ಯೇಸು ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿದ್ದು ಲೇವಿವಂಶದ ಯಾಜಕರಿಗಿಂತಲೂ ಶ್ರೇಷ್ಠನು
1 7:1 ಆದಿ 14:17-20: ಈ ಮೆಲ್ಕಿಜೆದೇಕನು 7:1 ಆದಿ 33:18; ಕೀರ್ತ 76:2:ಸಾಲೇಮಿನ ಅರಸನೂ 7:1 ಅರಣ್ಯ 24:16; ಧರ್ಮೋ 32:8; ಮಾರ್ಕ 5:7:ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. 2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. "ಮೆಲ್ಕಿಜೆದೇಕ್", ಎಂಬ ಹೆಸರಿಗೆ ಮೊದಲು "ನೀತಿಯ ರಾಜ" ಎಂದೂ, ಅನಂತರ "ಸಾಲೇಮಿನ ರಾಜ" ಎಂದರೆ "ಸಮಾಧಾನದ ರಾಜ" ಎಂದೂ ಅರ್ಥ. 3 ಅವನಿಗೆ ತಂದೆಯಿಲ್ಲ, ತಾಯಿಯಿಲ್ಲ, ವಂಶಾವಳಿಯೂ ಇಲ್ಲ. 7:3 ಅಥವಾ, ಅವನು ಹುಟ್ಟಿದ್ದಾಗಲಿ ಕಾಲವಾಗಿ ಹೋದದ್ದಾಗಲಿ ಬರೆದಿಲ್ಲ. ವ. 6:ಹುಟ್ಟು, ಸಾವು ಇಲ್ಲ. ಆತನು ದೇವರ ಕುಮಾರನಿಗೆ ಹೋಲಿಕೆಯಾಗಿದು, 7:3 ಕೀರ್ತ 110:4:ನಿರಂತರವಾಗಿ ಯಾಜಕನಾಗಿರುವನು.