61 ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, "ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?" ಎಂದು ಆತನನ್ನು ಕೇಳಿದನು.
62 ಯೇಸುವು "ಹೌದು ನಾನೇ!
"ಇದಲ್ಲದೆ 14:62 ದಾನಿ. 3:13; ಕೀರ್ತ 110:1; ಮತ್ತಾ 24:30. ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ,
ಆಕಾಶದ ಮೇಘಗಳಲ್ಲಿ ಬರುವುದನ್ನೂ
ನೀವು ನೋಡುವಿರಿ" ಎಂದನು.