14 ಹೀಗಿರುವುದರಿಂದ, "ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ ಆತನನ್ನು ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ಸೇವಿಸಿರಿ. ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಪೂಜಿಸುತ್ತಿದ್ದ ದೇವತೆಗಳನ್ನು ನಿಮ್ಮಲ್ಲಿಂದ ತೆಗೆದುಹಾಕಿರಿ. ಯೆಹೋವನನ್ನೇ ಸೇವಿಸಿರಿ. 15 ಯೆಹೋವನನ್ನು ಆರಾಧಿಸುವುದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರೆಂಬುದನ್ನು? ಈ ಹೊತ್ತೇ ಆರಿಸಿಕೊಳ್ಳಿರಿ: ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲ ನಿವಾಸಿಗಳಾದ ಅಮೋರಿಯರ ದೇವತೆಗಳೋ ಹೇಳಿರಿ. ನಾನೂ, ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು" ಎಂದನು.
ಯೆಹೋಶುವನು 24:14,15
Em outras traduções
- SII25 Bíblia Siddi
14 ಅಸೆ ರ್‍ಹಾತಾನಾ, ತುಮಿ ಸರ್ವೆಶ್ವರ್‍ಹಾತ್ ದೆವಸ್ಪಾನ್ ಅನಿ ಭಿಂಯಾನ್ ರಾವ್ನ್ ತೆಕಾ ಫುರಾ ಮನಾನ್ ಅನಿ ಬರ್ಯಾ ಮನಾನ್ ಆರಾದನ್ ಕರಾ, ತುಮ್ಚ್ಯಾ ಪುರ್ವಜಾನಿ ಯುಪ್ರಟಿಸ್ ನ್ಹಯಿಚ್ಯಾ ತಿಕ್ಡಿನ್ ಅನಿ ಇಜಿಪ್ತ್ ದೆಸಾತ್ ಫುಜ್ಯಾ ಕರಲ್ಲಿ ದೆವಾ ತುಮ್ಚ್ಯಾಕ್ನಾ ಕಾಡುನ್ ಟಾಕಾ, ಅನಿ ಸರ್ವೆಸ್ಪರಾಕುಚ್ ಆರಾದನ್ ಕರಾ. 15 ಸರ್ವೆಸ್ಪರಾಕ್ ಆರಾದನ್ ಕರ್‍ತಲೆ ತುಮ್ಕಾ ಸಮಾ ದಿಸಿನಸ್ಲ್ಯಾರ್ ಕೊನಾಕ್ ಆರಾದನ್ ಕರುಚೆ ಮನುನ್ ಕರ್ಲ್ಯಾಸಿ? ಮನ್ತಲೆ ಅತ್ತ್ಯಾಚ್ ನಿರ್ದಾರ್ ಕರಾ, ತುಮ್ಚ್ಯಾ ಪುರ್ವಜಾನಿ ಯುಪ್ರಟಿಸ್ ನ್ಹಯಿಚ್ಯಾ ತಿಕ್ಡಿನ್ ಆರಾದನ್ ಕರಲ್ಲಿ ದೆವಾಕಿ, ಕಾಯ್ ಹ್ಯಾ ದೆಶಾಚ್ಯಾ ಮುಳಾಚ್ಯಾ ಅಮೊರಿತಾ ಲೊಕಾನಿ ಪುಜ್ಯಾ ಕರಲ್ಲಿ ದೆವಾಕಿ ಸಾಂಗಾ, "ಮಿಯಾ ಅನಿ ಮಾಜ್ಯಾ ಘರಾಚಿ ಲೊಕಾ ತರ್ ಸರ್ವೆಸ್ಪರಾಕುಚ್ ಆರಾದನ್ ಕರ್ತ್ಯಾಂವ್" ಮಟ್ಲ್ಯಾನ್.
- OKCV Kannada Contemporary Version
14 "ಆದ್ದರಿಂದ ನೀವು ಈಗ ಯೆಹೋವ ದೇವರಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಅವರನ್ನು ಸೇವಿಸಿರಿ. ನಿಮ್ಮ ಪೂರ್ವಜರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಸೇವಿಸಿದ ದೇವರುಗಳನ್ನು ತೊರೆದುಬಿಟ್ಟು ಯೆಹೋವ ದೇವರನ್ನೇ ನೀವು ಸೇವಿಸಿರಿ. 15 ಯೆಹೋವ ದೇವರನ್ನು ಸೇವಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, ಈ ಹೊತ್ತು ನೀವು ಯಾರನ್ನು ಸೇವಿಸಬೇಕೆಂದಿದ್ದೀರಿ? ನಿಮ್ಮ ಪಿತೃಗಳು ಯೂಫ್ರೇಟೀಸ್ ನದಿಯ ಆಚೆ ಸೇವಿಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆಯ್ದುಕೊಳ್ಳಿರಿ. ಆದರೆ ನಾನೂ ನನ್ನ ಮನೆಯವರೂ ಯೆಹೋವ ದೇವರನ್ನೇ ಸೇವಿಸುವೆವು," ಎಂದನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.