Pular para o conteúdo
Publicidade

ರೂತಳು 1:1,16,17,20,21

IRVKAN Indian Revised Version (IRV) - Kannada - 2019

ರೂತಳು ಅತ್ತೆಯೊಡನೆ ಯೆಹೂದ ದೇಶಕ್ಕೆ ಬಂದದ್ದು

1 ನ್ಯಾಯಸ್ಥಾಪಕರು ಆಳುತ್ತಿದ್ದ ಕಾಲದಲ್ಲಿ ಒಮ್ಮೆ ದೇಶದಲ್ಲಿ ಬರ ಬಂದಿದ್ದರಿಂದ ಯೆಹೂದ ಪ್ರಾಂತ್ಯದ ಬೇತ್ಲೆಹೇಮಿನವನೊಬ್ಬನು ತನ್ನ ಹೆಂಡತಿ, ಇಬ್ಬರು ಪುತ್ರರ ಸಹಿತವಾಗಿ ಮೋವಾಬ್‍ ದೇಶದಲ್ಲಿ ವಾಸಮಾಡುವುದಕ್ಕಾಗಿ ಹೊರಟುಹೋದನು.

16 ಆಕೆಯು, "ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. 17 ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನ್ನನ್ನು ಹೆಚ್ಚಾಗಿ ಶಿಕ್ಷಿಸಲಿ" ಎಂದಳು. 20 ಆಕೆಯು ಅವರಿಗೆ, "ನನ್ನನ್ನು ನವೊಮಿಯೆಂದು ಕರೆಯಬೇಡಿರಿ; ನನ್ನನ್ನು ‘ಮಾರಾ’ (ಕಹಿ) ಎಂದು ಕರೆಯಿರಿ. ಏಕೆಂದರೆ, ಸರ್ವಶಕ್ತನಾದ ದೇವರು ಬಹಳ ತೀಕ್ಷ್ಣವಾಗಿ ನನ್ನ ಜೀವಿತವನ್ನು ಮಾರ್ಪಡಿಸಿದ್ದಾನೆ. 21 ಸಿರಿವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಹಿಂತಿರುಗುವಂತೆ ಮಾಡಿದನು. ಯೆಹೋವನು ನನಗೆ ವಿರೋಧವಾಗಿದ್ದಾನೆ, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಹೀಗಿರುವಾಗ ನೀವು ನನ್ನನ್ನು ನವೊಮಿಯೆಂದು ಕರೆಯುವುದು ಸರಿಯೇ" ಅಂದಳು.

Em outras traduções

  1. SII25 Bíblia Siddi

    1 ನ್ಯಾಯ್ ಕರ್‍ತಲ್ಯಾಂಚ್ಯಾ ರಾಜ್ವಡ್ಕಿಚ್ಯಾ ಎಳಾರ್, ಇಜ್ರಾಯೆಲ್ ದೆಸಾತ್ ಬರ್‍ಗಾಲ್ ಯೆಲ್ಲ್ಯಾ ಸಾಟ್ನಿ, ಜುದಾಂಚ್ಯಾ ಪ್ರಾಂತ್ಯಾಚೊ ಎಕ್ಲೊ ಮಾನುಸ್, ಅಪ್ನಾಚಿ ಬಾಯ್ಕೊ ಅನಿ ದೊನ್ ಲೆಕಾಕ್ನಿ ಬಲ್ವುನ್ ಘೆವ್ನ್, ಮೊವಾಬ್ ದೆಸಾಕ್ ವಸ್ತಿ ರಾವ್ಕ್ ಗೆಲೊ.

    16 ತನ್ನಾ ರುತಾನ್, ಮಾಕಾ ಪರ್‍ತುನ್ ಜಾ ಮನುನ್ ಒತ್ತಾಯ್ ಕರುನಕ್ಕೊ, ತಿಯಾ ಖಯ್ ಗೆಲ್ಯಾರ್ಬಿ ಮಿಯಾ ಥೈಚ್ ಯೆತಾ; ತಿಯಾ ವಸ್ತಿ ರ್‍ಹಾತಲ್ಯಾಕ್ಡೆಚ್ ಮಿಯಾಬಿ ವಸ್ತಿ ರ್‍ಹಾತಾ; ತುಜಿ ಲೊಕಾಚ್ ಮಾಜಿ ಲೊಕಾ ಅನಿ ತುಜೊ ದೆವುಚ್ ಮಾಜೊ ದೆವ್. 17 ತಿಯಾ ಮರ್‍ತಲ್ಯಾಕ್ಡೆಚ್ ಮಿಯಾಬಿ ಮರ್ತಾ; ಮಾಕಾಬಿ ಥೈಚ್ ಮಾಟಿ ಕರುಚೆ, ಮರಾನ್ ನಸ್ತಾನಾ ಅನಿ ದುಶ್ರ್ಯಾ ಕಾರನಾಕ್ ಮಿಯಾ ತುಕಾ ಸೊಡುನ್ ಗೆಲ್ಲೆ ಹೊಲ್ಯಾರ್ ಸರ್ವೆಸ್ಪರ್ ಮಾಕಾ ಶಿಕ್ಷ್ಯಾ ದಿಂವ್ದಿತ್.

    20 ತನ್ನಾ ನವೊಮಿನ್, ಮಾಕಾ ನವೊಮಿ ಮನುನ್ ಬಲ್ವುನಕಾಸಿ, ಸರ್ವೆಸ್ಪರಾನ್ ಮಾಕಾ ಲೈ ದುಕ್ಕ್ ದಿಲಾ, ತಸೆಹೊವ್ನ್ "ಮಾರ್‍ಹಾ"1:20 ಮಾರಾ ಮಟ್ಲ್ಯಾರ್ ಕೊಡು ಮನುನ್ ಅರ್‍ತ್. ಮನುನ್ ಬಲ್ವಾ. 21 ಮಿಯಾ ಸಾವ್ಕಾರ್ನಿ ಹೊವ್ನ್ ಗೆಲೊ, ಸರ್ವೆಸ್ಪರಾನ್ ಮಾಕಾ ಕಾಯ್ಬಿ ನತ್ತಿ ಕರುನ್ ಪರ್‍ತುನ್ ಹಾನ್ಲ್ಯಾನ್, ಸರ್ವೆಸ್ಪರ್ ಮಾಜ್ಯಾ ವಿರೊಧ್ ಹೊವ್ನ್ ಹಾಯ್, ಸರ್ವೆಸ್ಪರಾನ್ ಮಾಕಾ ದುಕ್ವುಲ್ಯಾನ್; ಅಸೆ ರ್‍ಹಾತಾನಾ, ತುಮಿ ಮಾಕಾ ನವೊಮಿ ಮನುನ್ ಬಲ್ವುಕ್ ಕಸೆ ಹೊತಾ? ಮಟ್ಲಿನ್.

  2. OKCV Kannada Contemporary Version

    1 ನ್ಯಾಯಸ್ಥಾಪಕರು ಆಳುತ್ತಿದ್ದ ಆ ದಿನಗಳಲ್ಲಿ ಇಸ್ರಾಯೇಲ್ ದೇಶದೊಳಗೆ ಬರ ಉಂಟಾಗಿದ್ದಾಗ, ಯೆಹೂದದ ಬೇತ್ಲೆಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ತನ್ನ ಇಬ್ಬರು ಪುತ್ರರೊಂದಿಗೆ ಮೋವಾಬ್ ದೇಶದಲ್ಲಿ ಸ್ವಲ್ಪ ಕಾಲ ವಾಸಮಾಡಬೇಕೆಂದು ಹೋದನು.

    16 ಅದಕ್ಕೆ ರೂತಳು, "ನಿಮ್ಮನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡಿರಿ. ಏಕೆಂದರೆ ನೀವು ಎಲ್ಲಿ ಹೋಗುವಿರೋ ನಾನು ಅಲ್ಲಿಗೇ ಬರುವೆನು. ನೀವು ಎಲ್ಲಿ ಇಳುಕೊಳ್ಳುವಿರೋ ನಾನು ಅಲ್ಲಿ ಇಳುಕೊಳ್ಳುವೆನು. ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು. 17 ನೀವು ಎಲ್ಲಿ ಸಾಯುತ್ತೀರೋ ಅಲ್ಲಿಯೇ ನಾನು ಸಾಯುವೆನು. ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಿಂದಲ್ಲದೆ ನಾನು ನಿಮ್ಮನ್ನು ಅಗಲಿದರೆ ಯೆಹೋವ ದೇವರು ನನಗೆ ಬೇಕಾದದ್ದನ್ನು ಮಾಡಲಿ," ಎಂದಳು.

    20 ಆಗ ಆಕೆಯು ಅವರಿಗೆ, "ನನ್ನನ್ನು ‘ನೊವೊಮಿ’1:20 ನೊವೊಮಿ ಎಂದರೆ ರಮಣೀಯ ಎಂದು ಕರೆಯಬೇಡಿರಿ. ಮಾರಾ1:20 ಮಾರಾ ಎಂದರೆ ಕಹಿ ಎಂದು ಕರೆಯಿರಿ ಏಕೆಂದರೆ ಸರ್ವಶಕ್ತರು ನನ್ನನ್ನು ಬಹು ದುಃಖದಿಂದ ನಡೆಸಿದರು. 21 ನಾನು ಪರಿಪೂರ್ಣಳಾಗಿ ಹೊರಟುಹೋದೆನು. ಯೆಹೋವ ದೇವರು ನನ್ನನ್ನು ಏನೂ ಇಲ್ಲದೆ ಬರಮಾಡಿದ್ದಾರೆ. ಯೆಹೋವ ದೇವರು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತರಾದ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವುದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವುದು ಸರಿಯೇ?" ಎಂದಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute