Pular para o conteúdo
Publicidade

ಅರಣ್ಯಕಾಂಡ 13:30-33

IRVKAN Indian Revised Version (IRV) - Kannada - 2019

30 ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, "ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ" ಎಂದು ಹೇಳಿದನು. 31 ಆದರೆ ಅವನ ಜೊತೆಯಲ್ಲಿ ಹೋದವರು, "ಆ ಜನರು ನಮಗಿಂತ ಬಲಿಷ್ಠರು; ಅವರನ್ನು ಜಯಿಸಲು ನಮಗೆ ಶಕ್ತಿಸಾಲುವುದಿಲ್ಲ" ಎಂದು ಹೇಳಿದರು.

32 ಅದಲ್ಲದೆ ಇವರು ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, "ನಾವು ಸಂಚರಿಸಿ ನೋಡಿದ ದೇಶವು ತನ್ನಲ್ಲಿ ವಾಸಿಸುವವರನ್ನು ನುಂಗಿಬಿಡುತ್ತದೆ. ಅದಲ್ಲದೆ ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು. 33 ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ13:33 ನೆಫೀಲಿಯ ರಾಕ್ಷಸಾಕಾರದವರು. ವಂಶದವರಾದ ಉನ್ನತ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆ ಎಂದು ತಿಳಿದುಕೊಂಡೆವು. ಅವರಿಗೂ ನಾವು ಹಾಗೆಯೇ ಕಾಣಿಸಿದೆವು" ಎಂದು ಹೇಳಿದರು.

Em outras traduções

  1. OKCV Kannada Contemporary Version

    30 ನಂತರ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ, "ನಾವು ತಕ್ಷಣವೇ ಏರಿಹೋಗಿ ಅದನ್ನು ಸ್ವಾಧೀನ ಮಾಡಿಕೊಳ್ಳೋಣ. ಏಕೆಂದರೆ ಅದನ್ನು ಜಯಿಸಲು ನಾವು ನಿಜವಾಗಿಯೂ ಶಕ್ತರಾಗಿದ್ದೇವೆ," ಎಂದನು.

    31 ಆದರೆ ಅವನ ಸಂಗಡ ಹೋದ ಜನರು, "ಆ ಜನರ ಬಳಿಗೆ ಹೋಗುವುದಕ್ಕೆ ನಮ್ಮಿಂದಾಗುವುದಿಲ್ಲ, ಅವರು ನಮಗಿಂತ ಬಲಿಷ್ಠರಾಗಿದ್ದಾರೆ," ಎಂದರು. 32 ಅವರು ಸಂಚರಿಸಿ ನೋಡಿದಂಥ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, "ನಾವು ಸಂಚರಿಸಿ ನೋಡಿ ಬಂದ ದೇಶವು ತನ್ನಲ್ಲಿ ವಾಸವಾಗಿರುವವರನ್ನೇ ತಿಂದುಬಿಡುವ ದೇಶವಾಗಿದೆ. ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾ ಶರೀರದ ಮನುಷ್ಯರು. 33 ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ13:33 ನೆಫೀಲಿಯ ಎಂದರೆ ಅನಾಕ್ ವಂಶ ವಂಶದವರಾದ ಮಹಾಶರೀರವುಳ್ಳ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳ ಹಾಗೆ ಇದ್ದೆವು. ಅವರ ದೃಷ್ಟಿಗೂ ನಾವು ಹಾಗೆಯೇ ಕಾಣಿಸಿದೆವು," ಎಂದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.