Pular para o conteúdo
Publicidade

ಆದಿಕಾಂಡ 12:1,4,8

IRVKAN Indian Revised Version (IRV) - Kannada - 2019

ದೇವರು ಅಬ್ರಾಮನನ್ನು ಕರೆದದ್ದು

1 ಯೆಹೋವನು ಅಬ್ರಾಮನಿಗೆ, "ನೀನು, ನಿನ್ನ ಸ್ವದೇಶವನ್ನೂ, 12:1 ಅಥವಾ ಜನ್ಮಸ್ಥಳದಿಂದ.ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.

4 ಯೆಹೋವನು ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.

8 ಅವನು ಅಲ್ಲಿಂದ ಹೊರಟು ಬೇತೇಲಿನ ಪೂರ್ವದಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿ ಇಳಿದುಕೊಂಡನು. ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರುಗಳಿದ್ದವು. ಅಲ್ಲಿಯೂ ಅಬ್ರಾಮನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರಿನಲ್ಲಿ ಆರಾಧಿಸಿದನು.

Em outras traduções

  1. SII25 Bíblia Siddi

    1 ಸರ್ವೆಸ್ಪರ್ ದೆವಾನ್ ಅಬ್ರಾಹಾಮಾಕ್, ತುಜೊ ದೆಶ್ ಬಳಗ್ ಅನಿ ಬಾಬಾಚೆ ಘರ್ ಸೊಡುನ್ ಮಿಯಾ ದಾಕ್ವುತಲ್ಯಾ ದೆಸಾಕ್ ಜಾ.

    4 ಸರ್ವೆಸ್ಪರ್ ದೆವಾಚ್ಯಾ ಗೊಸ್ಟಿ ಸಾರ್ಕೆ ಅಬ್ರಾಮ್ ಭಾಯ್ರ್ ಪಡುನ್ ಗೆಲೊ, ಅನಿ ತೆಚ್ಯಾ ವಾಂಗ್ಡಾ ಲೊಟಾಬಿ ಗೆಲೊ.

    ತೊ ಹಾರಾನ್ ಶಾರ್ ಸೊಡುನ್ ಜಾತಾನಾ ಅಬ್ರಾಹಾಮಾಕ್ ಸತ್ತರಾರ್ ಪಾಂಚ್ ವರ್ಸಾ ಹೊಲ್ಲೆ ರ್‍ಹಾತಾ.

    8 ತೆನಿ ಬೆತೆಲಾಚ್ಯಾ ದಿಸ್ ಉಗಾವ್ತಲ್ಯಾ ದಿಕ್ಕಾಕ್ ಹೊತ್ತ್ಯಾ ಮಡ್ಡಿಯಾಂಚ್ಯಾ ಜಾಗ್ಯಾಕ್ ಜಾವ್ನ್ ಝೊಪ್ಡೆ ಭಾಂದ್ಲ್ಯಾನ್, ಬೆತೆಲಾಚ್ಯಾ ದಿಸ್ ಬುಡ್ತಲ್ಯಾ ದಿಕ್ಕಾಕ್ ಬೆತೆಲ್ ಅನಿ ದಿಸ್ ಉಗಾವ್ತಲ್ಯಾ ದಿಕ್ಕಾಕ್ ಆಯಿ ಮನ್ತಲೆ ಗಾಂವ್ ಹೊತ್ತೆ, ಅನಿ ತೆನಿ ಥೈಬಿ ಸರ್ವೆಸ್ಪರ್ ದೆವಾಕ್ ಬಲಿ ಭೆಟ್ವುತಲೊ ಕಟ್ಟೊ ಭಾಂದ್ಲ್ಯಾನ್, ಅನಿ ಸರ್ವೆಸ್ಪರ್ ದೆವಾಚ್ಯಾ ನಾವಾರ್ ಆರಾದನ್ ಕರ್ಲ್ಯಾನ್.

  2. OKCV Kannada Contemporary Version

    1 ಯೆಹೋವ ದೇವರು ಅಬ್ರಾಮನಿಗೆ ಹೀಗೆ ಹೇಳಿದರು, "ನೀನು ನಿನ್ನ ಸ್ವದೇಶದಿಂದಲೂ ಬಂಧುಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರಬಂದು, ನಾನು ನಿನಗೆ ತೋರಿಸುವ ನಾಡಿಗೆ ಹೋಗು.

    4 ಆದ್ದರಿಂದ ಯೆಹೋವ ದೇವರು ತನಗೆ ಹೇಳಿದ ಪ್ರಕಾರ, ಅಬ್ರಾಮನು ಹೊರಟುಹೋದನು. ಲೋಟನು ಅವನೊಂದಿಗೆ ಹೋದನು. ಅಬ್ರಾಮನು ಹಾರಾನಿನಿಂದ ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.

    8 ಅಲ್ಲಿಂದ ಅವರು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ, ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರೂ ಇರುವ ಹಾಗೆ ತನ್ನ ಗುಡಾರವನ್ನು ಹಾಕಿಕೊಂಡನು. ಅಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಆರಾಧಿಸಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.