Pular para o conteúdo
Publicidade

1 ಕೊರಿಂಥದವರಿಗೆ 11:23-26

OKCV Kannada Contemporary Version

23 ನಾನು ಕರ್ತ ದೇವರಿಂದಲೇ ಪಡೆದದ್ದನ್ನು ನಿಮಗೆ ಒಪ್ಪಿಸಿಕೊಟ್ಟಿದ್ದೇನೆ: ಕರ್ತ ಆಗಿರುವ ಯೇಸು ತಮ್ಮನ್ನು ಹಿಡಿದುಕೊಡಲಾದ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು, 24 ಸ್ತೋತ್ರಮಾಡಿ ಮುರಿದು, "ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ," ಎಂದರು. 25 ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ. ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ," ಎಂದರು. 26 ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ, ಕರ್ತದೇವರ ಮರಣವನ್ನು ಅವರು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.

Em outras traduções

  1. SII25 Bíblia Siddi

    23 ಜೆ ಕಾಯ್ ಧನಿಯಾಕ್ನಾ ಮಿಯಾ ಘೆಟ್ಲಾ ತೆ ಮಿಯಾ ತುಮ್ಕಾ ಸಾಂಗುನ್ ದಿಲಾ. ತೆ ಕಾಯ್ ಮಟ್ಲ್ಯಾರ್, ಧನಿಯಾ ಜೆಜುಕ್ ದುಸ್ರ್ಯಾಂಚ್ಯಾ ಹಾತಿತ್ ಧರುನ್ ದಿವ್ನ್ ಹೊಲೆ, ತ್ಯಾ ದಿಸ್ ರಾಚ್ಚೆ ಭಾಕ್ರಿ ಘೆಟ್ಲ್ಯಾನ್. 24 ದೆವಾಕ್ ಧನ್ಯವಾದ್ ದಿವ್ನ್ ತಿ ಮೊಡ್ಲ್ಯಾನ್ ಅನಿ ಮಟ್ಲ್ಯಾನ್, "ಹೆ ಮಾಜೆ ಆಂಗ್ ತುಮ್ಚ್ಯಾ ಸಾಟ್ನಿ ದಿತಲೆ ಹೆ ಮಾಜ್ಯಾ ಯಾದಿಸಾಟ್ನಿ ಕರಾ" 25 ತಸೆಚ್ ಜೆವಾನ್ ಹೊವ್ನಗೆತ್ ರ್‍ಹಾತಾನಾ, ತೆನಿ ಆಯ್ದಾನ್ ಘೆಟ್ಲ್ಯಾನ್ ಅನಿ ಅಸೆ ಮಟ್ಲ್ಯಾನ್, "ಹೆ ಆಯ್ದಾನ್ ಮಾಜ್ಯಾ ರಗ್ತಾನ್ ಘಟ್ಟ್ ಕರಲ್ಲೊ ನ್ಹವೊ ಕರಾರ್, ಕವ್ಡೆಂದಾ ತಿ ತುಮಿ ಫಿತ್ಯಾಶಿ ತವ್ಡೆಂದಾ ತೆ ಮಾಜ್ಯಾ ಯಾದಿಸಾಟ್ನಿ ಕರಾ".

    26 ಕಶ್ಯಾಕ್ ಮಟ್ಲ್ಯಾರ್ ಕವ್ಡೆಂದಾ ತುಮಿ ಹಿ ಭಾಕ್ರಿ ಖಾತ್ಯಾಶಿ ಅನಿ ಹ್ಯಾ ಆಯ್ದಾನಾತ್ಲೆ ಫಿತ್ಯಾಶಿ ತವ್ದೆಂದಾ ಧನಿಯಾಚೆ ಮರಾನ್ ತೊ ಯೆಯ್‍ ಪತರ್ ತುಮಿ ಪ್ರಚಾರ್ ಕರ್ತ್ಯಾಸಿ.

  2. IRVKAN Indian Revised Version (IRV) - Kannada - 2019

    23 ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು 11:23 1 ಕೊರಿ 15:3, ಗಲಾ. 1:12ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು, 24 "ಇದು 11:24 ಅಥವಾ, ನಿಮಗೋಸ್ಕರ ಮುರಿಯಲ್ಪಡುವನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ 11:24 ಅಥವಾ, ಮುರಿದು ತಿನ್ನಿರಿಹೀಗೆ ಮಾಡಿರಿ" ಅಂದನು. 25 ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, 11:25 ಅಥವಾ ಪಾತ್ರೆಯಲ್ಲಿರುವುದು"ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ" ಅಂದನು. 26 ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು 11:26 ಯೋಹಾ 21:22ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.