ಕನ್ನಾಬಿ ಗರ್ಜೆಕ್ ಪಾಜೆ ಹೊಲ್ಲೆ ತವ್ಡೆ ರ್‍ಹಾವ್ನ್, ಹರಿಎಕ್ ಬರ್‍ಯಾ ಕಾಮಾಕ್ನಿ ದಿವ್ಕ್ ಬಿ ತುಮ್ಚ್ಯಾ ಕಡೆ ಜಾಸ್ತಿ ಉರ್ತಾ.

    10 9:10 ಇಸಾಯಿಯಾ 55.10 ಪೆರ್‍ತಲ್ಯಾಕ್ ಬಿಂಯ್ ಅನಿ ಖಾತಲ್ಯಾಕ್ ಭಾಕ್ರಿ ಗಾವಿ ಸರ್ಕೆ ಕರ್‍ತಾ ತೊ ದೆವ್ ಭರ್ಪುರ್ ಮಾಪಾನ್ ತುಮ್ಚ್ಯಾ ಬಿಯಾಳಾಕ್‍ಬಿ ಚೆಡ್ವುತಾ ಅನಿ ತುಮ್ಚ್ಯಾ ದಾನಾಚೊ ಪಳ್ ಜಾಸ್ತಿ ವಾಡ್ವುತಾ. 11 ತುಮ್ಚೊ ಬರೊ ಮನ್ ಅನಿಬಿ ಮೊಟೊ ಕರುಸಾಟಿ ಹರಿಎಕ್ ವಾಟೆನ್ ತುಮ್ಕಾ ತೊ ಸಾವ್ಕಾರ್ ಕರ್‍ತಾ, ಅನಿ ತುಮ್ಚಿ ದೆನಿ ಅಮ್ಚ್ಯಾ ವೈನಾ ಲೈ ಲೊಕಾಕ್ನಿ ಗಾವಲ್ಲ್ಯಾ ತನ್ನಾ ದೆವಾಕ್ ತೆನಿ ಧನ್ಯವಾದ್ ದಿವ್ಕ್ ಪಾವ್ತಾತ್.

  2. OKCV Kannada Contemporary Version

    6 ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. 8 ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ.

    10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು. 11 ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.