18 ದೇವರಿಂದ ಹುಟ್ಟಿರುವವರು ಪಾಪದಲ್ಲಿ ಮುಂದುವರೆಯುವುದಿಲ್ಲವೆಂಬುದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದವರನ್ನು ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ಅಂಥವರನ್ನು ಕಾಪಾಡುವರು, ಕೆಡುಕನು ಅಂಥವರನ್ನು ಮುಟ್ಟುವುದಿಲ್ಲ. 19 ನಾವು ದೇವರ ಮಕ್ಕಳೆಂದೂ ಲೋಕವೆಲ್ಲವು ಕೆಡುಕನ ನಿಯಂತ್ರಣದಲ್ಲಿ ಇದೆ ಎಂದೂ ನಮಗೆ ಗೊತ್ತಿದೆ.