Pular para o conteúdo
Publicidade

ಯಾಕೋಬನು 2:14-17,26

IRVKAN Indian Revised Version (IRV) - Kannada - 2019

ನಂಬಿಕೆಯೊಂದೇ ಸಾಲದು ಅದರಂತೆ ನಡೆಯಬೇಕೆಂಬ ಬೋಧನೆ

14 ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು 2:14 ಯಾಕೋಬ. 1:22:ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ? 15 ನಿಮ್ಮಲ್ಲಿ 2:15 ಯೋಬ. 31:19,20:ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ, 16 ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ "ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ" ಎಂದು 2:16 1 ಯೋಹಾ 3:17,18:ಹೇಳಿದರೆ ಪ್ರಯೋಜನವೇನು? 17 ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು. 26 ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿದೆ.

Em outras traduções

  1. SII25 Bíblia Siddi

    14 ಮಾಜ್ಯಾ ಭಾವಾನು ಭೆನಿಯಾನು, ಎಕ್ ಮಾನುಸ್ ಅಪ್ನಾಕ್ ವಿಶ್ವಾಸ್ ಹಾಯ್ ಮನುನ್ ತೊಂಡಾನ್ ಸಾಂಗ್ತಾ, ಖರೆ ಕಾಮಾನಿ ದಾಕ್ವಿನಸ್ಲ್ಯಾರ್ ಕಾಯ್ ಫಾಯ್ದೊ? ತ್ಯಾ ವಿಶ್ವಾಸಾನ್ ತೆಕಾ ಸುಟ್ಕಾ ದಿವ್ಕ್ ಹೊತಾ ಕಾಯ್? 15 ಎಕ್ ಎಳಾರ್ ಎಕ್ ಭಾವಾಕ್ ನಾತರ್ ಭೆನಿಕ್ ನೆಸುಕ್ ಕಪ್ಡೆ ಅನಿ ದಿಸಾಚ್ಯಾ ಪೊಟಾಚೆ ಖಾನ್ ನಾ ಹೊಲ್ಯಾರ್, 16 ತೆಂಕಾ ಗರಜ್ ಹೊತ್ತೆ ತೆಂಕಾ ದಿಯ್ನಸ್ತಾನಾ, ತುಮ್ಚ್ಯಾತ್ಲ್ಯಾ ಕೊನ್‍ಬಿ ಎಕ್ಲ್ಯಾನ್ ತೆಂಕಾ ಸಮಾದಾನಾನ್ ಜಾವಾ ಅನಿ ಹುನ್ಹುನಿತ್ ರ್‍ಹಾವಾ ಅನಿ ಪೊಟ್‍ಭರ್ ಜೆವಾ ಮನುನ್ ಸಾಂಗ್ಲ್ಯಾರ್ ಕಾಯ್ ಫಾಯ್ದೊ? 17 ಅಸೆ ಕಾಮಾಂಚ್ಯಾ ವೈನಾ ದಾಕ್ವಿನಸಲ್ಲೊ ವಿಶ್ವಾಸ್ ಜಿವ್ ನಸಲ್ಲ್ಯಾ ಸಾರ್ಕೊ.

    26 ಕಶ್ಯಾಕ್ ಮಟ್ಲ್ಯಾರ್ ಕಸೆ ಆತ್ಮೊ ನಸ್ತಾನಾ ಆಂಗ್ ಮರಲ್ಲೆ ರ್‍ಹಾತಾ, ತಸೆಚ್ ಕಾಮಾ ನಸಲ್ಲೊ ವಿಶ್ವಾಸ್‌ಬಿ ಮರಲ್ಲೊ ಹೊವ್ನ್ ಹಾಯ್.

  2. OKCV Kannada Contemporary Version

    14 ನನ್ನ ಪ್ರಿಯರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ? 15 ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ದಿನದ ಆಹಾರವೂ ಇಲ್ಲದಿರುವಾಗ, 16 ನಿಮ್ಮಲ್ಲಿ ಒಬ್ಬನು ಅವನಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ, "ಸಮಾಧಾನದಿಂದ ಹೋಗಿರಿ, ಚಳಿ ಕಾಯಿಸಿಕೊಳ್ಳಿರಿ, ಹೊಟ್ಟೆ ತುಂಬಿಸಿಕೊಳ್ಳಿರಿ," ಎಂದು ಹೇಳಿದರೆ ಪ್ರಯೋಜನವೇನು? 17 ಅದರಂತೆಯೇ, ಕ್ರಿಯೆಗಳಿಲ್ಲದ ನಂಬಿಕೆಯು, ಕ್ರಿಯೆಗಳು ಇಲ್ಲದಿರುವುದರಿಂದ ಸತ್ತ ನಂಬಿಕೆಯಾಗಿರುತ್ತದೆ.

    26 ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ, ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿರುತ್ತದೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.