Pular para o conteúdo
Publicidade

ದಾನಿಯೇಲನು 1:1-6

IRVKAN Indian Revised Version (IRV) - Kannada - 2019

ನೆಬೂಕದ್ನೆಚರನ ಆಸ್ಥಾನದಲ್ಲಿ ಇಬ್ರಿಯ ಯುವಕರು

1 ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು. 2 ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನೂ, ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ ಕೊಡಲು ಅವನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.

3 ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, "ನೀನು ಇಸ್ರಾಯೇಲರಲ್ಲಿ ಅಂದರೆ ರಾಜವಂಶೀಯರಲ್ಲಿ 4 ಮತ್ತು ಪ್ರಧಾನರಲ್ಲಿ ಅಂಗದೋಷವಿಲ್ಲದವರೂ, ಸುಂದರರೂ, ಸಮಸ್ತ ಶಾಸ್ತ್ರಜ್ಞರೂ, ಪಂಡಿತರೂ, ವಿದ್ಯಾನಿಪುಣರೂ, ರಾಜಾಲಯದಲ್ಲಿ ಸನ್ನಿಧಿ ಸೇವೆಮಾಡಲು ಸಮರ್ಥರೂ ಆದ ಕೆಲವು ಯುವಕರನ್ನು ಇಲ್ಲಿಗೆ ಕರೆದುತಂದು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನೂ, ಶಾಸ್ತ್ರಗಳನ್ನೂ ಕಲಿಸಬೇಕು" ಎಂಬುದಾಗಿ ಅಪ್ಪಣೆಕೊಟ್ಟನು. 5 ಇದಲ್ಲದೆ, "ಇನ್ನು ಮುಂದೆ ಅವರು ಸನ್ನಿಧಿಸೇವಕರಾಗಲೆಂದು ತನ್ನ ಭೋಜನ ಪದಾರ್ಥಗಳನ್ನೂ, ರಾಜನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು" ಎಂದು ಆಜ್ಞಾಪಿಸಿದನು.

6 ಆರಿಸಲ್ಪಟ್ಟ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬ ಯೆಹೂದ್ಯರು ಸೇರಿದ್ದರು.

Em outras traduções

  1. SII25 Bíblia Siddi

    1 ಜೆಹುದಾಚೊ ರಾಜಾ ಜೆಹುಜಾಕಿಮ್ ಮನ್ತಲ್ಯಾಚ್ಯಾ ರಾಜ್ವಡ್ಕಿತ್ ತಿನ್ವೆಚ್ಯಾ ವರ್ಸಾತ್ ಬಾಬಿಲೊನಾಚೊ ರಾಜಾ ನೆಬುಕದ್ನೆಚರ್ ಮನ್ತಲ್ಯಾನ್ ಜೆರುಜಲೆಮಾಕ್ ಅಪ್ನಾಚ್ಯಾ ಸೈನಿಕಾಕ್ನಿ ಘೆವ್ನ್ ಘೆರೊ ಘಾಲುನ್, ಯೆವ್ನ್ ಲಡಾಯ್ ಕರುನ್, ತೆಜೊ ರಾಜ್ ಕಾಡುನ್ ಘೆಟ್ಲ್ಯಾನ್. 2 ತನ್ನಾ ಸರ್ವೆಸ್ಪರಾನ್ ಜುದಾಚೊ ರಾಜಾ ಜಹುಯಾಕಿಮಾಕ್ ಹಾರಿ ಸಾರ್ಕೆ ಕರ್ಲ್ಯಾನ್, ದೆವಾಚ್ಯಾ ಗುಡಿತ್ಲಿ ಲೈ ಆಯ್ದಾನಾ ತೆಕಾ ಗಾವಿಸಾರ್ಕೆ ಕರ್ಲ್ಯಾನ್, ತೆನಿ ತೆ ಸಗ್ಳೆ ಸಿನಾರ್ ಮನ್ತಲ್ಯಾ ದೆಶ್ಯಾಕ್ ಧಾಡುನ್ ದಿವ್ನ್ ಅಪ್ಲ್ಯಾ ದೆವಾಚ್ಯಾ ಗುಡಿತ್ ಥವ್ಲ್ಯಾನ್. 3 ಮಾನಾ ತ್ಯಾ ರಾಜಾನ್ ಅಪ್ಲ್ಯಾ ಕಂಚುಕಿಯಾತ್ನಿ ಮುಖಂಡ್ ಹೊಲ್ಲ್ಯಾ ಅಶ್ಪೆನಜಾಕ್; ತಿಯಾ ಇಜ್ರಾಯೆಲಾತ್ನಿ ಮಟ್ಲ್ಯಾರ್, ರಾಜಾಚ್ಯಾ ಘರಾನಾತ್ನಿ, ಅನಿ ಕುಟ್ಮಾತ್ನಿ, ಉಲ್ಲ್ಯಾ ದಾಂಡ್ಗ್ಯಾ ಮಾನ್ಸಾಕ್ನಿ ಎಚುನ್ ಘೆವ್ಕ್ ಹುಕುಮ್ ದಿಲ್ಯಾನ್. 4 ಅನಿ ಪ್ರಧಾನ್ ಹೊತ್ತ್ಯಾತ್ನಿ ಕಾಯ್ಬಿ ಆಂಗ್ ದೊಶ್ ನಸಲ್ಲೆ, ಸುಂದರ್ ಅನಿ, ಸಗ್ಳೆ ಶಾಸ್ತ್ರ ಗೊತ್ತ್ ಹೊತ್ತಿ ಪಂಡಿತಾ, ಶಿಕ್ಷನ್ ಹೊತ್ತೆ ಅನಿ ರಾಜಾಚ್ಯಾ ದರ್ಬಾರಾತ್ ತೆಚ್ಯಾ ಇದ್ರಾಕ್ ಸೆವಾ ಕರುಕ್ ಶಕ್ತ್ ಹೊತ್ತ್ಯಾ ಉಲ್ಲ್ಯಾ ದಾಂಡ್ಗ್ಯಾ ಮಾನ್ಸಾಕ್ನಿ ಹಿತ್ತೆ ಬಲ್ವುನ್ ಹಾನುನ್, ತೆಂಕಾ ಬಾಬಿಲೊನಾಚಿ ಭಾಶ್ಯಾ ವಾಚುಕ್ ಅನಿ ಲಿವ್ಕ್ ಶಿಕ್ವುಚೆ ಮನುನ್ ಹುಕುಮ್ ದಿಲ್ಯಾನ್. 5 ಯೆವ್ಡೆಚ್ ನಸ್ತಾನಾ ಹೆಚ್ಯಾನ್ ಫಿಡೆ ತೆನಿ ಮಾಜ್ಯಾ ಇದ್ರಾಕ್ ಸೆವಾಕರುಕ್ ತಯಾರ್ ಹೊವ್ಕ್ ಸಾಟ್ನಿ ಅಪ್ನಿ ಖಾತಲೆ ಖಾನ್ ಅನಿ ಫಿತಲೆ ವಾಯ್ನ್ ತೆಂಕಾ ಸದ್ದಾ ದಿವ್ಚೆ, ಅನಿ ತೆಂಕಾ ತಿನ್ ವರಿಸ್ ಬಾಳ್ಗುಚೆ ಮನುನ್ ಹುಕುಮ್ ದಿಲ್ಯಾನ್, ಹಿ ತಿನ್ ವರ್ಸಾ ಕಳದಲ್ಲ್ಯಾ ಮಾನಾ ತೆನಿ ರಾಜಾಚ್ಯಾ ಇದ್ರಾಕ್ ಯೆವ್ಚೆ. 6 ತ್ಯಾ ಎಚುನ್ಗೆಟಲ್ಯಾ ದಾಂಡ್ಗ್ಯಾ ಮಾನ್ಸಾತ್ನಿ ದಾನಿಯೆಲ್, ಹನನ್ಯಾ, ಮಿಶಾಯೆಲ್, ಅಜರ್ಯ್ ಮನ್ತಲಿ ಜುದೆವ್ ಕುಳಿಚಿ ಲೊಕಾಬಿ ಹೊತ್ತಿ.

  2. OKCV Kannada Contemporary Version

    1 ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆಹಾಕಿದನು. 2 ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ದೇವಾಲಯದ ಕೆಲವು ವಸ್ತುಗಳನ್ನು ಕೂಡ ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್1:2 ಶಿನಾರ್ ಅಥವಾ ಬಾಬಿಲೋನ್ ದೇಶಕ್ಕೂ, ತನ್ನ ದೇವರ ಆಲಯಕ್ಕೂ ತಂದು, ಅವುಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.

    3 ಅರಸನು ತನ್ನ ಕಂಚುಕಿಯರ ಮುಖ್ಯಸ್ಥನಾದ ಅಶ್ಪೆನಜನ ಸಂಗಡ ಮಾತನಾಡಿ ಅವನು ಇಸ್ರಾಯೇಲರೊಳಗೆ ಕೆಲವರನ್ನು ಅರಸನ ಸಂತಾನದೊಳಗಿಂದಲೂ, ಪ್ರಧಾನರೊಳಗಿಂದಲೂ 4 ಶಾರೀರಿಕ ನ್ಯೂನತೆ ಇಲ್ಲದವರಾಗಿಯೂ, ಸುಂದರವಾಗಿಯೂ, ಅವರು ಎಲ್ಲಾ ರೀತಿಯ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಅವರು ವಿವೇಕವುಳ್ಳವರಾಗಿಯೂ ಮತ್ತು ತ್ವರಿತವಾಗಿ ಅರ್ಥಮಾಡಿಕೊಳ್ಳುವವರಾಗಿಯೂ, ಅರಸನ ಅರಮನೆಯಲ್ಲಿ ಸೇವೆ ಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಬಾಬಿಲೋನಿಯರ ವಿದ್ಯೆಯನ್ನೂ, ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು. 5 ಅರಸನು ರಾಜಭೋಜನದಲ್ಲಿಯೂ, ತಾನು ಕುಡಿಯುವ ದ್ರಾಕ್ಷಾರಸದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿಸಿದನು. ಹೀಗೆ ಅವರು ಮೂರು ವರ್ಷಗಳ ಕಾಲ ಪೋಷಿಸಲಾದ ಮೇಲೆ ಅರಸನ ಸನ್ನಿಧಿಯ ಸೇವಕರಾಗುವರು.

    6 ಇವರಲ್ಲಿ ಯೆಹೂದದಿಂದ ದಾನಿಯೇಲ, ಹನನ್ಯ, ಮೀಶಾಯೇಲ್, ಅಜರ್ಯ ಎಂಬವರಿದ್ದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.