Pular para o conteúdo
Publicidade

ಮತ್ತಾಯನು 18:23,24,27,28,32,33

IRVKAN Indian Revised Version (IRV) - Kannada - 2019

23 ಆದುದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 24 ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗ 18:24 ಮೂಲ 10,000 ತಲಾಂತು; ತಲಾಂತು ಅಂದರೆ ಸುಮಾರು 3,000 ರೂಪಾಯಿ. ಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು. 27 ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು. 28 ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಬೆಳ್ಳಿ ನಾಣ್ಯ ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲ ತೀರಿಸು’ ಎಂದು ಹೇಳಿದನು. 32 ಆಗ ಅವನ ಒಡೆಯನು ಅವನನ್ನು ಕರಸಿ, ‘ಓ, ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ? 33 ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ,

Em outras traduções

  1. SII25 Bíblia Siddi

    23 ಕಶ್ಯಾಕ್ ಸರ್ಗಾಚೊ ರಾಜ್ ಮಟ್ಲ್ಯಾರ್, ಅಶೆ ಎಗ್ದಾ ಎಕ್ ರಾಜಾ ಹೊತ್ತೊ, ತೆನಿ ಅಪ್ನಾಚ್ಯಾ ಆಳಾಂಚೊ ಲೆಕ್ಕ್ ಇಚಾರುಚೆ ಮನುನ್ ನಿರ್‍ದಾರ್ ಕರ್‍ಲ್ಯಾನ್. 24 ತೆನಿ ಲೆಕ್ಕ್ ಕರುಕ್ ಚಾಲು ಕರಲ್ಲ್ಯಾ ತನ್ನಾ , ರಿನ್ ದಿತಲ್ಯಾತ್ಲ್ಯಾ ಎಕ್ಲ್ಯಾಕ್ ತೆಚೆಕ್ಡೆ ಘೆವ್ನ್ ಯೆಲ್ಯಾನಿ ತೆನಿ ಕರೊಡಾನಿ18:24 ಮುಳ್ ಪಾಠ್,ಧಾ ಹಜಾರ್ ಲಾಲೆಂತಾ ಮನ್ತಾ ಮಟ್ಲ್ಯಾರ್, ಅಂದಾಜ್ ಪಾಂಚ್ ಕರೊಡ್ ರುಪಯ್ ಹೊತಾ, ರಿನ್ ಫೆಡ್ತಲೆ ಹೊತ್ತೆ. 27 ರಾಜಾಕ್ ತ್ಯಾ ಸೆವಕಾಚೊ ಪಾಪ್ ದಿಸ್ಲೊ. ತೆಚೆಸಾಟ್ನಿ ರಾಜಾನ್ ತೆಚೆ ಸಗ್ಳೆ ರಿನ್ ಸುಟ್ ಕರ್‍ಲ್ಯಾನ್ ಅನಿ ತೆಕಾ ಸೊಡುನ್ ದಿಲ್ಯಾನ್.

    28 ತನ್ನಾ ತೊ ಸೆವಕ್ ಭಾಯ್ರ್ ಗೆಲೊ, ಅನಿ ಜಾತಾನಾ ತೆಕಾ ತೆಚ್ಯಾ ವಾಂಗುಡ್ಚೊ ಎಕ್ ಆಳ್ ಗಾವ್ಲೊ. ತೆನಿ ತೆಕಾ ಎಕ್ ಸೆಂಬರ್ ರುಪಯ್ ರಿನ್ ದಿತಲೆ ಹೊತ್ತೆ. ತನ್ನಾ ತೆನಿ ತೆಕಾ ಧರ್‍ಲ್ಯಾನ್, ಅನಿ ತೆಚೊ ನರ್‍ಡೊ ಹಿಚ್ಕುನ್, ಮಾಜೆ ದಿತಲೆ ಹಾಯ್ ತೆ ಅತ್ತಾಚ್ ಮಾಕಾ ದಿ. ಮನುನ್ ಸಾಂಗುಕ್ ಲಾಗ್ಲೊ. 32 ತನ್ನಾ ರಾಜಾನ್ ತ್ಯಾ ಆಳಾಕ್ ಬಲ್ವುಲ್ಯಾನ್ ಅನಿ,ಕಿಮ್ಮತ್ ನಸಲ್ಲ್ಯಾ ಸೆವಕಾ ತಿಯಾ ಇಚಾರಲ್ಲ್ಯಾ ಸಾಟ್ನಿ ಸಗ್ಳೆ ತುಜೆ ರಿನ್ ಮಿಯಾ ಸುಟ್ ಕರ್‍ಲೊ. 33 ಮಿಯಾ ಕಶೆ ತುಜ್ಯಾ ವರ್‍ತಿ ದಯಾ ದಾಕ್ವುಲೊ, ತಸೆ ತಿಯಾ ತುಜ್ಯಾ ವಾಂಗುಡ್ಚ್ಯಾ ಆಳಾಕ್ ದಯಾ ದಾಕ್ವುಚೆ.

  2. OKCV Kannada Contemporary Version

    23 "ಆದ್ದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕ ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 24 ಅವನು ಲೆಕ್ಕ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಹತ್ತು ಕೋಟಿ ಚಿನ್ನದ ನಾಣ್ಯಗಳ18:24 ಗ್ರೀಕ್ ಭಾಷೆಯಲ್ಲಿ ಹತ್ತು ಸಾವಿರ ತಲಾಂತು. ದೊಡ್ಡ ಮೊತ್ತದ ಹಣ ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.

    27 ಆಗ ಅರಸನು ಸೇವಕನ ಮೇಲೆ ಕನಿಕರಪಟ್ಟು, ಅವನನ್ನು ಬಿಡುಗಡೆ ಮಾಡಿ ಅವನ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.

    28 "ಆದರೆ ಅದೇ ಸೇವಕನು ಹೊರಗೆ ಹೋಗಿ, ತನಗೆ ಸುಮಾರು ನೂರು ಬೆಳ್ಳಿ ನಾಣ್ಯಗಳನ್ನು18:28 ಒಂದು ದಿನಾರಿಯ ಬೆಳ್ಳಿ ನಾಣ್ಯವು ಒಂದು ದಿನದ ಕೂಲಿಗೆ ಸಮವಾಗಿತ್ತು ಸಾಲ ಕೊಡಬೇಕಾಗಿದ್ದ ತನ್ನ ಜೊತೆಯ ಸೇವಕರಲ್ಲಿ ಒಬ್ಬನನ್ನು ಕಂಡು, ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು,’ ಎಂದನು.

    32 "ಆಗ ಅರಸನು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ, ‘ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನ ಸಾಲವನ್ನೆಲ್ಲಾ ಮನ್ನಿಸಿದೆನು. 33 ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಸೇವಕನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೇ?’ ಎಂದು ಹೇಳಿ,

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.