ಹಿಂಸೆಪಡುವ ಕ್ರೈಸ್ತರಿಗೆ ಪ್ರೋತ್ಸಾಹವು
7 ಸಹೋದರರೇ, ಕರ್ತನು ಬರುವ ತನಕ ತಾಳ್ಮೆಯಿಂದಿರಿ. ವ್ಯವಸಾಯಮಾಡುವವರನ್ನು ನೋಡಿರಿ, ಅವನು ಭೂಮಿಯ ಬೆಲೆಬಾಳುವ ಫಲಕ್ಕಾಗಿ ಕಾದಿದ್ದು 5:7 ಧರ್ಮೋ 11:14:ಮುಂಗಾರು, ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯಿಂದಿರುವನು. 8 ನೀವೂ ತಾಳ್ಮೆಯಿಂದಿರಿ, 5:8 1 ಥೆಸ. 3:13:ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ 5:8 1 ಪೇತ್ರ. 4:7; ರೋಮಾ. 13:11, 12; ಫಿಲಿ. 4:5; ಇಬ್ರಿ. 10:25, 37:ಕರ್ತನ ಬರೋಣವು ಹತ್ತಿರವಾಯಿತು.