5 14:5 ಗಲಾ. 4:10ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ವಿಶೇಷವೆಂದೆಣಿಸುತ್ತಾನೆ; ಮತ್ತೊಬ್ಬನು ಎಲ್ಲಾ ದಿನಗಳನ್ನೂ ವಿಶೇಷವೆಂದೆಣಿಸುತ್ತಾನೆ; 14:5 ರೋಮಾ. 14:23ಪ್ರತಿಯೊಬ್ಬನು ತನ್ನ ತನ್ನ ಮನಸ್ಸಿನಲ್ಲಿ ಚಂಚಲಪಡದೆ ದೃಢವಾಗಿರಲಿ. 6 ದಿನವನ್ನು ಆಚರಿಸುವವನು ಕರ್ತನಿಗಾಗಿ ಅದನ್ನು ಆಚರಿಸುತ್ತಾನೆ. ತಿನ್ನುವವನು ಕರ್ತನಿಗಾಗಿ ತಿನ್ನುತ್ತಾನೆ; 14:6 1 ಕೊರಿ 10:30,31; 1 ತಿಮೊ. 4:3,4ಅವನು ದೇವರನ್ನು ಸ್ತುತಿಸುತ್ತಾನಲ್ಲಾ. ತಿನ್ನದವನು ಸಹ ಕರ್ತನಿಗಾಗಿಯೇ ತಿನ್ನದೆ ದೇವರನ್ನು ಸ್ತುತಿಸುತ್ತಾನೆ.