ದೇವರು ತನ್ನ ಹೆಸರನ್ನು ಪ್ರಕಟಿಸಿದ್ದು
13 ಅದಕ್ಕೆ ಮೋಶೆಯು ದೇವರಿಗೆ, "ನಾನು ಇಸ್ರಾಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದಾಗ, ನನಗೆ ಒಂದು ವೇಳೆ ಅವರು, ಆತನ ಹೆಸರು ಏನು? ಎಂದು ಕೇಳಿದರೆ ನಾನೇನು ಉತ್ತರಕೊಡಬೇಕು" ಎಂದನು. 14 ದೇವರು ಮೋಶೆಗೆ, "ಇರುವಾತನೇ ಆಗಿದ್ದೇನೆ" ಎಂದು ಹೇಳಿದನು. "ಮತ್ತು ನೀನು ಇಸ್ರಾಯೇಲರಿಗೆ, ಇರುವಾತನೆಂಬುವವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು" ಅಂದನು.