ಸುವಾರ್ತೆ ಸಾರುವುದಕ್ಕೆ ಪೌಲನು ಮಾಡಿದ ಮೊದಲನೆಯ ಪ್ರಯಾಣ (13:1, 14:28)
1 ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ. 2 ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; "ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ" ಎಂದು ಹೇಳಿದನು. 3 ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.