1 ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ 22:1 ಯೆಹೆ. 47:1-12; ಜೆಕ. 14:8:ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು, 2 ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. 22:2 ಯೆಹೆ. 47:12:ಆ ನದಿಯ ಎರಡು ದಡಗಳಲ್ಲಿ 22:2 ಆದಿ 2:9; ಪ್ರಕ 22:14, 19; 2:7:ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ 22:2 ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. 22:2 ಪ್ರಕ 21:24:ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು. 3 22:3 ಯೆಹೆ. 14:11; ಆದಿ 3:17:ಇನ್ನೂ ಯಾವ ಶಾಪವು ಇರುವುದಿಲ್ಲ. 22:3 ಯೆಹೆ. 48:35; ಪ್ರಕ 21:3, 23:ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. 22:3 ಪ್ರಕ 7:15:ಆತನ ಸೇವಕರು ಆತನಿಗೆ ಸೇವೆ ಮಾಡುವರು. 4 22:4 ಮತ್ತಾ 5:8; 1 ಕೊರಿ 13:12; 1 ಯೋಹಾ 3:2:ಅವರು ಆತನ ಮುಖವನ್ನು ನೋಡುವರು. 22:4 ಪ್ರಕ 3:12; 7:3; 14:1:ಅವರ ಹಣೆಯ ಮೇಲೆ ಆತನ ಹೆಸರು ಇರುವುದು. 5 ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ 22:5 ಕೀರ್ತ 36:9; ಪ್ರಕ 21:11, 23-25:ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. 22:5 ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ 20:4:ಅವರು ಯುಗಯುಗಾಂತರಗಳಲ್ಲಿಯೂ ಆಳುವರು.
Publicidade