Pular para o conteúdo
Publicidade

ವಿಮೋಚನಕಾಂಡ 35:21,22,29

IRVKAN Indian Revised Version (IRV) - Kannada - 2019

21 ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು. 22 ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು. 29 ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.

ವಿಮೋ 31:1-11

Em outras traduções

  1. SII25 Bíblia Siddi

    21 ಕೊನಾಚ್ಯಾ ಮನಾಕ್ ಯೆತಾ, ಅನಿ ಕೊನಾಚೊ ಮನ್ ದಿವ್ಕ್ ತಯಾರ್ ಹೊತ್ತೊ, ಹೆನಿ ಸಗ್ಳ್ಯಾನಿ ಯೆವ್ನ್ ದೆವಾಕ್ ಬಗ್ತಲ್ಯಾ ಗುಡಿಚ್ಯಾ ಕಾಮಾಕ್ ಅನಿ ತೆಜ್ಯಾ ಸೆವಾಕ್ ಅನಿ ಯಾಜಕಾಂಚ್ಯಾ ಕಪ್ಡ್ಯಾಂಚ್ಯಾ ಸಾಟ್ನಿ ಸರ್ವೆಸ್ಪರಾಕ್ ಕಾನಿಕ್ ದಿಲ್ಯಾನಿ. 22 ಬರ್ಯಾ ಮನಾಚ್ಯಾ ಘವ್ಮಾನ್ಸಾನಿ ಅನಿ ಬಾಯ್ಕೊಮನ್ಸಾನಿ ಸರ್ವೆಸ್ಪರಾ ಸಾಟ್ನಿ ಹಾತಿತ್ಲಿ ಖಡ್ಗಾ, ಕಾನಾತ್ಲಿ ಫುಲ್ಲಾ, ಛಪ್ಪ್ಯಾಚಿ ಮುದ್ದಿ, ಗಳ್ಯಾತ್ಲೆ ಹಾರ್ ಅನಿ ಸಗ್ಳ್ಯಾ ನಮುನ್ಯಾಚಿ ಸೊನ್ಯಾಚಿ ವಸ್ತಾ ಹಾನುಕ್ ದಿಲ್ಯಾನಿ. 29 ಮೊಯ್ಜೆ ವೈನಾ ಸರ್ವೆಸ್ಪರಾನ್ ಹುಕುಮ್ ದಿಲ್ಲ್ಯಾ ಸಗ್ಳ್ಯಾ ಘವ್ಮಾನ್ಸಾ ಅನಿ ಬಾಯ್ಕೊಮನ್ಸಾ ತೆ ಪುರಾ ಮನಾನ್ ಹಾನುನ್ ದಿಲ್ಯಾನಿ.

  2. OKCV Kannada Contemporary Version

    21 ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು. 22 ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮೂಗುತಿಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಜನರೆಲ್ಲಾ ಚಿನ್ನವನ್ನು ವಿಶೇಷ ಕಾಣಿಕೆಗಳನ್ನಾಗಿ ಯೆಹೋವ ದೇವರಿಗೆ ಅರ್ಪಿಸಿದರು. 29 ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.