Pular para o conteúdo
Publicidade

ವಿಮೋಚನಕಾಂಡ 31:1-6

IRVKAN Indian Revised Version (IRV) - Kannada - 2019

ಗುಡಾರದ ನಿರ್ಮಾಣಕ್ಕೆ ಕೆಲಸಗಾರರ ಆಯ್ಕೆ

1 ಯೆಹೋವನು ಮೋಶೆಗೆ ಹೀಗೆಂದನು, 2 "ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯನ ಮಗನೂ ಆಗಿರುವ ಬೆಚಲೇಲನೆಂಬುವನನ್ನು ಹೆಸರು ಹಿಡಿದು ಕರೆದಿದ್ದೇನೆ. 3 ಕಲಾತ್ಮಕವಾದ ವಿನ್ಯಾಸಗಳನ್ನು ಮಾಡುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ, 4 ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸಗಳನ್ನು ಮಾಡುವುದಕ್ಕೂ, 5 ಅವನಿಗೆ ದೇವರಾತ್ಮವನ್ನು ದಯಪಾಲಿಸಿ, ಅದಕ್ಕೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪ ಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ. 6 ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲೀಯಾಬನನ್ನೂ ನೇಮಿಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಜ್ಞಾನಿಗಳಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.

Em outras traduções

  1. SII25 Bíblia Siddi

    1 ಸರ್ವೆಸ್ಪರಾನ್ ಮೊಯ್ಜೆಕ್ ಅಸೆ ಮನುನ್, 2 ಮಿಯಾ ಜುದೆಯಾ ಕುಳಿಚ್ಯಾ ಹುರಾಚೊ ನಾತು ಅನಿ ಉರಿಚೊ ಲೆಕ್ ಬೆಚೆಲಾಕ್ ಎಚುನ್ ಘೆಟ್ಲಾ. 3 ಬೆಚೆಲ್ ಚಿತ್ರಾಂಚಿ ನುಂಪ್ ಕಾಮಾ ಕರುಕ್ ಅನಿ ಸೊನೆ ಚಾಂದಿ, ಅನಿ ತಾಂಬ್ಯಾಚಿ ಕಾಮಾ ಕರುಕ್, ತೆಕಾ ದಿವ್ಯಾಚೊ ಆತ್ಮೊ ದಿವ್ನ್, ಬುದ್ದ್, ಶಿಕ್ಷನ್ ಅನಿ ಚಿಂತ್ತಲಿ ಬುದ್ದ್ ಅನಿ ಸಗ್ಳ್ಯಾ ನಮುನ್ಯಾಚೆ ಶಿಲ್ಪಕಲಾಚೆ ಬುದ್ದ್ ದಿಲಾ. 4 ಬೆಚೆಲ್ ನುಂಪ್ ಕಾಮಾ ಕರುಕ್ ಅನಿ ಸೊನೆ ಚಾಂದಿ, ಅನಿ ತಾಂಬ್ಯಾಚಿ ಕಾಮಾ ಕರುಕ್, ಹಿ ಸಗ್ಳ್ಯಾ ನಮುನ್ಯಾಚಿ ಶಿಂಗಾರಾಚಿ ಕಾಮಾ ಕರ್ತಾ. 5 ರತ್ನಾ ಕೊರ್ದುಕ್ ಬರಿ ಸಾಮಾನಾ ಕರ್ತಾ, ಅನಿ ಝಾಡಾಚಿ ಕಾಮಾ ಕರ್ತಾ ಅನಿ ಸಗ್ಳ್ಯಾ ನಮುನ್ಯಾಚಿ ಕಾಮಾ ಕರ್ತಾ. 6 ತೆಜ್ಯಾ ವಾಂಗ್ಡಾ ದಾನ್ ಕುಳಿಚೊ ಅಹಿಸಾಮಾಕಾಚೊ ಲೆಕ್ ಒಹೊಲಿಬಾಮಾಕ್ ನೆಮ್ಲಾ, ತವ್ಡೆಚ್ ನಸ್ತಾನಾ ಮಿಯಾ ತುಕಾ ಹುಕುಮ್ ದಿಲ್ಲೆ ಸಗ್ಳೆ ಕರುಕ್ ಬುದ್ವಂತಾಂಚ್ಯಾ ಮನಾತ್ ಬುದ್ ದಿಲಾ.

  2. OKCV Kannada Contemporary Version

    1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ, 2 "ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ನಾನು ಆರಿಸಿಕೊಂಡಿದ್ದೇನೆ. 3 ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ ಎಲ್ಲಾ ವಿಧವಾದ ಕೌಶಲ್ಯದಿಂದಲೂ ತುಂಬಿಸಿದ್ದೇನೆ. 4 ಅವನು ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದಕ್ಕೂ, 5 ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸವನ್ನು ಬಲ್ಲವನಾಗಿರುವನು. 6 ಇಗೋ, ನಾನೇ ಅವನೊಂದಿಗೆ ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದೇನೆ.

    "ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಜಾಣರಾದವರೆಲ್ಲರ ಹೃದಯಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಜ್ಞಾನವನ್ನು ಅನುಗ್ರಹಿಸಿದ್ದೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.