Pular para o conteúdo
Publicidade

ಲೂಕನು 13:12-16

IRVKAN Indian Revised Version (IRV) - Kannada - 2019

12 ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, "ನಿನ್ನ ರೋಗವು ಬಿಡುಗಡೆಯಾಯಿತು" ಎಂದು ಹೇಳಿ 13 ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು. 14 ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, "ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ" ಎಂದು ಹೇಳಿದನು. 15 ಆ ಮಾತನ್ನು ಕೇಳಿ ಕರ್ತನು ಅವನಿಗೆ, "ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ. 16 ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?" ಎಂದು ಕೇಳಿದನು.

Em outras traduções

  1. SII25 Bíblia Siddi

    12 ಜೆಜುನ್ ತ್ಯಾ ಬಾಯ್ಕೊಮನ್ಸಿಕ್ ಬಲ್ವುನ್ ಅನಿ "ಬಾಯ್ಕೊಮನ್ಸಿ, ತಿಯಾ ತುಜ್ಯಾ ಶಿಕಾತ್ನಾ ಸ್ವತಂತ್ರ್ ಹೊಲೆ!" ಮಟ್ಲ್ಯಾನ್. 13 ಜೆಜುನ್ ಅಪ್ನಾಚಿ ಹಾತಾ ತಿಚ್ಯಾ ವರ್‍ತಿ ಥವ್ಲ್ಯಾನ್, ಅನಿ ತಾಬೊಡ್ತೊಬ್ ತಿ ನಿಟ್ ಹೊವ್ನ್ ಇಬೆ ರ್‍ಹಾಲಿ, ಅನಿ ದೆವಾಕ್ ತೆನಿ ಹೊಗಳ್ಳಿನ್.

    14 ಹ್ಯಾ ಬಾಯ್ಕೊಮನ್ಸಿಕ್ ಜೆಜುನ್ ಸಬ್ಬತಾಚ್ಯಾ ದಿಸಿ ಗುನ್ ಕರಲ್ಲೆ ಬಗುನ್ ಸಿನಾಗೊಗಾಚ್ಯಾ ಅದಿಕಾರ್‍ಯಾಕ್ ರಾಗ್ ಯೆಲೊ, ಅನಿ ತೊ ಲೊಕಾಕ್ನಿ "ಅಮ್ಕಾ ಕಾಮ್ ಕರುಕ್, ಸಾ ದಿಸಾ ಹಾತ್, ತ್ಯಾ ದಿಸಾತ್ನಿ ಯೆವಾ, ಅನಿ ತುಮ್ಕಾ ತುಮಿ ಗುನ್ ಕರುನ್ ಘೆವ್ನ್ ಜಾಂವಾ, ಸಾಬ್ಬಾತಾಚ್ಯಾ ದಿಸಿ ಯೌನಕಾಸಿ!" ಮನುನ್ ಸಾಂಗುಕ್‍ಲಾಲೊ.

    15 ಧನಿಯಾನ್ ತೆಕಾ "ತುಮಿ ಕುಸ್ಡ್ಯಾನೊ! ತುಮ್ಚ್ಯಾತ್ಲೊ ಕೊನ್ಬಿ ಸಬ್ಬತಾಚ್ಯಾ ದಿಸಿ,ತುಮ್ಚ್ಯಾ ಗಾಡ್ವಾಕ್ ನಾಹೊಲ್ಯಾರ್, ಬೈಲಾಕ್ ಗೊಟ್ಯಾತ್ನಾ ಸೊಡ್ವುನ್ ಪಾನಿಯಾಕ್ ನ್ಹೆಯ್‌ನ್ಯಾಶಿ ಕಾಯ್; 16 ಅತ್ತಾ ಹಿತ್ತೆ, ಅಬ್ರಾಹಾಮಾಚ್ಯಾ ಘರಾನ್ಯಾತ್ಲ್ಯಾ ಎಕ್ಲಿಕ್ ಸೈತಾನಾನ್ ಅಟ್ರಾ ವರ್ಸಾಕ್ನಾ ಭಾಂದುನ್ ಥವ್ಲ್ಯಾನಾಯ್, ತಿ ಸಬ್ಬತಾಚ್ಯಾ ದಿಸಿ ಸುಟ್ಕಾ ಹೊವ್‍ ನ್ಹಯ್ ಕಾಯ್?" ಮನುನ್ ಜಬಾಬ್ ದಿಲ್ಯಾನ್.

  2. OKCV Kannada Contemporary Version

    12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, "ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ," ಎಂದು ಹೇಳಿ, 13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.

    14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, "ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ," ಎಂದನು.

    15 ಅದಕ್ಕೆ ಕರ್ತದೇವರು ಅವನಿಗೆ, "ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ? 16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?" ಎಂದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.