Pular para o conteúdo
Publicidade

ಅರಣ್ಯಕಾಂಡ 4:5,15,24,31

IRVKAN Indian Revised Version (IRV) - Kannada - 2019

5 ದಂಡು ಹೊರಡುವಾಗ, ಆರೋನನೂ ಮತ್ತು ಅವನ ಮಕ್ಕಳೂ ಒಳಗೆ ಬಂದು ಮಹಾಪವಿತ್ರಸ್ಥಾನವನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಮಂಜೂಷದ ಆಜ್ಞಾಶಾಸನವನ್ನು ಮುಚ್ಚಿಬಿಟ್ಟು, 15 ದಂಡು ಹೊರಡುವಾಗ ಆರೋನನೂ ಮತ್ತು ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು, ಮುಟ್ಟಿದರೆ ಸತ್ತು ಹೋಗುವರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ.

24 ಸೇವಾಕಾರ್ಯ ಮಾಡುವುದರಲ್ಲಿಯೂ, ಹೊರೆಗಳನ್ನು ಹೊರುವುದರಲ್ಲಿಯೂ ಗೇರ್ಷೋನ್ಯರ ಗೋತ್ರಕುಟುಂಬದವರು ಮಾಡಬೇಕಾದ ಸೇವೆ ಯಾವುದೆಂದರೆ;

31 ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕೆಲಸ ಯಾವುದೆಂದರೆ: ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಅವುಗಳ ಗದ್ದಿಗೆಕಲ್ಲುಗಳನ್ನು,

Em outras traduções

  1. OKCV Kannada Contemporary Version

    5 ಜನರು ಹೊರಡುವಾಗ, ಆರೋನನೂ, ಅವನ ಮಕ್ಕಳೂ ಒಳಗೆ ಹೋಗಿ ಪರದೆಯನ್ನು ಇಳಿಸಿ, ಅದರಿಂದ ಒಡಂಬಡಿಕೆಯ ಮಂಜೂಷವನ್ನು ಮುಚ್ಚಿ,

    15 "ಆರೋನನು ಮತ್ತು ಅವನ ಪುತ್ರರು ಪರಿಶುದ್ಧ ಸ್ಥಳವನ್ನೂ, ಪರಿಶುದ್ಧಸ್ಥಳದ ಎಲ್ಲಾ ಸಲಕರಣೆಗಳನ್ನೂ ಮುಚ್ಚಿದ ಮೇಲೆ, ಪಾಳೆಯವು ಹೊರಡುವಾಗ ಕೊಹಾತ್ಯರು ಅದನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರವೇಶಿಸಬೇಕು. ಆದರೆ ಅವರು ಸಾಯದೆ ಇರಬೇಕಾದರೋ, ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ದೇವದರ್ಶನದ ಗುಡಾರದಲ್ಲಿ ಕೊಹಾತ್ಯನ ಪುತ್ರರ ಹೊರೆಗಳು ಇವೇ ಆಗಿವೆ.

    24 "ಗೇರ್ಷೋನ್ಯರ ಕುಟುಂಬಗಳ ಸೇವೆಯೂ ಜವಾಬ್ದಾರಿಕೆ ಯಾವುದೆಂದರೆ,

    31 ದೇವದರ್ಶನದ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವುದಕ್ಕೆ ನೀಡಿದ ಅಪ್ಪಣೆಯು ಏನೆಂದರೆ: ಗುಡಾರದ ಹಲಿಗೆಗಳೂ ಅದರ ಅಡ್ಡ ದಂಡ ಅದರ ಕಂಬಗಳ ಆಧಾರಗಳೂ ಅದರ ಗದ್ದಿಗೇ ಕಲ್ಲುಗಳೂ

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.