21 ಆಗ ಮಾರ್ಥಳು ಯೇಸುವಿಗೆ, 11:21 ಯೋಹಾ 11:32:"ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ. 22 ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು" ಎಂದು ಹೇಳಿದಳು. 23 ಯೇಸು ಆಕೆಗೆ, "ನಿನ್ನ ತಮ್ಮನು ಪುನಃ ಎದ್ದು ಬರುವನು" ಎಂದು ಹೇಳಿದನು. 24 ಮಾರ್ಥಳು ಆತನಿಗೆ, "ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು" ಅಂದಳು. 25 ಯೇಸು ಆಕೆಗೆ, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು, 26 ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?" ಎಂದು ಕೇಳಿದಕ್ಕೆ, 27 ಆಕೆಯು ಆತನಿಗೆ, "ಹೌದು ಕರ್ತನೇ, 11:27 ಯೋಹಾ 6:69; ಮತ್ತಾ 16:16; ಮಾರ್ಕ 8:29; ಲೂಕ 9:20:ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ" ಅಂದಳು.