ದೇವರ ಸರ್ವಾಯುಧಗಳು
10 ಕಡೆಯದಾಗಿ, ನೀವು 6:10 2 ತಿಮೊ. 2:1; 1 ಯೊಹಾ. 2:14; ಎಫೆ 3:16:ಕರ್ತನಲ್ಲಿಯೂ 6:10 ಎಫೆ 1:19:ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. 11 ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ 6:11 ಎಫೆ 6:13; 2 ಕೊರಿ 10:4:ಸರ್ವಾಯುಧಗಳನ್ನು 6:11 ವ. 14. ರೋಮಾ. 13:12:ಧರಿಸಿಕೊಳ್ಳಿರಿ. 12 ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. 6:12 ಎಫೆ 1:21:ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, 6:12 ಲೂಕ 22:53; ಕೊಲೊ 1:13:ಈ ಅಂಧಕಾರದ 6:12 ಎಫೆ 2:2:ಲೋಕಾಧಿಪತಿಗಳ ಮೇಲೆಯೂ, 6:12 ಎಫೆ 3:10:ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. 13 ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. 14 6:14 1 ಪೇತ್ರ. 1:13; ಯೆಶಾ 11:5ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, 6:14 ಯೆಶಾ 59:17; 1 ಥೆಸ. 5:8; ಯೆಶಾ 61:10; 2 ಕೊರಿ 6:7:ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು, 15 6:15 ಯೆಶಾ 52:7; ರೋಮಾ. 10:15:ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. 16 ಎಲ್ಲಾದಕ್ಕಿಂತ ಹೆಚ್ಚಾಗಿ 6:16 1 ಯೊಹಾ. 5:4:ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು 6:16 ಮತ್ತಾ 13:19; 1 ಯೊಹಾ. 2:14:ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. 17 ಇದಲ್ಲದೆ 6:17 ಯೆಶಾ 59:17; 1 ಥೆಸ. 5:8:ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು 6:17 ಇಬ್ರಿ. 4:12; ಯೆಶಾ 11:4; 49:2:ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ. 18 ನೀವು 6:18 ಯೂದ. 20:ಪವಿತ್ರಾತ್ಮಪ್ರೇರಿತರಾಗಿ 6:18 ಲೂಕ 18:1:ಎಲ್ಲಾ ಸಮಯಗಳಲ್ಲಿ 6:18 ಕೊಲೊ 4:2-4:ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ 6:18 1 ತಿಮೊ. 2:1:ವಿಜ್ಞಾಪನೆಮಾಡುತ್ತಾ 6:18 ಮಾರ್ಕ 13:33:ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.