ಗುಡಾರದ ಅಂಗಳ
9 ಪರಿಶುದ್ಧ ಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ಆ ದಕ್ಷಿಣ ಭಾಗದ ಅಂಗಳಕ್ಕೆ ಪರದೆಗಳು ಇರಬೇಕು. ಆ ಪರದೆಗಳನ್ನು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿಸಬೇಕು. ಅವು ನೂರು ಮೊಳ ಉದ್ದವಾಗಿರಬೇಕು. 10 ಆ ಕಡೆಯಲ್ಲಿ ಇಪ್ಪತ್ತು ಕಂಬಗಳು. ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಪಟ್ಟಿಗಳೂ ಇರಬೇಕು. 11 ಅದೇ ರೀತಿಯಲ್ಲಿ ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ಪರದೆಗಳೂ, ಇಪ್ಪತ್ತು ಕಂಬಗಳು, ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು ಕಂಬಗಳ ಕೊಂಡಿಗಳೂ, ಪಟ್ಟಿಗಳೂ ಬೆಳ್ಳಿಯವಾಗಿರಬೇಕು. 12 ಪಶ್ಚಿಮ ಕಡೆಯಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದವಾದ ಪರದೆಗಳೂ ಹತ್ತು ಕಂಬಗಳೂ, ಹತ್ತು ಗದ್ದಿಗೆ ಕಲ್ಲುಗಳೂ ಇರಬೇಕು. 13 ಪೂರ್ವದ ದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಿರಬೇಕು. 14 ಒಂದು ಕಡೆಯಲ್ಲಿ ಹದಿನೈದು ಮೊಳ ಉದ್ದವಾದ ಪರದೆಗಳಿದ್ದು ಅವುಗಳಿಗೆ ಮೂರು ಸ್ತಂಭಗಳೂ, ಮೂರು ಗದ್ದಿಗೆ ಕಲ್ಲುಗಳು ಇರಬೇಕು. 15 ಮತ್ತೊಂದು ಕಡೆಯಲ್ಲಿ ಹದಿನೈದು ಮೊಳ ಉದ್ದವಾದ ಪರದೆಗಳಿದ್ದು ಅವುಗಳಿಗೆ ಮೂರು ಸ್ತಂಭಗಳೂ, ಮೂರು ಗದ್ದಿಗೆ ಕಲ್ಲುಗಳು ಇರಬೇಕು 16 ಅಂಗಳದ ಬಾಗಿಲಲ್ಲೇ ಇಪ್ಪತ್ತು ಮೊಳದ ಪರದೆಯೂ ಇರಬೇಕು. ಅದನ್ನು ನಯವಾಗಿ ಹೊಸೆದ ನಾರಿನ ನೂಲು, ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿ ಕೆಲಸದವರ ಕೈಯಿಂದ ಮಾಡಿಸಬೇಕು. ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ಗದ್ದಿಗೆ ಕಲ್ಲುಗಳು ಇರಬೇಕು. 17 ಅಂಗಳದ ಸುತ್ತಲಿರುವ ಎಲ್ಲಾ ಕಂಬಗಳಿಗೂ, ಬೆಳ್ಳಿಯ ಪಟ್ಟಿಗಳೂ, ಬೆಳ್ಳಿಯ ಕೊಂಡಿಗಳೂ, ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು. 18 ಅಂಗಳವು ನೂರು ಮೊಳ ಉದ್ದವಾಗಿಯೂ ಸುತ್ತಲೂ ಐವತ್ತು ಮೊಳ ಅಗಲವಾಗಿಯೂ ಇರಬೇಕು. ಅದರ ಸುತ್ತಲಿರುವ ಪರದೆಯು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿದ್ದು ಅದಕ್ಕೆ ಐದು ಮೊಳ ಎತ್ತರವಿರಬೇಕು. ಅದಕ್ಕೆ ತಾಮ್ರದ ಗದ್ದಿಗೆ ಕಲ್ಲುಗಳಿರಬೇಕು.