Pular para o conteúdo
Publicidade

ಅಪೊಸ್ತಲರ ಕೃತ್ಯಗಳು 5:1-4

IRVKAN Indian Revised Version (IRV) - Kannada - 2019

ಅನನೀಯ ಮತ್ತು ಸಪ್ಫೈರಳು

1 ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಒಂದು ಭೂಮಿಯನ್ನು ಮಾರಿ 2 ಹೆಂಡತಿಯ ಸಮ್ಮತಿಯಿಂದ ಅದರ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಉಳಿದ ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. 3 ಆಗ ಪೇತ್ರನು; "ಅನನೀಯನೇ, ನೀನು ಆ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸುವಂತೆ ಸೈತಾನನು ನಿನ್ನ ಹೃದಯದಲ್ಲಿ ಏಕೆ ತುಂಬಿಸಿಕೊಂಡಿ? 4 ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ" ಅಂದನು.

Em outras traduções

  1. SII25 Bíblia Siddi

    1 ಖರೆ ಅನನಿಯಾ ಮನ್ತಲ್ಯಾ ನಾವಾಚೊ ಎಕ್ ಮಾನುಸ್ ಅನಿ ತೆಚಿ ಬಾಯ್ಕೊ ಸಾಪಿರಾ ದೊಗೆ ಜನಾಬಿ ಮಿಳುನ್ ಅಪ್ಲೆ ಸೆತಾಚೊ ಎಕ್ ಬಾಗ್ ಇಕ್ಲ್ಯಾನಿ. 2 ತೆನಿ ಗಾವಲ್ಲ್ಯಾ ಪೈಸ್ಯಾತ್ ಅಪೊಸ್ತಲಾಕ್ನಿ ದಿತಾನಾ ಉಲ್ಲೆ ಪೈಸೆ ಅಪ್ನಾ ಸಾಟ್ನಿ ಮನುನ್ ನಿಪ್ವುನ್ ಥವ್ನ್ ಘೆಟಲ್ಯಾನಿ ಹೆ ತೆಜಾ ಬಾಯ್ಕೊ ಬಿ ಗೊತ್ತ್ ಅನಿ ತೆನಿ ಬಿ ಹೆಕಾ ಒಪ್ಕಿ ದಿಲ್ಲಿನ್. 3 ತನ್ನಾ ಪೆದ್ರುನ್ ತೆಕಾ ಅನನಿಯಾಕ್ , ತುಜೆ ಸೆತ್ ಇಕುನ್ ಗಾವಾಲ್ಯಾ ಪೈಸಾತ್ ನಿಪ್ವುನ್ ಥವ್ನ್ ಘೆವ್ನ್ ಪವಿತ್ರ್ ಆತ್ಮ್ಯಾಕ್ ಮೊಸ್ ಕರ್ತೆ ಕಾಯ್ ಅನಿ ತುಜ್ಯಾ ಮನಾತ್ ಸೈತಾನಾಕ್ ಜಾಗೊ ದಿವಲ್ಲೆ ನ್ಹಯ್ ಮನುನ್ ಸಾಂಗ್ಲ್ಯಾನ್ . 4 ಅದ್ದಿ ಹಿ ಆಸ್ತಿ ತುಜ್ಯಾ ನಾವಾರ್ ಹೊತ್ತೆ ನ್ಹಯ್?, ಅನಿ ತಿ ಆಸ್ತಿ ಅಶೆ ಇಕುನ್ ಗಾವಲ್ಲೆ ಪೈಸೆ ತುಜೆಚ್ ಹೊಲ್ಲೆ ಹೊತ್ತೆ ತುಜ್ಯಾ ಮನಾತ್ ಅಶೆ ಕಶ್ಯಾಕ್ ಯೆವ್ಜಲೈ? ತಿಯಾ ಮಾನ್ಸಾಕ್ ಝುಟೆ ಸಾಂಗುಕ್ ನ್ಹಯ್ ದೆವಾಕುಚ್ ಝುಟೆ ಸಾಂಗ್ಲಯ್.

  2. OKCV Kannada Contemporary Version

    1 ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಆಸ್ತಿಯ ಒಂದು ಭಾಗವನ್ನು ಮಾರಿದನು. 2 ತನ್ನ ಹೆಂಡತಿಯ ಪೂರ್ಣ ತಿಳುವಳಿಕೆಯಿಂದ, ಬಂದ ಹಣದಲ್ಲಿ ಒಂದು ಭಾಗವನ್ನು ತನಗಾಗಿ ಇಟ್ಟುಕೊಂಡು, ಉಳಿದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿಟ್ಟನು.

    3 ಆದರೆ ಪೇತ್ರನು, "ಅನನೀಯಾ, ಪವಿತ್ರಾತ್ಮ ದೇವರಿಗೆ ಸುಳ್ಳು ಹೇಳುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿಸಿದ್ದು ಏಕೆ? ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಇಟ್ಟುಕೊಂಡದ್ದೇಕೆ? 4 ಮಾರುವುದಕ್ಕಿಂತ ಮೊದಲು ಅದು ನಿನ್ನ ಅಧೀನದಲ್ಲಿತ್ತಲ್ಲವೇ? ಮಾರಿದ ನಂತರವೂ ಆ ಹಣ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ಇಂಥ ಕಾರ್ಯ ಮಾಡಲು ನಿನ್ನ ಹೃದಯದಲ್ಲಿ ಯೋಚನೆ ಬಂದದ್ದು ಏಕೆ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೇ," ಎಂದು ನುಡಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.