Pular para o conteúdo
Publicidade

ಲೂಕನು 12:16-21

IRVKAN Indian Revised Version (IRV) - Kannada - 2019

16 ಅದೇನೆಂದರೆ "ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು. 17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ, 18 ‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು, 19 ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.

20 "ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು. 21 ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ" ಅಂದನು.

ಮತ್ತಾ 6:25-34

Em outras traduções

  1. SII25 Bíblia Siddi

    16 ತನ್ನಾ ಜೆಜುನ್ ತೆಂಕಾ ಹಿ ಕಾನಿ ಸಾಂಗಟ್ಲ್ಯಾನ್ "ಬರೆ ಪಿಕ್ ಯೆಲ್ಲೆ, ಬರೆ ಶೆತ್ ಹೊತ್ತೊ ಎಕ್ ಸಾವ್ಕಾರ್ ಮಾನುಸ್ ಹೊತ್ತೊ". 17 ತೊ "ಮಿಯಾ ಮಾಜೆ ಪಿಕ್ ಖೈ ಭರುನ್ ಥವ್ಚೆ? ಮಿಯಾ ಕಾಯ್ ಕರುಚೆ?" ಮನುನ್ ಯವ್ಜುಕ್‍ ಲಾಗ್ಲೊ. 18 ಮಾನಾ ತೊ, "ಮಿಯಾ ಅಶೆ ಕರ್‍ತಾ;" ಅತ್ತಾ ಹೊತ್ತಿ ಮಾಜಿ ಗುಡಾನಾ ಮಿಯಾ ಮೊಡುನ್ ಮೊಟಿ ಕರುನ್ ಭಾಂದ್ತಾ, ತನ್ನಾ ಮಿಯಾ ಮಾಜೆ ಸಗ್ಳೆ ಪಿಕ್, ಅನಿ ಕಾಯ್ ಹಾಯ್, ತೆ, ತ್ಯಾತುರ್‍ನಿ ಭರುನ್ ಥವ್ತಾ. 19 ತನ್ನಾ ಮಾಕಾಚ್ ಮಿಯಾ "ಬರ್‍ಯಾ ನಸಿಬಾಚ್ಯಾ ಮಾನ್ಸಾ! ಸುಮಾರ್, ವರ್ಸಾನ್ ವರಿಸ್ ಪಾವಿ ಸರ್‍ಕೆ ಬರೆ ಬರೆ ತುಜೆಕ್ಡೆ ಅತ್ತಾ ಹಾಯ್ , ಖಾ, ಫಿ,ಅನಿ ಗಮ್ಮತ್ ಮಾರ್", ಮನುನ್ ಘೆತಾ ಮನುಲಾಲೊ. 20 ಖರೆ ದೆವಾನ್ ತೆಕಾ "ಪಿಶ್ಯಾ! ಆಜ್ ರಾಚ್ಚೆ ತಿಯಾ ತುಜೊ ಜಿವ್ ಮಾಕಾ ಪರ್ತುನ್ ದಿವ್ಕ್ ಪಾಜೆ; ತನ್ನಾ ತಿಯಾ ತುಕಾ ಮನುನ್ ಗೊಳಾ ಕರುಕ್ ಥವಲ್ಲೆ ಹೆ ಸಗ್ಳೆ ಕೊನಾಚೆ ಹೊತಾ?" ಮಟ್ಲ್ಯಾನ್.

    21 ಅಶೆ ಜೆಜುನ್ "ಸಾವ್ಕಾರ್ಕಿ ಗೊಳಾ ಕರುಕ್ ಘೆವ್ನ್ ಹೊತ್ತಿ ಲೊಕಾ, ದೆವಾಚ್ಯಾ ಇದ್ರಾಕ್ ಸಾವ್ಕಾರ್ ನ್ಹಯ್", ಮನುನ್ ಕಾನಿ ಸಾರ್‍ಲ್ಯಾನ್.

  2. OKCV Kannada Contemporary Version

    16 ಅನಂತರ ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: "ಒಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆ ಕೊಟ್ಟಿತು. 17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನಗಿರುವ ಬೆಳೆಯನ್ನು ಇಡುವುದಕ್ಕೆ ನನಗೆ ಸ್ಥಳವಿಲ್ಲ,’ ಎಂದು ಆಲೋಚಿಸಿ ಹೀಗೆಂದುಕೊಂಡನು,

    18 "ನಾನು ಹೀಗೆ ಮಾಡುತ್ತೇನೆ, ‘ನನ್ನ ಕಣಜಗಳನ್ನು ಮುರಿದು ಹಾಕಿಸಿ ಇನ್ನೂ ದೊಡ್ಡದಾಗಿ ಕಟ್ಟಿಸುತ್ತೇನೆ, ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ಕೂಡಿಸಿಟ್ಟುಕೊಳ್ಳುತ್ತೇನೆ. 19 ಅಲ್ಲದೆ, ನಾನು ನನ್ನ ಪ್ರಾಣಕ್ಕೆ, "ಪ್ರಾಣವೇ ಅನೇಕ ವರ್ಷಗಳಿಗಾಗಿ ನಿನಗೆ ಬಹಳ ಸರಕು ಇಡಲಾಗಿದೆ. ವಿಶ್ರಮಿಸಿಕೋ; ತಿನ್ನು, ಕುಡಿ ಮತ್ತು ಆನಂದವಾಗಿರು ಎಂದು ಹೇಳಿಕೊಳ್ಳುತ್ತೇನೆ," ’ ಎಂದುಕೊಂಡನು.

    20 "ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ! ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ತೆಗೆದುಕೊಳ್ಳಲಾಗುವುದು. ಆಗ ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದು ಹೇಳಿದರು.

    21 "ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತ ಆಗದಿರುವವನು ಇವನಂತೆಯೇ ಇರುವನು," ಎಂದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.