Pular para o conteúdo
Publicidade

ಮತ್ತಾಯನು 9:9-13

IRVKAN Indian Revised Version (IRV) - Kannada - 2019

ಯೇಸು ಮತ್ತಾಯನನ್ನು ಕರೆದದ್ದು

9 ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, "ನನ್ನನ್ನು ಹಿಂಬಾಲಿಸು" ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.

10 ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು. 11 ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, "ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?" ಎಂದು ಕೇಳಿದರು. 12 ಯೇಸು ಅದನ್ನು ಕೇಳಿ, "ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು. 13 ನೀವು ಹೋಗಿ, ‘ನಾನು ಯಜ್ಞವನ್ನಲ್ಲ, 9:13 ಹೋಶೇ. 6:6; ಮತ್ತಾ 12:7; ಮೀಕ 6:8ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು" ಅಂದನು.

Em outras traduções

  1. SII25 Bíblia Siddi

    9 ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲಿ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲ್ಯಾ ಮಾತೆವ್ ಮನ್ತಲ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾಕ್ ತೆನಿ ಬಗಟ್ಲ್ಯಾನ್, ಜೆಜುನ್ ತೆಕಾ "ಮಾಜ್ಯಾ ವಾಂಗ್ಡಾ ಯೆ" ಮಟ್ಲ್ಯಾನ್.

    ತನ್ನಾ ಮಾತೆವ್ ಉಟ್ಲೊ ಅನಿ ತೆಚ್ಯಾ ವಾಂಗ್ಡಾ ಗೆಲೊ.

    10 ಜೆಜು ಮಾತೆವಾಚ್ಯಾ ಘರಾತ್ ಜೆವಾನ್ ಕರ್‍ತಾನಾ, ಲೈ ತೆರ್‍ಗಿ ವಸುಲಿ ಕರ್‍ತಲಿ ಲೊಕಾ, ಅನಿ ಪಾಪಿ ಲೊಕಾಬಿ ಜೆಜು ಅನಿ ಶಿಸಾಂಚ್ಯಾ ವಾಂಗ್ಡಾ ಜೆವ್ನಾಚ್ಯಾ ಪಂಗ್ತಿರ್ ಬಸಲ್ಲಿ. 11 ತನ್ನಾ ಉಲ್ಲ್ಯಾ ಫಾರಿಜೆವಾನಿ ಜೆಜುಚ್ಯಾ ಶಿಸಾಕ್ನಿ, "ತುಮ್ಚೊ ಗುರುಜಿ; ಪಾಪಿ ಅನಿ ತೆರ್‍ಗಿ ವಸುಲಿ ಕರ್‍ತಲ್ಯಾ ಲೊಕಾಂಚ್ಯಾ ವಾಂಗ್ಡಾ ಬಸುನ್ ಕಶ್ಯಾಕ್ ಜೆವ್ತಾ?" ಮನುನ್ ಇಚಾರ್‍ಲ್ಯಾನಿ.

    12 ಜೆಜುನ್ ತೆನಿ ಇಚಾರ್‍ತಲೆ ಆಯಿಕ್ಲ್ಯಾನ್, ಅನಿ ತೆಂಕಾ "ಅರಾಮ್ ಹೊತ್ತ್ಯಾಕ್ನಿ ವಗ್ದುಳ್ಯಾಚಿ ಗರಜ್ ನಾ. ಜೆ ಕೊನ್ ಶಿಕ್ ಹಾತ್ ತೆಂಕಾ ಎವ್ಡಿಚ್ ವಗ್ದುಳ್ಯಾಚಿ ಗರಜ್ ಹಾಯ್. 13 ಜಾವಾ, ಅನಿ ಪವಿತ್ರ್ ಪುಸ್ತಕ್, ಮಾಕಾ ದಯಾ ಪಾಜೆ, ಜನಾವರಾಂಚಿ ಬಲಿ ನಕ್ಕೊ ಮನುನ್ ಸಾಂಗಲ್ಲ್ಯಾಚೊ ಅರ್ತ್‍ ಕಾಯ್ ಮನುನ್ ಹುಡ್ಕುನ್‍ ಕಾಡಾ. ಮಿಯಾ ಧರ್ಮಾನಿ ಚಲ್ತಲ್ಯಾ ಲೊಕಾಂಚ್ಯಾ ಸಾಟ್ನಿ ಯೆವ್ಕ್ ನಾ, ಪಾಪಿ ಲೊಕಾಂಚ್ಯಾ ಸಾಟ್ನಿ ಯೆಲಾ". ಮನುನ್ ಜಬಾಬ್ ದಿಲ್ಯಾನ್.

  2. OKCV Kannada Contemporary Version

    9 ಯೇಸು ಅಲ್ಲಿಂದ ಹಾದುಹೋಗುತ್ತಿದ್ದಾಗ, ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವುದನ್ನು ಕಂಡು ಅವನಿಗೆ, "ನನ್ನನ್ನು ಹಿಂಬಾಲಿಸು," ಎಂದು ಹೇಳಿದರು. ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.

    10 ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ಅಪಖ್ಯಾತಿಯ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು. 11 ಫರಿಸಾಯರು ಇದನ್ನು ಕಂಡು, "ನಿಮ್ಮ ಬೋಧಕನು ಸುಂಕದವರ ಮತ್ತು ಅಪಖ್ಯಾತಿಯ ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?" ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.

    12 ಆದರೆ ಯೇಸು ಇದನ್ನು ಕೇಳಿ ಅವರಿಗೆ, "ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ. 13 ಆದರೆ ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ,’9:13 ಹೋಶೇ 6:6 ಎಂಬುದರ ಅರ್ಥವನ್ನು ಕಲಿತುಕೊಳ್ಳಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ," ಎಂದು ಹೇಳಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.