Pular para o conteúdo
Publicidade

ಯೋಹಾನನು 1:14-17

IRVKAN Indian Revised Version (IRV) - Kannada - 2019

14 ಆ ವಾಕ್ಯವೆಂಬುವವನು 1:14 ದೇಹಧಾರಿಯಾಗಿ, ಮಾಂಸಧಾರಿ, ಅಥವಾ, ಆತ್ಮ ಪ್ರಾಣ, ಶರೀರ ಒಳಗೊಂಡ. ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ, ಸತ್ಯದಿಂದಲೂ ತುಂಬಿದವನಾಗಿದ್ದನು.

15 ಆತನ ವಿಷಯವಾಗಿ ಯೋಹಾನನು ಸಾಕ್ಷಿಕೊಡುತ್ತಾನೆ, ಹೇಗೆಂದರೆ 1:15 ಯೋಹಾ 1:30; ಮತ್ತಾ 3:11; ಮಾರ್ಕ 1:7; ಲೂಕ 3:16:"‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದಾತನು ಈತನೇ" ಎಂದು ಘೋಷಿಸಿದನು.

16 ಯೇಸು ಕ್ರಿಸ್ತನ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17 ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಆದರೆ ಕೃಪೆಯೂ, ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು.

Em outras traduções

  1. SII25 Bíblia Siddi

    14 ಶಬ್ದ್ ಮಾನುಸ್ ಹೊಲೊ ಅನಿ ಕುರ್ಪೆನ್ ಅನಿ ಖರ್‍ಯಾನ್ ಅಮ್ಚ್ಯಾ ಮದ್ದಿ ತೆನಿ ಜಿವನ್ ಕರ್ಲ್ಯಾನ್. ಅನಿ ಅಮಿ ತೆಚಿ ಮಹಿಮಾ ಬಗಟ್ಲಾವ್. ದೆವಾಚ್ಯಾ ಎಕ್ಲ್ಯಾಚ್ ಲೆಕಾನ್ ಅಪ್ನಾಚ್ಯಾ ಬಾಬಾಕ್ನಾ ಘೆಟಲ್ಲಿ ಮಹಿಮಾ.

    15 ಜುವಾಂವಾನ್ ತೆಚ್ಯಾ ವಿಶಯಾತ್ ಸಾಕ್ಷಿ ದಿವ್ನ್, ಬೊಬ್ ಮಾರುನ್ ಸಾಂಗಟ್ಲ್ಯಾನ್" ಮಿಯಾ ಕೊನಾಚ್ಯಾ ವಿಶಯಾತ್ ಸಾಂಗಟ್ಲಾ ಕಿ ತೊಚ್ ತೊ. ತೊ ಮಾಜ್ಯಾ ಮಾನಾ ಯೆತಾ, ಖರೆ ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್, ತೊ ಮಿಯಾ ಉಪ್ಜುಚ್ಯಾಕಿ ಅದ್ದಿಚ್ಯಾನುಚ್ ಹೊತ್ತೊ.

    16 ತ್ಯೆಚ್ಯಾ ಮಾಪುಕ್ ಹೊಯ್ನಾ ತವ್ಡ್ಯಾ ಮೊಟ್ಯಾ ಕುರ್ಪೆನ್ ತೊ ಅಮ್ಕಾ ಸಗ್ಳ್ಯಾಕ್ನಿ ಕುರ್ಪೆಚ್ಯಾ ವರ್ತಿ ಕುರ್ಪಾ ದಿತಾ. 17 ದೆವಾನ್ ಖಾಯ್ದೆ ಮೊಯ್ಜೆಕ್ನಾ ದಿಲ್ಯಾನ್ ಖರೆ ಕುರ್ಪಾ ಅನಿ ಖರೆಪಾನ್ ಜೆಜು ಕ್ರಿಸ್ತಾ ವೈನಾ ಯೆತಾ.

  2. OKCV Kannada Contemporary Version

    14 ವಾಕ್ಯವೆಂಬುವವರು ದೇಹಧಾರಿಯಾಗಿ ನಮ್ಮ ಮಧ್ಯದಲ್ಲಿ ವಾಸಿಸಿದರು. ನಾವು ಅವರ ಮಹಿಮೆಯನ್ನು ಕಂಡೆವು. ಆ ಮಹಿಮೆಯು ತಂದೆಯಿಂದ ಬಂದ ಏಕೈಕ ಪುತ್ರ ಆಗಿರುವವರಿಗೆ ಇರತಕ್ಕ ಮಹಿಮೆ. ಆ ವಾಕ್ಯವೆಂಬುವವರು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿದ್ದರು.

    15 "ಅವರನ್ನು ಕುರಿತು ಯೋಹಾನನು ಸಾಕ್ಷಿ ಕೊಡುತ್ತಾ, ‘ನನ್ನ ಬಳಿಕ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದವರು ಇವರೇ," ಎಂದು ಘೋಷಿಸಿದನು. 16 ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಪಡೆದೆವು. 17 ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.