Pular para o conteúdo
Publicidade

1 ಪೇತ್ರನು 1:13-16

OKCV Kannada Contemporary Version

ಪರಿಶುದ್ಧರಾಗಿರಿ

13 ಆದ್ದರಿಂದ, ನೀವು ನಿಮ್ಮ ಮನಸ್ಸನ್ನು ಸಿದ್ಧಮಾಡಿಕೊಂಡು, ಸ್ವಸ್ಥಚಿತ್ತರಾಗಿದ್ದು ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಅಂತ್ಯದವರೆಗೆ ಇಡಿರಿ. 14 ವಿಧೇಯರಾದ ಮಕ್ಕಳಿಗೆ ತಕ್ಕಂತೆ, ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮ್ಮ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರಬೇಡಿರಿ. 15 ಆದರೆ ನಿಮ್ಮನ್ನು ಕರೆದಿರುವ ದೇವರು ಪರಿಶುದ್ಧರಾಗಿರುವ ಪ್ರಕಾರವೇ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. 16 ಏಕೆಂದರೆ, "ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು,"1:16 ಯಾಜಕ 11:44,45; 19:2 ಎಂದು ಪವಿತ್ರ ವೇದದಲ್ಲಿ ಬರೆದಿದೆ.

Em outras traduções

  1. SII25 Bíblia Siddi

    13 ತೆಚೆಸಾಟ್ನಿ ತುಮ್ಚೊ ಶಾನೆಪಾನಾಚೊ ಪಟ್ಟೊ ಭಾಂದುನ್ ಘೆವ್ನ್ ಜಾಗೆ ರಾವಾ, ಜೆಜು ಕ್ರಿಸ್ತ್ ದಿಸ್ತಲ್ಯಾ ಯೆಳಾರ್ ತುಮ್ಕಾ ಗಾವ್ನರ್ ಹಾಯ್ ತ್ಯಾ ಕುರ್ಪೆಚ್ಯಾ ದೆನ್ಗಿಯಾಂಚ್ಯಾ ವರ್ತಿ ಸಗ್ಳೊ ಬರೊಸೊ ಥವಾ.

    14 ಖಾಲ್ತಿ ಹೊವ್ನ್ ಚಲ್ತಲಿ ಪೊರಾ ತುಮಿ; ಅದ್ದಿ ಕಾಯ್ಬಿ ಕಳಿನಸಲ್ಲ್ಯಾ ಎಳಾರ್ ಕರಲ್ಲ್ಯಾ ಸಾರ್ಕೆ, ತುಮ್ಚ್ಯಾ ಬುರ್ಶ್ಯಾ ಚಾಲಿ ಸಾರ್ಕೆ ಚಲುನಕಾಸಿ. 15 ಕಸೆ ತುಮ್ಕಾ ಬಲ್ವಲ್ಲೊ ದೆವ್ ಬರೊ, ತಸೆ ತುಮಿಬಿ ತುಮ್ಚ್ಯಾ ಸಗ್ಳ್ಯಾ ಚಾಲಿತ್ನಿ ಬರೆ ಹೊವಾ, ಪವಿತ್ರ್ ಪುಸ್ತಕಾತ್; 16 "ಮಿಯಾ ಬರೊ ತಸೆ ಮನುನ್ ತುಮಿಬಿ ಬರೆ ಹೊವ್ಕ್ ಪಾಜೆ".

  2. IRVKAN Indian Revised Version (IRV) - Kannada - 2019

    13 ಆದ್ದರಿಂದ 1:13 ಲೂಕ 12:35; ಎಫೆ 6:14:ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, 1:13 1 ಪೇತ್ರ. 4:7; 1 ಥೆಸ. 5:6,8; 2 ತಿಮೊ. 4:5:ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ. 14 ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, 1:14 ಅ. ಕೃ. 17:30. ನೀವು ಮೊದಲು ಅಜ್ಞಾನಿಗಳಾಗಿದ್ದಾಗ 1:14 ರೋಮಾ. 12:2; ತೀತ. 3:3:ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ, 15 1:15 1 ಯೋಹಾ 3:3; 1 ಥೆಸ. 4:7; ಇಬ್ರಿ. 12:14:ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ. 16 ಏಕೆಂದರೆ, 1:16 ಯಾಜ 11:44; 19:2:"ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು" ಎಂದು ಬರೆದಿದೆಯಲ್ಲಾ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.