Pular para o conteúdo
Publicidade

1 ಕೊರಿಂಥದವರಿಗೆ 2:11-13

OKCV Kannada Contemporary Version

11 ಮನುಷ್ಯನ ಆಲೋಚನೆಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವುದು? ಹಾಗೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಗ್ರಹಿಸಲಾರರು. 12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮರನ್ನು ಹೊಂದಿದ್ದೇವೆ. 13 ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ.

Em outras traduções

  1. SII25 Bíblia Siddi

    11 ಮಾನ್ಸಾಚ್ಯಾ ಭುತ್ತುರ್ ಹೊತ್ತ್ಯಾ ಆತ್ಮ್ಯಾಕ್ ಸೊಡುನ್ ಕೊನಾಕ್‌ಬಿ ತೆಚ್ಯಾ ವಿಶಯಾತ್ ಸಗ್ಳೆ ಗೊತ್ತ್ ರ್‍ಹಾಯ್ನಾ. ತಸೆಚ್ ದೆವಾಚ್ಯಾ ಆತ್ಮ್ಯಾಕ್ ಸೊಡುನ್ ಕೊನಾಕ್ಬಿ ದೆವಾಚ್ಯಾ ವಿಶಯಾತ್ ಸಗ್ಳೆ ಗೊತ್ತ್ ನಾ. 12 ಅಮಿ ಹ್ಯಾ ಜಗಾಚೊ ಆತ್ಮೊ ಘೆವ್ಕ್‌ನಾವ್, ಹೆಚ್ಯಾ ಬದ್ಲಾಕ್, ದೆವಾಕ್ನಾ ಯೆಲ್ಲೊ ಆತ್ಮೊ ಘೆಟ್ಲಾಂವ್, ತೆಚೆಸಾಟ್ನಿ ದೆವಾನ್ ಅಮ್ಕಾ ಫುಕೊಟ್ ಕಾಯ್ ದಿಲಾ ಮನ್ತಲೆ ಅಮಿ ಕಳ್ವುನ್ ಘೆವ್ಕ್ ಪಾಜೆ.

    13 ತೆಚೆಸಾಟ್ನಿ ಆತ್ಮೊ ಅಸಲ್ಲ್ಯಾಕ್ನಿ ಅಮಿ ಆತ್ಮಿಕ್ ಖರೆಪಾನ್ ಸೊಡ್ವುನ್ ಸಾಂಗಟಲ್ಲ್ಯಾ ಸರ್ಕೆ, ಜೆ ಕಾಯ್ ಅಮಿ ಬೊಲ್ತಾಂವ್, ತೆ ಮಾಸ್ಸಾಚ್ಯಾ ಶಾನ್‍ಪಾನಾನ್ ಶಿಕ್ವುಲ್ಲ್ಯಾ ಗೊಸ್ಟಿಯಾ ನ್ಹಯ್. ಪವಿತ್ರ್ ಆತ್ಮ್ಯಾನುಚ್ ಶಿಕ್ವುಲ್ಲ್ಯಾ ಗೊಸ್ಟಿಯಾ.

  2. IRVKAN Indian Revised Version (IRV) - Kannada - 2019

    11 ಮನುಷ್ಯನೊಳಗಿನ ಆಲೋಚನೆಗಳು 2:11 ಜ್ಞಾ. 20:27ಅವನಲ್ಲಿರುವ ಮನುಷ್ಯತ್ಮನಿಗಲ್ಲದೆ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರಾಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ. 12 ನಾವು ಇಹಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದವರಾಗಿದ್ದೇವೆ. 13 ಇವುಗಳನ್ನು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ಪವಿತ್ರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮೀಕವಾದವುಗಳನ್ನು ಆತ್ಮೀಕರಾದವರಿಗೆ ಯುಕ್ತವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.