ದೇವರು ತನ್ನ ಮಗನ ಮೂಲಕ ಮಾತನಾಡಿದ್ದು
1 ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. 2 ಆದರೆ 1:2 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ 1:2 ಇಬ್ರಿ. 3:6; 4:14; 5:8:ಮಗನ ಮುಖಾಂತರ ಮಾತನಾಡಿದ್ದಾನೆ. 1:2 ಕೀರ್ತ 2:8; ಮತ್ತಾ 21:38; 28:18:ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ 1:2 ಮೂಲ: ಯುಗಗಳನ್ನು. ಯೋಹಾ 1:3:ಇಡೀ ವಿಶ್ವವನ್ನು ಉಂಟುಮಾಡಿದನು. 3 ಈತನು ದೇವರ ಮಹಿಮೆಯ ಪ್ರಕಾಶವೂ, 1:3 2 ಕೊರಿ 4:4:ಆತನ ವ್ಯಕ್ತಿತ್ವದ ಪ್ರತಿರೂಪವೂ, 1:3 ಇಬ್ರಿ. 11:3; ಕೊಲೊ 1:17:ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ 1:3 ಇಬ್ರಿ. 9:14:ಪಾಪಗಳನ್ನು ಶುದ್ಧಿಮಾಡಿ, 1:3 ಮಾರ್ಕ 16:19; ಲೂಕ 22:69:ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು
4 ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. 1:4 ಎಫೆ 1:21; ಫಿಲಿ. 2:9:ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು. 5 ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?,
"ನೀನು 1:5 ಕೀರ್ತ 2:7; ಇಬ್ರಿ. 5:5; ಅ. ಕೃ. 13:33:ನನ್ನ ಮಗನು,
ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ."
1:5 2 ಸಮು 7:14; ಕೀರ್ತ 89:26,27: "ನಾನು ಅವನಿಗೆ ತಂದೆಯಾಗಿರುವೆನು,
ಅವನು ನನಗೆ ಮಗನಾಗಿರುವನು."
6 1:6 ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ. ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ
1:6 ಧರ್ಮೋ 32:43; ಕೀರ್ತ 97:7: "ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು" ಎಂದು ಆಜ್ಞಾಪಿಸಿದ್ದಾನೆ.
7 ದೇವದೂತರ ವಿಷಯದಲ್ಲಿ,
1:7 ಕೀರ್ತ 104:4: "ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ,
ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ" ಎಂದು ಹೇಳಿದ್ದಾನೆ.
8 ಆದರೆ ಮಗನ ವಿಷಯದಲ್ಲಿಯಾದರೋ,
"ದೇವರೇ 1:8 ಕೀರ್ತ 45:6,7:ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು.
ನೀತಿದಂಡವೇ ನಿನ್ನ ರಾಜದಂಡವಾಗಿದೆ.
9 ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ.
ಆದುದರಿಂದ ದೇವರು, ನಿನ್ನ ದೇವರೇ,
ನಿನ್ನನ್ನು ನಿನ್ನ ಜೊತೆಗಾರರಿಗಿಂತ 1:9 ಯೆಶಾ 61:1,3:ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ" ಎಂದು ಹೇಳಿದ್ದಾನೆ.
10 1:10 ಕೀರ್ತ 102:25-27: "ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ.
ಆಕಾಶವು ನಿನ್ನ ಕೈಕೆಲಸವಾಗಿದೆ,
11 ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ.
ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು
ಅವು ವಸ್ತ್ರದಂತೆ ಬದಲಾಗುವವು.
1:12 ಇಬ್ರಿ. 13:8: ನೀನಾದರೂ ಅನನ್ಯನು.
ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ" ಎಂತಲೂ ಹೇಳುತ್ತಾನೆ.
13 ಆದರೆ ಯಾವ ದೇವದೂತನಿಗಾದರೂ ದೇವರು,
1:13 ಕೀರ್ತ 110:1; ಇಬ್ರಿ. 10:13: "ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು" ಎಂಬುದಾಗಿ ಎಂದಾದರೂ ಹೇಳಿದ್ದಾನೋ?
14 ಈ ಎಲ್ಲಾ ದೇವದೂತರು ರಕ್ಷಣೆಯನ್ನು 1:14 ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ 21:7:ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ 1:14 ಆದಿ 19:16; ನ್ಯಾಯ 6:11; ದಾನಿ. 3:28; ಅ. ಕೃ. 12:7:ಸೇವಕಾತ್ಮಗಳಲ್ಲವೋ?