41 ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ "ನಾವು ಮೆಸ್ಸೀಯನನ್ನು ಕಂಡುಕೊಂಡೆವು" (ಮೆಸ್ಸೀಯನು ಎಂದರೆ 1:41 ಕ್ರಿಸ್ತನು ಎಂದರೆ ಅಭಿಷೇಕ ಹೊಂದಿದವನು, ಬರಬೇಕಾದ ರಕ್ಷಕನು. ಕ್ರಿಸ್ತನು) ಎಂದು ಹೇಳಿ, 42 ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಅವನನ್ನು ನೋಡಿ "ನೀನು ಯೋಹಾನನ ಮಗನಾದ ಸೀಮೋನನು. ಇನ್ನು ಮೇಲೆ ನೀನು ‘ಕೇಫ’ ಎಂದು ಕರೆಯಲ್ಪಡುವಿ" ಎಂದು ಹೇಳಿದನು. (ಕೇಫ ಎಂದರೆ 1:42 ಪೇತ್ರ ಎಂದರೆ ಗುಂಡು ಅಥವಾ ಬಂಡೆಗಲ್ಲು. ಮತ್ತಾ 16:18:ಪೇತ್ರ ಇಲ್ಲವೆ ಬಂಡೆ ಎಂದು ಅರ್ಥ)