12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮರನ್ನು ಹೊಂದಿದ್ದೇವೆ. 13 ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ. 14 ಆದರೆ ಭೌತಿಕ ಮನುಷ್ಯನು2:14 ಪೌಲನು ಮನುಷ್ಯರನ್ನು ಮೂರು ವ್ಯಕ್ತಿಗಳಾಗಿ ವಿಂಗಡಿಸಿದ್ದಾನೆ. ಮೊದಲನೆಯದಾಗಿ ತಮ್ಮ ಮನಸ್ಸಿನ ಭಾವನೆಗಳ ಬದುಕುವವರು ಮತ್ತು ದೇವರ ಆತ್ಮ ಇಲ್ಲದವರು. ಎರಡನೆಯದಾಗಿ ದೈಹಿಕ ಆಸೆಗಳನ್ನು ಅನುಸರಿಸುವವರು ದೈಹಿಕರು. ಮೂರನೆಯದಾಗಿ ಪವಿತ್ರಾತ್ಮ ದೇವರನ್ನು ಅನುಸರಿಸುವವರು ಆತ್ಮಿಕರು. ದೇವರಾತ್ಮರ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಬುದ್ಧಿಹೀನವಾಗಿ ತೋರುತ್ತವೆ. ಏಕೆಂದರೆ ಆತ್ಮಿಕ ವಿವೇಚನೆಯಿಂದ ತಿಳಿಯಬೇಕಾಗಿದ್ದ ಕಾರಣ ಅವನು ಅವುಗಳನ್ನು ತಿಳಿದುಕೊಳ್ಳಲಾರನು.
Publicidade
1 ಕೊರಿಂಥದವರಿಗೆ 2
Estes versículos te tocaram? Ore agora!
+581 estão orando agora.
Junte-se à corrente de oração.