Pular para o conteúdo
Publicidade

ಪ್ರಕಟಣೆ 21:9-14

IRVKAN Indian Revised Version (IRV) - Kannada - 2019

ಹೊಸ ಯೆರೂಸಲೇಮ್

9 21:9 ಪ್ರಕ 15:1: ಕಡೇ ಏಳು ಉಪದ್ರವಗಳಿಂದ ತುಂಬಿದ 21:9 ಪ್ರಕ 17:1:ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, "ಬಾ ಕುರಿಮರಿಯಾದಾತನಿಗೆ 21:9 ವ. 2:ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು" ಎಂದು ಹೇಳಿ, 10 21:10 ಪ್ರಕ 17:3; ಯೆಹೆ. 43:5:ದೇವರಾತ್ಮನಲ್ಲಿ ನನ್ನನ್ನು 21:10 ಕೀರ್ತ 87:1; ಯೆಹೆ. 40. 2:ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ಪರಲೋಕದೊಳಗಿಂದ, ದೇವರ ಬಳಿಯಿಂದ ಇಳಿದುಬರುವುದನ್ನು ನನಗೆ ತೋರಿಸಿದನು. 11 ಅದು ದೇವರ ತೇಜಸ್ಸಿನಿಂದ ಕೂಡಿತ್ತು. 21:11 ಮತ್ತಾ 5:14; ಫಿಲಿ. 2:15ಪಟ್ಟಣವು ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು, ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು. 12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. 21:12 ಯೆಹೆ. 8:31-34:ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ಯರ ಹನ್ನೆರಡು ಕುಲಗಳ ಹೆಸರುಗಳು ಬರೆಯಲ್ಪಟ್ಟಿದ್ದವು. 13 ಪೂರ್ವ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 21:14 ಇಬ್ರಿ. 11:10; 1 ಕೊರಿ 3:11:ಪಟ್ಟಣದ 21:14 ಅಥವಾ, ಗೋಡೆಗೆ. ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. 21:14 ಮತ್ತಾ 16:18; ಎಫೆ 2:20:ಅವುಗಳ ಮೇಲೆ ಯಜ್ಞದ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.

Em outras traduções

  1. SII25 Bíblia Siddi

    9 ಆಕ್ರಿಚ್ಯಾ ಫಿಡಾನಿ ಭರಲ್ಲಿ ಆಯ್ದಾನಾ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ ದೆವ್‍ದುತಾ ಮಾಜ್ಯಾಕ್ಡೆ ಯೆಲೊ, ಅನಿ, "ಯೆ ಮಿಯಾ ತುಕಾ ನ್ಹವ್ರಿ ಬೊಕ್ಡಾಚಿ ಬಾಯ್ಕೊ ದಾಕ್ವುತಾ", ಮಟ್ಲ್ಯಾನ್.

    10 ಪವಿತ್ರ್ ಆತ್ಮ್ಯಾನ್ ಮಾಕಾ ಅಪ್ನಾಚ್ಯಾ ತಾಬೆತ್ ಕರುನ್ ಘೆಟ್ಲ್ಯಾನ್, ಅನಿ ದೆವಾಚ್ಯಾ ದುತಾನ್ ಮಾಕಾ ಎಕ್ ಲೈ ಉಪ್ಪರ್ಲ್ಯಾ ಮಡ್ಡಿ ವರ್ತಿ ಘೆವ್ನ್ ಗೆಲ್ಯಾನ್ ತೆನಿ ಮಾಕಾ ಪವಿತ್ರ್ ಶಾರ್ ಜೆರುಜಲೆಮ್ ದೆವಾಕ್ನಾ ಸರ್‍ಗಾ ವೈನಾ ಉತ್ರುನ್ ಯೆತಲೆ ದಾಕ್ವುಲ್ಯಾನ್. 11 ತೆ ದೆವಾಚ್ಯಾ ವೈಭವಾನ್ ಹೊಳ್ವಳುಲಾಗಲ್ಲೆ, ತೆ ಶಾರ್ ಲೈ ಕಿಮ್ತಿಚ್ಯಾ ಪೊಡ್ಯಾಂಚೆ ಸರ್ಕೆ ಝಳ್-ಝಳ್ತಲ್ಯಾ ವಜ್ರಾಚ್ಯಾ ಸರ್ಕೆ ಹೊಳ್ವಳುಲಾಗಲ್ಲೆ.

    12 ತ್ಯಾ ಶಾರಾಕ್ ಎಕ್ ಉಪ್ಪರ್ಲಿ ಮೊಟಿ ಭಿತ್ತ್ ಹೊತ್ತಿ ಅನಿ ಬಾರಾ ದಾರಾ ಹೊತ್ತಿ ಅನಿ ತ್ಯಾ ಹರಿಎಕ್ ದಾರಾನಿಕ್ನಿ ಎಕೆಕ್ ದೆವಾಚ್ಯಾ ದುತಾಕ್ನಿ ನೆಮಸಲ್ಲೆ ಹೊತ್ತೆ. ಬಾರಾ ದಾರಾ ವೈನಿ ಇಸ್ರಾಯೆಲಾಚ್ಯಾ ಲೊಕಾಂಚ್ಯಾ ಬಾರಾ ಘರಾನ್ಯಾಂಚಿ ನಾವಾ ಲಿವಲ್ಲಿ ಹೊತ್ತಿ. 13 ಹರಿಎಕ್ ದಿಕ್ಕಾಕ್ ತಿನ್ -ತಿನ್ ದಾರಾ ಹೊತ್ತಿ ದಿಸ್ ಉಗಾವ್ತಲ್ಯಾ ದಿಕ್ಕಾಕ್ ತಿನ್, ದಿಸ್ ಬುಡ್ತಲ್ಯಾ ದಿಕ್ಕಾಕ್, ತಿನ್ ಅನಿ ಹಿಕುಲ್ಯಾ-ತಿಕುಲ್ಯಾ ದಿಕ್ಕಾಕ್ನಿ ತಿನ್-ತಿನ್ ದಾರಾ ಹೊತ್ತಿ. 14 ಶಾರಾಚ್ಯಾ ಬಾರಾ ಪಾಯಾ ವೈನಿ ಭಾಂದಲ್ಲೊ ಹೊತ್ತೊ ತ್ಯಾ ಬಾರಾ ಪಾಯಾಚ್ಯಾ ಗುಂಡ್ಯಾ ವೈನಿ ಬೊಕ್ಡಾಚ್ಯಾ ಬಾರಾ ಪಾಯಾಚ್ಯಾ ವರ್ತಿ ಅಪೊಸ್ತಲಾಂಚಿ ನಾವಾ ಲಿವಲ್ಲಿ ಹೊತ್ತಿ .

  2. OKCV Kannada Contemporary Version

    9 ಅಂತಿಮ ಏಳು ಉಪದ್ರವಗಳಿಂದ ತುಂಬಿದ ಏಳು ಬೋಗುಣಿಗಳನ್ನು ಹಿಡಿದಿದ್ದ ಏಳುಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, "ಬಾ, ಯಜ್ಞದ ಕುರಿಮರಿಯಾದವವರಿಗೆ ಹೆಂಡತಿಯಾಗತಕ್ಕ ವಧುವನ್ನು ನಿನಗೆ ತೋರಿಸುವೆನು!" ಎಂದು ಹೇಳಿ, 10 ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಪರಿಶುದ್ಧ ಪಟ್ಟಣವಾದ ಯೆರೂಸಲೇಮು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದು ಬರುವುದನ್ನು ನನಗೆ ತೋರಿಸಿದನು. 11 ಅದು ದೇವರ ಮಹಿಮೆಯಿಂದ ಕೂಡಿತ್ತು. ಪಟ್ಟಣದ ಪ್ರಕಾಶವು ಸೂರ್ಯಕಾಂತದಂತೆ ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು. ಅದು ಸ್ವಚ್ಛವಾದ ಸ್ಪಟಿಕದಂತೆ ಕಾಣಿಸಿತು. 12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು. 13 ಪೂರ್ವದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು. 14 ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಕುರಿಮರಿಯಾದವರ ಹನ್ನೆರಡು ಜನ ಅಪೊಸ್ತಲರ ಹೆಸರುಗಳಿದ್ದವು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.